ಕಿಡ್ನಿ ಕಸಿ, ಔಷಧಿ ಸಿಗದೆ ವೇದನೆ..ಮಗಳು ಮಾಡಿದ ವಿಡಿಯೋಗೆ ತಕ್ಷಣವೇ ಸ್ಪಂದಿಸಿದ ಸಿಎಂ..

News

ಲಾಕ್ ಡೌನ್ ಹಿನ್ನಲೆಯಲ್ಲಿ ಬಡವರು,ನಿರ್ಗತಿಕರು, ಸಾಮಾನ್ಯ ಜನರು ತುಂಬಾ ಸಂಕಷ್ಟಕ್ಕೀಡಾಗಿದ್ದಾರೆ. ಇನ್ನು ಎಷ್ಟೋ ಜನರಿಗೆ ಔಷಧಿಗಳು ಸರಿಯಾದ ಸಮಯಕ್ಕೆ ಸಿಗದೇಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇದೇ ರೀತಿ ಕಿಡ್ನಿ ಕಸಿ ಮಾಡಿದ ಮಹಿಳೆಯೊಬ್ಬಳು ಬೇಕಾದ ಔಷಧಿ ಸಿಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ.

ಇನ್ನು ಈ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ನರಸಾಪುರ ಎಂಬಗ್ರಾಮದಲ್ಲಿ ನಡೆದಿದೆ. ಇನ್ನು ಇದೆ ಗ್ರಾಮದ ಶೇಖವ್ವ ಅರಂಭಾವಿ ಎಂಬುವವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ತನ್ನ ಪತ್ನಿಗೋಸ್ಕರ ಪತಿಯೇ ಕಿಡ್ನಿಯನ್ನ ದಾನ ಮಾಡಿದ್ದು, ೪ ತಿಂಗಳುಗಳ ಹಿಂದೆಯೇ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಆಕೆಗೆ ಪತಿಯ ಕಿಡ್ನಿಯನ್ನ ಕಸಿ ಮಾಡಲಾಗಿತ್ತು.

ಆದರೆ ಕೊರೋನಾ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ಶೇಖವ್ವ ಅರಂಭಾವಿ ಅವರಿಗೆ ಸೂಕ್ತ ಔಷಧಿಗಳು ಸಿಗದೇವೇದನೆ ಅನುಭವಿಸುತ್ತಿದ್ದರು. ಇನ್ನು ಏನೂ ಮಾಡೋದು, ಯಾರನ್ನ ಕೇಳೋದು ಎಂದು ಆ ಕುಟುಂಬಕ್ಕೆ ತೋಚದೆ ಇದ್ದಾಗ, ಶೇಖವ್ವ ಅವರ ಮಗಳಾದ ಪವಿತ್ರ ಅವರಿಗೆ ಆಗಹೊಳೆದಿದ್ದು ಟಿಕ್ ಟಾಕ್.

ಇನ್ನು ಟಿಕ್ ಟಾಕ್ ವಿಡಿಯೋ ಮಾಡಿದ ಪವಿತ್ರತನ್ನ ತಾಯಿ ಔಷಧಿ ಸಿಗದೇ ಅನುಭವಿಸುತ್ತಿರುವ ನೋವಿನ ಬಗ್ಗೆ ಹೇಳಿಕೊಂಡಿದ್ದರು. ಇನ್ನು ನಮಗೆ ಸಹಾಯ ಮಾಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ವಿಡಿಯೋ ಮುಖಾಂತರ ಕೇಳಿಕೊಂಡಿದ್ದರು. ಇನ್ನು ಈ ವಿಡಿಯೋ ಸಿಎಂ ಅವರ ಗಮನಕ್ಕೆ ಬಂದಿದ್ದು ತಕ್ಷಣವೇ ಸಿಎಂ ಯಡಿಯೂರಪ್ಪನವರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಆ ಕುಟುಂಬಕ್ಕೆ ಸಹಾಯ ಮಾಡಿ ಎಂದು ಸೂಚನೆ ಕೊಟ್ಟಿದ್ದಾರೆ.

ಇನ್ನು ತಕ್ಷಣವೇ ಬೆಳಗಾವಿ ಜಿಲ್ಲಾಧಿಕಾರಿಗಳು ಕೂಡ ಇದಕ್ಕೆ ಸ್ಪಂದಿಸಿದ್ದು ಅಲ್ಲಿನ ಆರೋಗ್ಯಾಧಿಕಾರಿಗಳಿಗೆ ಕರೆ ಮಾಡಿ ಶೇಖವ್ವ ಅರಂಭಾವಿ ಅವರಿಗೆ ಒಂದುತಿಂಗಳಿಗೆ ಆಗುವಷ್ಟು ಔಷಧಿಗಳನ್ನ ತಲುಪಿಸುವಂತೆ ಆದೇಶ ಮಾಡಿದ್ದಾರೆ. ಶೇಖವ್ವ ಅವರ ಮಗಳು ಪವಿತ್ರ ಮಾಡಿದ ಒಂದು ವಿಡಿಯೋದಿಂದ ಈಗ ಅವರ ಕುಟುಂಬಕ್ಕೆ ಔಷಧಿಗಳು ದೊರೆತಿವೆ.