ಸಾವಿರ ಆನೆಗಳ ಶಕ್ತಿ ಇದ್ದರೂ ಭೀಮ ಈ ಒಂದು ಆನೆಗೆ ತುಂಬಾ ಹೆದರುತ್ತಿದ್ದ !

Adhyatma

ಮಹಾಭಾರತ ಎಂದೊಡನೆ ಕೌರವರ ಪಾಂಡವರ ಕಾ’ದಾಟದ ಚಿತ್ರಣ ನೆನಪಿಗೆ ಬರುತ್ತದೆ. ದೊಡ್ಡ ದೊಡ್ಡ ಸೇನಾನಿಗಳ ಜೊತೆ ಕೃಷ್ಣ ಪರಮಾತ್ಮ, ಸುಯೋಧನ-ಕರ್ಣರ ನೇತ್ರತ್ವದ ಕ’ದನ ಕಣ್ಣು ಮುಂದೆ ಬರ‍್ತದೆ. ಇನ್ನು ಸ್ನೇಹಿತರೇ ಮಹಾಭಾರತದಲ್ಲಿ ಒಬ್ಬ ಬಲಾಢ್ಯ ಪ್ರಬಲ ಹೋರಾಟಗಾರ ಅಂದರೆ ಅದು ಭೀಮ, ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಪಾಂಡವರು, ಕೌರವರ ಮಧ್ಯೆ ವೈಮನಸ್ಸು ಇದ್ರು, ಭೀಮ ಮತ್ತು ದುರ್ಯೋಧನನ ಮಧ್ಯೆ ಇರುವ ಶ’ತ್ರುತ್ವ, ಯಾರು ಪ್ರಾಬಲ್ಯರು? ಎಂಬ ಅಹಂ-ಸೋಹಂಗಳು ಮಹಾಭಾರತದಲ್ಲಿ ಹೆಚ್ಚೇ ಇತ್ತು. ಭೀಮ ಯಾರಿಗೂ ಅಂಜದ ಯಾವುದಕ್ಕೂ ಅಳುಕದ ಒಂದು ಬಲಿಷ್ಟ ವ್ಯಕ್ತಿತ್ವ ಅಂಥಹ ಬೀಮನೂ ಸಹ ಒಂದು ಆನೆಗೆ ಭಯಪಡ್ತಾಯಿದ್ದ ಅಂದ್ರೆ ನೀವೂ ನಂಬ್ತೀರಾ?

ಹೌದು, ನಂಬಲೇಬೇಕು, ಗಜಶಕ್ತಿಯಿದ್ಧ ಭೀಮ ಸುಪ್ರತೀಕ ಎಂಬ ಆನೆಗೆ ಭಯಂಕರ ಹೆದರುತ್ತಿದ್ದನಂತೆ, ಅಷ್ಟಕ್ಕೂ ಈ ಸುಪ್ರತೀಕ ಆನೆ ಯಾರಿಗೆ ಸೇರಿದ್ದು ಅಂತ ಕೇಳಿದ್ರೆ ಅದು ಭಗದತ್ತ ಎನ್ನುವ ಕೌರವರ ಪರ ಹೋರಾಡುತ್ತಿದ್ದವನಿಗೆ ಸೇರಿದ ಆನೆ. ಈ ಆನೆ ಭಗದತ್ತನ ಮಾತು ಬಿಟ್ಟು ಇನ್ಯಾರ ಮಾತನ್ನು ಕೇಳುತ್ತಿರಲಿಲ್ಲವಂತೆ
ಭಗದತ್ತ ಆನೆ ಸಮೇತ ಕೌರವರ ಪರ ಕುರುಕ್ಷೇತ್ರದಲ್ಲಿ ಹೋರಾಡಲು ಕಾರಣವಿದೆ. ಹೌದು ಭಗದತ್ತನ ತಂದೆ ನರಕಾಸುರ, ನರಕಾಸುರನ ತಾಯಿ ಪ್ರಥ್ವಿ, ಪ್ರಥ್ವಿಯ ತಪಸ್ಸಿಗೆ ಮೆಚ್ಚಿ ಭಗವಾನ್ ವಿಷ್ಣು, ಪ್ರಥ್ವಿಗೆ ವೈಷ್ಣವಾಸ್ತ್ರವನ್ನು ವರವಾಗಿ ನೀಡುತ್ತಾರೆ, ಆಗ ಅದನ್ನು ಪ್ರಥ್ವಿ ತನ್ನ ಮಗ ನರಕಾಸುರನಿಗೆ ಕೊಡುತ್ತಾಳೆ, ನರಕಾಸುರ ತನ್ನ ಮಗ ಭಗದತ್ತನಿಗೆ ಕೊಡುತ್ತಾನೆ, ಇವುಗಳ ಬಗ್ಗೆ ತಿಳಿದಿದ್ದರಿಂದಲೇ ದುರ್ಯೋಧನ ಭಗದತ್ತನನ್ನು ತನ್ನ ಪರವಾಗಿ ಯುದ್ಧ ಮಾಡಲು ಮನವೊಲಿಸುತ್ತಾನೆ.

ಇನ್ನು ರಣರಂಗದಲ್ಲಿ ಯುದ್ಧ ಮಾಡುವಾಗ ಬಲಾಢ್ಯ ಭೀಮ ಸುಪ್ರತೀಕನನ್ನು ಕೊ’ಲ್ಲಲು ಮುಂದಾಗ್ತಾನೆ, ಆಗ ಕುಪಿತನಾದ ಸುಪ್ರತೀಕ ಭೀಮನನ್ನು ಎತ್ತಿ ಬೀಸಾಕುತ್ತಾನೆ, ಗಜನ ಆರ್ಭಟಕ್ಕೆ ಬೆಚ್ಚಿ ಬಿದ್ದ ಭೀಮ ಆನೆಯ ಹೊಟ್ಟೆಯ ಅಡಿ ಅವಿತು ಕುಳಿತಿರುತ್ತಾನೆ, ಭೀಮನ ಆಕ್ರಂದನ ಕೇಳಿ, ಸಮಸ್ಯೆಯ ಅರ್ಥ ಮಾಡಿಕೊಂಡು ಆನೆಯ ಕಪಿ ಮುಷ್ಠಿಯಲ್ಲಿದ್ಧ ಭೀಮನನ್ನು ನಕುಲ ಸಹದೇವ, ಬಿಡಿಸಲು ಮುಂದಾಗ್ತಾರೆ, ಅರ್ಜುನ ಬಿಲ್ಲುಬಾಣಗಳನ್ನ ಹೂಡ್ತಾನೆ, ಆದರೆ ಅದ್ಯಾವುದರ ಪರಿಣಾಮವೂ ಭಗದತ್ತನಿಗಾಗಲಿ, ಸುಪ್ರತೀಕನಿಗಾಗಲಿ ಆಗುವುದಿಲ್ಲ, ನಂತರ ವೈಷ್ಣಾವಸ್ತ್ರವನ್ನು ಭಗದತ್ತ ಕೃಷ್ಣನ ಮೇಲೆ ಪ್ರಯೋಗ ಮಾಡ್ತಾನೆ, ಆ ವೈಷ್ಣವಾಸ್ತ್ರವೇ ಹೂವಿನ ಹಾರವಾಗಿ ಕೃಷ್ಣನ ಕೊರಳಿಗೆ ಬೀಳ್ತದೆ. ನಂತರ ಕೃಷ್ಣನ ಆದೇಶದ ಮೇರೆಗೆ ಅರ್ಜುನ, ಸುಪ್ರತೀಕನ ಮೇಲೆ ಬಿಲ್ಲುಗಳನ್ನು ಹೂಡ್ತಾನೆ, ಆನೆಯ ತಲೆ ಎರಡು ಭಾಗವಾಗಿ ಸ’ತ್ತು ಹೋಗುತ್ತದೆ. ಭಗದತ್ತ ಸಹ ಸ’ತ್ತು ಹೋಗುತ್ತಾನೆ, ಅಲ್ಲಿಗೆ ಬಲಾಡ್ಯ, ಅತೀವ ಪರಾಕ್ರಮಿ ಭೀಮನ ಬೆಚ್ಚಿ ಬಿದಿದ್ದ ಆನೆ ಉಸಿರು ಕೃಷ್ಣ ಪರಮಾತ್ಮನಿಂದ ನಿಲ್ಲುತ್ತದೆ. ಮಹಾಭಾರತದ ನಿಮ್ಮ ಯಾವುದು? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ