14 ಜಿಲ್ಲೆಗಳಿಗೆ ಲಾಕ್ ಡೌನ್ ನಿಂದ ವಿನಾಯತಿ..ನಿಮ್ಮ ಜಿಲ್ಲೆ ಇದೆಯಾ ನೋಡಿ

Advertisements

ಕೊರೋನಾ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೇ ೩ರ ತನಕ ಲಾಕ್ ಡೌನ್ ಮಾಡಲಾಗಿತ್ತು. ಈಗ ಕೆಲವೊಂದು ಜಿಲ್ಲೆಗಳಿಗೆ ಲಾಕ್ ಡೌನ್ ನಿಂದ ವಿನಾಯತಿ ಸಿಕ್ಕಿದ್ದು ಕೆಲವೊಂದು ನಿಯಮಗಳನ್ನ ಸಡಿಲ ಮಾಡಲಾಗಿದೆ. ಆದ್ರೆ ಕೆಲವೊಂದು ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರು ಇರುವುದರಿಂದ ಲಾಕ್ ಡೌನ್ ಮುಂದುವರಿಯಲಿದ್ದು ಯಾವುದೇ ವಿನಾಯತಿ ನೀಡಿಲ್ಲ.

Advertisements

ಇನ್ನು ಹಸಿರು ವಲಯ (ಗ್ರೀನ್ ಜೋನ್)ನಲ್ಲಿ 14 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಹಾಟ್ ಸ್ಪಾಟ್ ಗಳಾಗಿರುವ ಕೆಂಪು ವಲಯ (ರೆಡ್ ಜೋನ್)ಗಳಲ್ಲಿ ಲಾಕ್ ಡೌನ್ ಮೊದಲಿನಂತೆ ಮುಂದುವರಿಯಲಿದ್ದು, ಎಂದು ರಾಜ್ಯ ಸರ್ಕಾರ ಹೇಳಿದೆ.

ಇನ್ನು ಮೇ ೩ರವರೆಗೆ ಷರತ್ತು ವಿಧಿಸಿದ್ದರೂ , ಷರತ್ತುಗಳು ಅನ್ವಯವಾಗಲಿವೆ. ಹಾಗಾದ್ರೆ ಯಾವ ಜಿಲ್ಲೆಗಳಿಗೆ ವಿನಾಯತಿ ಸಿಕ್ಕಿದೆ ಷರತ್ತುಗಳೇನು ಎಂಬುದನ್ನ ನೋಡೋಣ ಬನ್ನಿ..

ರಾಮನಗರ, ರಾಯಚೂರು, ಚಾಮರಾಜನಗರ, ಕೋಲಾರ, ಚಿಕ್ಕ ಮಗಳೂರು, ಯಾದಗಿರಿ, ದಾವಣಗೆರೆ, ಹಾವೇರಿ, ಕೊಪ್ಪಳ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಕೊಡಗು, ಉಡುಪಿ ಈ ಎಲ್ಲಾ ಜಿಲ್ಲೆಗಳಿಗೆ ಲಾಕ್ ಡೌನ್ ನಿಂದ ವಿನಾಯತಿ ನೀಡಲಾಗಿದೆ. ಇನ್ನು ರಾಮನಗರದ ವಿಚಾರಕ್ಕೆ ಬಂದರೆ, ಕೈಗಾರಿಕೆಗಳು ಹಾಗೂ ಮಲ್ಟಿ ಬ್ರಾಂಡ್ ಶಾಪ್ ಗಳನ್ನ ಹೊರತುಪಡಿಸಿ ಅಂಗಡಿಗಳನ್ನ ತೆಗೆಯಲು ವಿನಾಯತಿ ನೀಡಿದ್ದಾರೆ.

ಇನ್ನು ಮೇಲೆ ಹೇಳಿದ ಜಿಲ್ಲೆಗಳಲ್ಲಿ ಶೇ.50 ಭಾಗದಷ್ಟು ಉದ್ಯೋಗಿಗಳನ್ನ ಉಪಯೋಗಿಸಿಕೊಂಡು ಕೈಗಾರಿಕೆಗಳನ್ನ ತೆರೆಯಬಹುದಾಗಿದೆ ಎಂದು ಹೇಳಲಾಗಿದೆ. ಇನ್ನು ಖಡ್ಡಾಯವಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ ಹೇಳಿದೆ. ಇನ್ನು ಹಸಿರು ವಲಯದ ಜಿಲ್ಲೆಗಳಾಗಿದ್ದರೂ ಮೇ ೩ರ ತನಕ ಎಣ್ಣೆ ಅಂಗಡಿಗಳನ್ನ ತೆರೆಯದಂತೆ ನಿಷೇಧ ಮಾಡಲಾಗಿದೆ.

ಇನ್ನು ಜಿಲ್ಲಾ ಉಸ್ತುವಾರಿ ಸಚಿವರ ನಿರ್ಧಾರದಂತೆ ಚಿಕ್ಕಬಳ್ಳಾಪುರ, ತುಮಕೂರು, ಉತ್ತರಕನ್ನಡ, ಧಾರವಾಡ ಮತ್ತು ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಸೇರಿದಂತೆ ಆರು ಜಿಲ್ಲೆಗಳಲ್ಲಿ ಅಂಗಡಿ ಮತ್ತು ಕೈಗಾರಿಕೆಗಳನ್ನ ತೆರೆಯಬಹುದಾಗಿದೆ ಆದರೆ ಇದು ಆಯಾ ಜಿಲ್ಲಾ ವಸ್ತುವಾರಿ ಸಚಿವರುಗಳ ನಿರ್ಧಾರಕ್ಕೆ ಬಿಟ್ಟದ್ದು ಎಂದು ಸರ್ಕಾರ ಹೇಳಿದೆ.

ವಿನಾಯತಿ ಇಲ್ಲದೇ ಲಾಕ್ ಡೌನ್ ಮುಂದುವರಿಯುವ ಜಿಲ್ಲೆಗಳು : ಬೆಂಗಳೂರು, ಬಾಗಲಕೋಟೆ, ಬೀದರ್, ಬೆಳಗಾವಿ,ಕಲ್ಬುರ್ಗಿ, ಮೈಸೂರು, ವಿಜಯಪುರ, ದಕ್ಷಿಣ ಕನ್ನಡ, ಈ ಜಿಲ್ಲೆಗಳಲ್ಲಿ ಇನ್ನು ಸೋಂಕಿತರು ಇರುವ ಕಾರಣ ಲಾಕ್ ಡೌನ್ ಮುಂದುವರಿಯಲಿದ್ದು, ಈ ಜಿಲ್ಲೆಗಳಿಗೆ ಯಾವುದೇ ವಿನಾಯತಿ ನೀಡಲಾಗಿಲ್ಲ.