ಈ ದೇವಾಲಯಕ್ಕೆ ಭೇಟಿ ನೀಡಿದ ಮೊದಲನೇ ಬಾರಿ ಕೇಳಿಕೊಂಡ ಕೋರಿಕೆ ಒಂದೇ ನಿಮಿಷದಲ್ಲಿ ನೆರವೇರುವುದು ಖಚಿತ !ಯಾವ ದೇವಸ್ಥಾನ ಎಲ್ಲಿದೆ ಗೊತ್ತಾ?

Adhyatma
Advertisements

[widget id=”custom_html-4″]

ನಿಮಗೆ ಯಾವುದೇ ಸಮಸ್ಯೆ ಇದ್ದರೂ ಈ ದೇವಾಲಯಕ್ಕೆ ಭೇಟಿ ನೀಡಿದರೆ ಒಂದೇ ನಿಮಿಷದಲ್ಲಿ ನಿಮ್ಮ ಕಷ್ಟ ದೂರವಾಗುತ್ತದೆ. ಅದು ಬೇರೆ ಯಾವ ದೇವಾಲಯವೂ ಅಲ್ಲ, ನಮ್ಮ ಕರ್ನಾಟಕದಲ್ಲೇ ಇರುವ ನಿಮಿಷಾಂಬ ದೇವಾಲಯ. ಹಾಗಾದರೆ ಬನ್ನಿ ಇದು ಹೇಗೆ ಈ ಸ್ಥಳದ ಮಹಿಮೆ, ವಿಶೇಷತೆಗಳೇನು? ಇತಿಯಾಸವೇನು ಎಂಬುದನ್ನು ತಿಳಿಯೋಣ..

[widget id=”custom_html-4″]

ನಿಮಿಷಾಂಬ ದೇವಾಲಯ ಮಾತೆ ನಿಮಿಷಾಂಬ ದೇವಿಯ ಸನ್ನಿಧಾನ. ಮಾತೆ ಪಾರ್ವತಿದೇವಿಯ ಒಂದು ಅವತಾರ. ಈ ದೇವಾಲಯ ಇರುವುದು ಶ್ರೀರಂಗಪಟ್ಟಣದಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ಗಂಜಾಂ ಎಂಬ ಸ್ಥಳದಲ್ಲಿ. ಇದು ಮೈಸೂರಿನಿಂದ 17 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ ಸರಿಸುಮಾರು 127 ಕಿಲೋಮೀಟರ್ ದೂರದಲ್ಲಿದೆ. ಸುಂದರವಾದ ಕಾವೇರಿ ನದಿಯ ದಡದಲ್ಲಿ ಈ ದೇವಾಲಯವು ನಿರ್ಮಿತವಾಗಿದೆ. ಈ ಸ್ಥಳವು ಬಹಳ ಸುಂದರ ಹಾಗೂ ಮನೋಹರವಾಗಿದೆ.

Advertisements

ನಿಮಿಷಾಂಬ ದೇವಿಯು ಚಿನ್ನ ರತ್ನಾಭರಣ, ಕೆಂಪು ಗುಲಾಬಿ ಹೂಗಳ ಮಾಲೆಯಿಂದ ಅಲಂಕೃತಗೊಂಡಿರುವದನ್ನು ನೋಡಲು ಎರಡು ಕಣ್ಣುಗಳು ಸಾಲವು ದಿಲ್ಲ. ಇದು ಒಂದು ಪುಟ್ಟ ದೇವಾಲಯವಾದರೂ ಇಲ್ಲಿಯ ಸ್ಥಳ ಮಹಿಮೆ ಅಪಾರ, ಪ್ರಕೃತಿಯ ರಮಣೀಯತೆ ಮನೋಹರ.

[widget id=”custom_html-4″]

ಇಲ್ಲಿ ಶಿವನು ಅಕ್ಷಯ್ ಶ್ವರ ಎಂಬ ಹೆಸರಿನಿಂದ ನೆಲೆಸಿದ್ದಾನೆ. ಈ ಶಿವಲಿಂಗಕ್ಕೆ ದೀಪಾರಾಧನೆ ಮಾಡಿದ ನಂತರವೇ ದೇವಿಗೆ ಪೂಜೆಯನ್ನು ಸಲ್ಲಿಸಲಾಗುವುದು. ಶಿವಲಿಂಗದ ಎದುರು ನಂದಿ ವಿಗ್ರಹವು ಇದೆ. ಅಲ್ಲದೆ ಈ ಸನ್ನಿಧಾನದಲ್ಲಿ ಲಕ್ಷ್ಮಿ ನಾರಾಯಣನ ದೇವಾಲಯವೂ ಇದೆ. ಈ ಮೂರು ದೇವಾಲಯಗಳು ಪಕ್ಕಪಕ್ಕದಲ್ಲೇ ಇವೆ. ನಿಮಿಷಾಂಬಾ ದೇವಿಗೆ ಪ್ರತಿದಿನವೂ ಪೂಜೆಯನ್ನು ಸಲ್ಲಿಸಲಾಗುತ್ತದೆ ಭಕ್ತಾದಿಗಳು ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ದರ್ಶನವನ್ನು ಪಡೆಯಬಹುದಾಗಿದೆ.

ಸ್ಥಳದ ಮಹಿಮೆ ಈ ದೇವಿಯ ಸನ್ನಿಧಾನಕ್ಕೆ ಭೇಟಿ ನೀಡಿದ ಮೊದಲ ಬಾರಿ ಕೇಳಿಕೊಂಡ ಯಾವುದೇ ಕೋರಿಕೆ ನೆರವೇರುತ್ತದೆ ಎಂಬ ನಂಬಿಕೆ ಇದೆ. ನಿಮ್ಮ ಯಾವುದೇ ಸಮಸ್ಯೆ ಒಂದೇ ನಿಮಿಷದಲ್ಲಿ ದೇವಿ ಪರಿಹಾರ ಮಾಡುವಳು ಎಂಬ ಪ್ರತೀತಿ ಇದೆ. ಇದು ಸತ್ಯವೆಂದು ಭಕ್ತಾದಿಗಳು ನಂಬಿದ್ದಾರೆ. ಈ ನಂಬಿಕೆ ಒಂದೆರಡು ದಿವಸದಲ್ಲ, ವರ್ಷಾನುವರ್ಷಗಳಿಂದ ನಡೆದುಕೊಂಡು ಬಂದಿರುವುದು.ಅನೇಕ ವರ್ಷಗಳಿಂದ ಮದುವೆಯ ಯೋಗ ಕೂಡಿ ಬರದೇ ಇರುವವರು ಇಲ್ಲಿಗೆ ಬಂದು ಬೇಡಿಕೊಂಡರೆ ಕಂಕಣ ಭಾಗ್ಯ ಕೂಡಿ ಬರುವುದು.

[widget id=”custom_html-4″]

ವಿಶೇಷತೆ ಇಲ್ಲಿ ಒಂದು ಬಲಿ ಪೀಠವಿದೆ, ಹಾಗೂ ಒಂದು ಬೃಹತ್ತಾದ ಗಂಟೆ ಇದೆ. ಇಲ್ಲಿಯ ಅರ್ಚಕರು ಇಲ್ಲಿ ಕಾಗೆಗಳಿಗೆ ಆಹಾರವನ್ನು ಇಟ್ಟು ಒಂದು ಬಾರಿ ಗಂಟೆಯನ್ನು ಜೋರಾಗಿ ಬಾರಿಸಿದ ಕ್ಷಣ ಎಲ್ಲಾ ಕಾಗೆಗಳು ಒಟ್ಟಾಗಿ ಬಂದು ಆಹಾರವನ್ನು ಸ್ವೀಕರಿಸಿ ಹಾರಿ ಹೋಗುವವು. ಗಂಟೆಯನ್ನು ಬಡಿದ ನಂತರವಷ್ಟೇ ಇಲ್ಲಿಗೆ ಕಾಗೆಗಳು ಬರುತ್ತದೆ ಬೇರೆಯ ಸಮಯದಲ್ಲಿ ಇಲ್ಲಿ ಕಾಗೆಗಳು ಬರುವುದಿಲ್ಲ.

ಇತಿಹಾಸ ಈ ದೇವಾಲಯವು 300 ರಿಂದ 400 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಈ ದೇವಿಗೆ ಪೂಜೆಯೂ ಆರಂಭಗೊಂಡಿತು. ಆರ್ಯ ಕ್ಷತ್ರಿಯ ಸೋಮವಂಶ ದ ರಾಜನಾದ ಮುಕ್ತ ರಾಜನಿಗೆ ಯುದ್ಧದ ಸಮಯದಲ್ಲಿ ತ್ರಿಬಲ್ ಅನ್ನು ನಾಶ ಮಾಡಲು ಸಹಕಾರ ಮಾಡುವೆನೆಂದು ನಿಮಿಷಾಂಬಾ ದೇವಿಯ ವರವನ್ನು ನೀಡಿದಳಂತೆ. ಆದ್ದರಿಂದಲೇ ಇಲ್ಲಿ ಮುಕ್ತ ಕೇಶ್ವರ ಎಂಬ ಲಿಂಗದ ರೂಪದಲ್ಲಿ ಶಿವನು ನೆಲೆಸಿದ್ದಾನೆ.

ವಿಶೇಷ ಪೂಜೆ ಇಲ್ಲಿ ನಿಮಿಷಾಂಬಾ ದೇವಿಯ ಉತ್ಸವವು “ನಿಮಿಷಾಂಬ ಜಯಂತಿ “ಎಂಬ ಹೆಸರಿನಿಂದ ಜರುಗುತ್ತದೆ. ಪ್ರತಿ ವರ್ಷ ವೈಶಾಖ ಶುದ್ಧ ದಶಮಿ ದಿನದಂದು ಈ ಜಯಂತಿ ನಡೆಯುತ್ತದೆ. ನವರಾತ್ರಿಯ ದಿನದಂದು ವಿಶೇಷ ಪೂಜೆ ,ವಿಶೇಷ ಅಲಂಕಾರ ಕಾರವು ಅದ್ಧೂರಿಯಿಂದ ನಡೆಯುತ್ತದೆ. ಅಲ್ಲದೆ ಶಿವರಾತ್ರಿ ದೀಪಾವಳಿ ಹಾಗೂ ದಸರಾದಂದು ಇಲ್ಲಿ ವಿಶೇಷ ಪೂಜೆ ಇರುತ್ತದೆ.