ನನ್ನ ಮಗನನ್ನ ತುಳಿದ್ರಿ ! ಭಾವುಕರಾಗಿ ನಟಿ ಲೀಲಾವತಿ ಹೇಳಿದ್ದೇನು ಗೊತ್ತಾ ?

Cinema
Advertisements

ಸ್ನೇಹಿತರೇ, ದಶಕಗಳ ಕನ್ನಡ ಚಿತ್ರರಂಗವನ್ನಾಳಿದ ನಾಯಕಿ ನಟಿಯರಲ್ಲಿ ಹಿರಿಯ ನಟಿ ಲೀಲಾವತಿ ಪ್ರಮುಖರು. ಕಳೆದ ವರ್ಷದಂತೆ ಈ ವರ್ಷವೂ ಕೂಡ ಕೊರೋನಾ ದಿಂದಾಗಿ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರು ಹಾಗೂ ಬಡವರಿಗೆ ಫುಡ್ ಕಿಟ್ ಗಳನ್ನ ನೀಡುವ ಮೂಲಕ ಸಹಾಯದ ಚಾಚಿದ್ದಾರೆ. ಈಗ ತಮ್ಮ ಜೇವನದಲ್ಲಿ ತಾವು ಎದುರಿಸಿ ಬಂದಿರುವ ಕಷ್ಟ ಸುಖಗಳ ಬಗ್ಗೆ ಹಾಗೂ ಪುತ್ರ ವಿನೋದ್ ರಾಜ್ ಅವರು ಎದುರಿಸಿದ ಕಷ್ಟ ಅವಮಾನಗಳ ಬಗ್ಗೆಯೂ ಕೂಡ ಹೇಳಿದ್ದಾರೆ. ನನ್ನ ಮಗ ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಶ್ರಮ ಜೀವಿ. ಒಬ್ಬ ತಾಯಿ ತನ್ನ ಮಗನಿಗಾಗಿ ಏನೆಲ್ಲಾ ಮಾಡುತ್ತಾಳೆ ಅದನ್ನ ನಾನು ಮಾಡಿದ್ದೇನೆ.

Advertisements

ಅವನ ಮೇಲೆ ನನಗೆ ತುಂಬಾ ಪ್ರೀತಿಯಿದೆ. ಒಂದು ವೇಳೆ ತಾಯಿಯಾಗಿ ನಾನು ಮಗನಿಗಾಗಿ ಏನೂ ಮಾಡಿಲ್ಲ ಕೆಳವರು ಹೇಳಬಹುದು, ಮಾಡಿರಬಹುದು ಅಂತ ಅನ್ನಬಹುದು. ಎಲ್ಲವೂ ಸರಿಯಾದ ಟೈಮ್ ಬಂದಾಗ ಮಾತ್ರ ತಿಳಿಯುತ್ತದೆ.ತನ್ನ ಮಕ್ಕಳಜೀವನ ಚೆನ್ನಾಗಿರಲಿ ಎಂದು ಯಾವ ತಾಯಿ ತಾನೇ ಬಯಸೋದಿಲ್ಲ ಹೇಳಿ. ಆದರೆ ಇದರ ನಡುವೆ ತುಂಬಾ ಅವಮಾನ, ಕಷ್ಟಗಳು ಎದುರಾದವು. ಅವಕಾಶ ಸಿಗಲೇಬೇಕು ಅಂತ ಏನೂ ಇರಲಿಲ್ಲ. ಆದರೆ ನಾನೆ ನನ್ನ ಮಗನಿಗೆ, ನೀನು ಜೀವನದಲ್ಲಿನ ಜಿಗುಪ್ಸೆ ಕಳೆಯಲು ವ್ಯವಸಾಯ ಮಾಡುವಂತೆ ಹೇಳಿದೆ. ಯಾವುದಾದರು ಕೆಲಸದಲ್ಲಿ ತೊಡಗಿಕೊಂಡರೆ ನೋವು ಜಿಗುಪ್ಸೆ ಇರೋದಿಲ್ಲ.

ಚಿಕ್ಕಂದಿನಿದ್ದಾಗಲೇ ಮೈಕಲ್ ಜಾಕ್ಸನ್ ನೋಡಿಕೊಂಡು ಬೆಳೆದಿದ್ದ ವಿನೋದ್ ರಾಜ್ ಡಾನ್ಸ್ ಮಾಡುವುದನ್ನ ಚೆನ್ನಾಗಿ ಕಲಿತಿದ್ದ. ಆಗಿನಿಂದಲೇ ಡ್ಯಾನ್ಸ್ ಎಂದರೆ ವಿನೋದ್ ಗೆ ತುಂಬಾ ಹುಚ್ಚು. ಆ ಚಿಕ್ಕವಯಯಸ್ಸಿಗೇನೇ ಶೋಲ್ಡರ್ ಸ್ಪಿನ್ ಡ್ಯಾನ್ಸ್ ಮಾಡೋದನ್ನ ಕಲಿತಿದ್ದ. ಡ್ಯಾನ್ಸ್ ಗಳನ್ನ ಬಹಳ ಚೆನ್ನಾಗಿ ಮಾಡುತ್ತಿದ್ದ. ಆದರೆ ನನ್ನ ಮಗ ಚೆನ್ನಾಗಿ ಮಾಡಿದ್ದರೂ, ನೀನು ಚೆನ್ನಾಗಿ ಮಾಡಿದ್ದೀಯಾ ಎಂದು ಇದುವರೆಗೂ ಕೂಡ ಒಂದು ಸಿನಿಮಾದಲ್ಲಿ ಅವಕಾಶವಾಗಲಿ, ಒಂದೊಳ್ಳೆಯ ಪಾತ್ರವಾಗಲಿ, ಅವಾರ್ಡ್ ಆಗಲಿ ನನ್ನ ಮಗನಿಗೆ ಕೊಡೋದಕ್ಕೆ ಯಾರೂ ಮನಸ್ಸು ಮಾಡಲಿಲ್ಲ. ಹಾಗಾದ್ರೆ, ಏನು ನನ್ನ ಮಗ ಚೆನ್ನಾಗಿ ಮಾಡಲಿಲ್ಲವೇ. ಅವನು ಮಾಡಿರುವ ತಪ್ಪಾದರೂ ಏನು ಎಂದು ಭಾವುಕರಾಗಿ ಮಾತನಾಡಿದ್ದಾರೆ ಹಿರಿಯ ನಟಿ ಲೀಲಾವತಿ. ಸ್ನೇಹಿತರೇ, ನಟ ವಿನೋದ್ ರಾಜ್ ಗೆ ಅನ್ಯಾಯ ಆಗಿದ್ದೆಲ್ಲಿ? ಕೆಲ ಸಿನಿಮಾಗಳಲ್ಲಿ ವಿನೋದ್ ರಾಜ್ ನಟಿಸಿದ್ದರು ಸಕ್ಸಸ್ ಸಿಗಲಿಲ್ಲ ಏಕೆ? ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ಕಾಮೆಂಟ್ ಮಾಡಿ ತಳಿಸಿ..