ಬರೋಬ್ಬರಿ 123ದಿವಸ ಕೈಗಳಿಗೆ ಕೈಕೋಳ ತೊಟ್ಟು ಜೀವನ ನಡೆಸಿದ ಪ್ರೇಮಿಗಳು !ಲವರ್ಸ್ ಮಿಸ್ ಮಾಡದೆ ಈ ಸ್ಟೋರಿ ನೋಡಿ..

Kannada Mahiti
Advertisements

ಪ್ರೇಮಿಗಳೇ ಹಾಗೇ, ಪ್ರೀತಿ ಗಾಢವಾಗಿದ್ದಾಗ ಅವರಿಗೆ ಪ್ರಪಂಚವೇ ಕಾಣದಂತೆ ನಲಿ ನಲಿಯುತಾ ಜೊತೆಯಾಗಿ ಇರ್ತಾರೆ. ಅದೇ ಸಂಬಂಧದಲ್ಲಿ ಸಣ್ಣ ಬಿರುಕು ಆರಂಭವಾಗಿ ಬ್ರೇಕ್ ಅಪ್ ಹಂತಕ್ಕೆ ಹೋಯ್ತು ಅಂದ್ರೆ ಕಥೆ ಅಲ್ಲಿಗೆ ಮುಗೀಯಿತು. ಆಕಾಶವೇ ಮೈಮೇಲೆ ಬಿದ್ದವರ ರೀತಿ ವಿಲವಿಲ ಒದ್ದಾಡ್ತಾರೆ. ಇರೋ ಬರೋ ದೇವರಿಗೆಲ್ಲ ಹರಕೆ ಹೊರುತ್ತಾರೆ. ದೇವರೇ ಕಾಪಾಡಪ್ಪ ಅಂತ ಪರಿಪರಿಯಾಗಿ ಬೇಡಿಕೊಳ್ತಾರೆ. ಯಾರಿಗೂ ಕಾಣದಂತೆ ಒಂದು ಮೂಲೆಯಲ್ಲಿ ಕುಳಿತು ಕಣ್ಣೀರು ಸುರಿಸುತ್ತಾರೆ. ಅವರ ವಿರಹ ವೇದನೆ ನೋಡಲಾಗದು. ಆದರೆ, ಈಗ ನಾವು ಹೇಳ್ತಾ ಇರೋ ಪ್ರೇಮಿಗಳ ಸಾಹಸವೇ ವಿಭಿನ್ನ. ಬ್ರೇಕ್ ಅಪ್ ಆಗೋದನ್ನು ಉಳಿಸಿಕೊಳ್ಳಲು ಅವರು ಇಟ್ಟ ಹೆಜ್ಜೆಯೇ ರೋಮಾಂಚನ. ಈ ಸ್ಟೋರಿ ನೋಡಿದ್ರೆ, ಹೀಗೂ ಬದುಕಲು ಸಾಧ್ಯವಾ ಅನಿಸಿಬಿಡುತ್ತೆ. ಅಷ್ಟಕ್ಕೂ ಈ ಪ್ರೇಮಿಗಳ ಕಥೆ ಏನು ಅಂತ ಎಳೆ ಎಳೆಯಾಗಿ ಹೇಳ್ತೀವಿ ಕೇಳಿ. ರೋಮಿಯೋ-ಜ್ಯೂಲಿಯಟ್, ಶಹಜಾನ್-ಮಮ್ತಾಜ್ ಅವರಂತಹ ಪ್ರೇಮ ಕಥೆಗಳನ್ನ ಕೇಳಿರುತ್ತೀರಿ. ಆದ್ರೆ ನಾವು ಹೇಳ್ತಾ ಇರೋ ಉಕ್ರೇನ್‍ನ ಅಲೆಕ್ಸಾಂಡರ್ ಕುಡ್ಲೆ, ವಿಕ್ಟೋರಿಯಾ ಪುಸ್ಟೊವಿಟೋವಾ ಎಂಬ ಪ್ರೇಮಿಗಳ ಕಥೆ ನೀವು ಕೇಳಿರಲು ಸಾಧ್ಯವೇ ಇಲ್ಲ.

[widget id=”custom_html-4″]

Advertisements

ಆಧುನಿಕ ಪ್ರೇಮಿಗಳಂತೆ ಈ ಜೋಡಿಯ ದೀರ್ಘಕಾಲದ ಪ್ರೀತಿಯಲ್ಲಿ ನೋವಿತ್ತು, ನಲಿವಿತ್ತು. ಪಾರ್ಕ್, ಸಿನಿಮಾ, ಪ್ರವಾಸಿ ಸ್ಥಳ, ಶಾಪಿಂಗ್ ಮಾಲ್ ಅಂತ ಈ ಜೋಡಿ ಸುತ್ತಾಡದ ಸ್ಥಳ ಇರಲಿಲ್ಲ. ಎಲ್ಲಾ ಕಡೆ ಕೈಕೈ ಹಿಡಿದು ಅಮರ ಪ್ರೇಮಗಳ ರೀತಿ ಸುತ್ತಾಡಿದ್ರು. ಮುಂದೊಂದು ದಿನ ತಮ್ಮ ನಡುವೆ ಬಿರುಕು ಮೂಡುತ್ತೆ, ಬ್ರೇಕ್‍ಅಪ್ ಹಂತಕ್ಕೆ ಹೋಗುತ್ತೆ ಅಂತ ಅವರೆಂದೂ ಅಂದುಕೊಂಡಿರಲಿಲ್ಲ. ಆದ್ರೆ, ಎಷ್ಟು ದಿನ ಅಂತ ಸಂತೋಷದಲ್ಲಿ ತೇಲಾಡಲು ಸಾಧ್ಯ, ಎಷ್ಟು ದಿನ ಅಂತ ಸಂಬಂಧವನ್ನು ಬಿಗಿಯಾಗಿ ಹಿಡಿದುಕೊಳ್ಳಲು ಸಾಧ್ಯ ಹೇಳಿ. ಅಂತೂ ಆ ಗಳಿಗೆ ಬಂದೇ ಬಿಡ್ತು. ಇಬ್ಬರ ನಡುವಿನ ಮುನಿಸು ತಾರಕಕ್ಕೇರಿತು. ಇನ್ನೇನು ಬ್ರೇಕ್ ಅಪ್ ಆಗೇ ಬಿಡ್ತು ಅನ್ನೋ ಹಂತಕ್ಕೂ ತಲುಪಿ ಬಿಡುತ್ತೆ. ಆದ್ರೆ, ಬೇರೆ ಆಗಲು ಮಾತ್ರ ಇಬ್ಬರ ಮನಸ್ಸು ಒಪ್ಪುತ್ತಿರಲಿಲ್ಲ. ಯಾಕೆಂದ್ರೆ ಅದಾಗಲೇ ಅಷ್ಟೊಂದು ಗಾಢವಾದ ಪ್ರೀತಿ ಅವರನ್ನು ಆವರಿಸಿ ಬಿಟ್ಟಿತ್ತು. ಒಬ್ಬರನ್ನು ಬಿಟ್ಟು ಒಬ್ಬರು ಬದುಕಲಾರೆವು ಅನ್ನುವ ಹಂತ ತಲುಪಿ ಬಿಟ್ಟಿತ್ತು. ಇಂತಹ ಸಂದರ್ಭದಲ್ಲಿ ಪ್ರೀತಿ ಉಳಿಸಿಕೊಳ್ಳಲು ಮಾಡಿದ ಕೊನೆಯ ಪ್ರಯತ್ನವೇ ರೋಮಾಂಚನ. ಅದೇನದು ಅನ್ನೋದನ್ನು ಹೇಳ್ತೀವಿ ನೋಡಿ.

[widget id=”custom_html-4″]

ಹೌದು, ಹೇಗಾದ್ರೂ ಮಾಡಿ ತಮ್ಮ ಪ್ರೀತಿಯ ಸಂಬಂಧ ಉಳಿಸಿಕೊಳ್ಳಬೇಕು. ತಾವು ಮೊದಲಿನಂತೆ ನಲಿಯುತ್ತಾ, ಕುಣಿದಾಡುತ್ತಾ ಇರಬೇಕು ಅನ್ನೋದು ಈ ಜೋಡಿಯದ್ದಾಗಿತ್ತು. ಏನೇನೋ ಯೋಚನೆ ಮಾಡಿ ಕೈ ಬಿಡಲಾಗಿತ್ತು. ಅಂತಿಮವಾಗಿ ಇಬ್ಬರು ಕೈಕೋಳ ತೊಟ್ಟು ಜೊತೆ ಜೊತೆಯಾಗಿ ಜೀವಿಸಬೇಕು. ಹಾಗೇ ಮಾಡಿದ್ರೆ ಬಿರುಕು ಬಿಟ್ಟಿರೋ ತಮ್ಮ ಸಂಬಂಧ ಗಟ್ಟಿಯಾಗುತ್ತೆ ಅಂತ ನಿರ್ಧರಿಸುತ್ತಾರೆ. ಪ್ರೇಮಿಗಳ ದಿನವಾದ ಫೆಬ್ರವರಿ 14 ರಂದೇ ಅದಕ್ಕೆ ಮುಹೂರ್ತ ಇಟ್ಟುಕೊಳ್ತಾರೆ. ಅಂದು, ಅಲೆಕ್ಸಾಂಡರ್ ಕುಡ್ಲೆ ಬಲಕೈ, ವಿಕ್ಟೋರಿಯಾಳ ಎಡಗೈ ಸೇರಿ ಕೈಕೋಳ ಹಾಕಿಕೊಳ್ಳಲಾಗುತ್ತೆ. ಈ ಜೋಡಿ ಕೈಕೋಳ ತೊಟ್ಟಿರುವುದು ಅಂದೇ ವೈರಲ್ ಆಗಿ ಬಿಡುತ್ತೆ. ಅದನ್ನು ನೋಡಿ ಎಷ್ಟೋ ಜನ ಮೂಗು ಮುರಿದಿರುತ್ತಾರೆ.

[widget id=”custom_html-4″]

ಇದೊಂದು ಹುಚ್ಚಾಟ, ಎಷ್ಟು ದಿನ ಅಂತ ಈ ರೀತಿ ಹುಚ್ಚಾಟ ಸಾಧ್ಯ ಅಂತ ಅದೆಷ್ಟೋ ಮಂದಿ ಅನುಮಾನ ಪಟ್ಟಿರುತ್ತಾರೆ. ಹೆಚ್ಚೆಂದರೆ ಎರಡ್ಮೂರು ದಿನ ಇಟ್ಟುಕೊಳ್ಳಬಹುದು, ಆಮೇಲೆ ಕಿತ್ತಾಟ ಆಗುತ್ತೆ, ಅವರೇ ಸಾಕಪ್ಪ ಸಾಕು ಅಂತ ಬಿಚ್ಚಿಕೊಳ್ತಾರೆ ಅಂತ ಜನ ಆಡಿಕೊಳ್ತಾರೆ. ಆದ್ರೆ, ಆಗಿದ್ದೇ ಬೇರೆ, ಜನರ ನಿರೀಕ್ಷೆಯೇ ಸುಳ್ಳಾಗಿ ಬಿಡುತ್ತೆ. ಪ್ರೇಮಿಗಳಲ್ಲಿ ತಾವು ಹೀಗೆಯೇ ಬಹುಕಾಲ ಇರಬಲ್ಲೆವು ಅಂತ ಅಚಲವಾದ ವಿಶ್ವಾಸ ಇತ್ತು. ಆ ವಿಶ್ವಾಸವೇ ಅವರನ್ನು ಬರೊಬ್ಬರಿ ನಾಲ್ಕು ತಿಂಗಳ ಕಾಲ ಕರೆದುಕೊಂಡು ಹೋಯ್ತು ನೋಡಿ. ಹೌದು, ಅದು ಅಂತಿಂಥ ನಿರ್ಧಾರವಾಗಿರಲಿಲ್ಲ. ಪರಸ್ಪರ ಇಬ್ಬರು ಕೈಕೋಳ ತೊಟ್ಟು ಒಂದು ಗಂಟೇ ಕೂಡ ಇರಲು ಸಾಧ್ಯವಾಗಲ್ಲ. ಆದ್ರೆ, ಈ ಜೋಡಿ ಇದ್ದದ್ದು ಬರೊಬ್ಬರಿ 123 ದಿನ. ಊಟ ಮಾಡುವುದು, ಬಾತ್ ರೂಮ್ ಹೋಗುವುದು, ಶಾಪಿಂಗ್ ಹೋಗುವುದು, ಸುತ್ತಾಟಕ್ಕೆ ಹೋಗುವುದು. ಹೀಗೇ ಎಲ್ಲವೂ ಜೊತೆ ಜೊತೆಯೇ ಆಗಿತ್ತು.

[widget id=”custom_html-4″]

ಇವರನ್ನು ನೋಡಿದವರಿಗೂ ಅಚ್ಚರಿ ಮೇಲೆ ಅಚ್ಚರಿ. ಹೀಗೂ ಬದುಕಲು ಸಾಧ್ಯನಾ ಅಂತ ಅವರನ್ನೇ ಯೋಚನೆಗೆ ಹಚ್ಚಿ ಬಿಟ್ಟಿತ್ತು. ತಾವು ಪ್ರೀತಿಸುವವರು ಸದಾ ತಮ್ಮ ಜೊತೆಗೆ ಇರಬೇಕು ಅಂತ ಪ್ರೇಮಿಗಳು ಅಂದುಕೊಳ್ಳುವುದೇನೋ ಸಹಜ. ಆದ್ರೆ, ಈ ರೀತಿ ಕೈಕೋಳ ಹಾಕಿಕೊಂಡು ಜೊತೆ ಜೊತೆಯಾಗಿ ಇರಲು ಸಾಧ್ಯ ಆಗುತ್ತಾ ಅನಿಸಿಬಿಡುತ್ತೆ. ಆದ್ರೆ ಈ ಉಕ್ರೇನ್ ಜೋಡಿ ಮಾಡಿ ತೋರಿಸಿದೆ. ತಪ್ಪಿ ಹೋಗುತ್ತಿದ್ದ ತಮ್ಮ ಸಂಬಂಧವನ್ನೇ ಕೈಕೋಳದಿಂದ ಸರಿ ಪಡಿಸಿಕೊಳ್ಳಲು ಶ್ರಮಿಸಿದೆ. ಪರಸ್ಪರ ಇರುವಂತಹ ಅನುಮಾನ, ಅಪನಂಬಿಕೆಯನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸಿ ಗೆದ್ದಿದ್ದಾರೆ.

ಪ್ರೇಮಿಗಳು ಅಂದ್ರೆ ಹಾಗೇ, ಅವರ ನಡುವೆ ಒಂದಷ್ಟು ಮುನಿಸು, ಒಂದಷ್ಟು ಜಗಳ, ಒಂದಷ್ಟು ಕಿತ್ತಾಟ, ಒಂದಷ್ಟು ತುಂಟಾಟ ಎಲ್ಲವೂ ಇದ್ದೇ ಇರುತ್ತೆ. ಜಗಳವಾಗಿ ದೂರ ಆದ ಸ್ವಲ್ಪ ಸಮಯದಲ್ಲೇ ಯಾರಾದ್ರೂ ಒಬ್ಬರು ಸಾರಿ ಕೇಳುತ್ತಾ ಮಾತಾಡಿಸಲು ಮುಂದಾಗಿ ಬಿಡ್ತಾರೆ. ಅಲ್ಲಿಯವರೆಗೂ ನಡೆದ ಜಗಳವೆಲ್ಲ ಮಾಯವಾಗಿ ಬಿಡುತ್ತೆ. ಮುನಿಸು ಮರೆತು ಮತ್ತೆ ಒಂದಾಗಿ ಬಿಡ್ತಾರೆ. ಆದ್ರೆ, ಈ ಜೋಡಿ ಜೊತೆಯಾಗೇ ಇರುವುದರಿಂದ ಅವರ ನಡುವೆ ಜಗಳ ಆಗಿಲ್ವ? ಕಿತ್ತಾಟ ನಡೆದಿಲ್ವಾ? ಅಂತ ಪ್ರಶ್ನೆ ಮೂಡಬಹುದು. ಸತ್ಯ ಅವರ ನಡುವೆ ಜಗಳ ಆಗಿದೆ. ಕಿತ್ತಾವೂ ನಡೆದಿದೆ. ಆದ್ರು ಸಹ ಅವರ ಬಂಧ ಗಟ್ಟಿಯಾಗೇ ಉಳಿದಿದ್ದು ರೋಚಕ.