ಮಹಾಭಾರತ ಸೀರಿಯಲ್ ಮೇಲೆ ಅಸಮಾಧಾನಗೊಂಡ ವೀಕ್ಷಕರು ! ಚಾನೆಲ್ ಮೇಲೆ ಗರಂ ಆಗಿದ್ದೇಕೆ ?

Inspire
Advertisements

ನಮಸ್ತೆ ಸ್ನೇಹಿತರೆ, ಮಹಾಭಾರತ ಹಿಂದೂಗಳ ಪೂಜ್ಯನೀಯ ಮಹಾನ್ ಗ್ರಂಥಗಳಲ್ಲಿ ಒಂದು. ಜಗತ್ತಿಗೆ ನಿಜವಾದ ಧರ್ಮ ಏನೆಂಬುದನ್ನ ತೋರಿಸಿಕೊಟ್ಟ ಮಹಾನ್ ಕಾವ್ಯ. ಈಗ ಇದೆ ಮಹಾಭಾರತ ದೃಶ್ಯ ರೂಪದಲ್ಲಿ ಪ್ರಸಾರವಾಗುತ್ತಿದೆ. ಭಾರತದ ಕಿರುತೆರೆ ಇತಿಹಾಸದಲ್ಲಿಯೇ ಹೊಸ ಮೈಲಿಗಲ್ಲು ಸ್ಥಾಪಿಸಿದ್ದ ಈ ದೃಶ್ಯಕಾವ್ಯ ಈಗ ಕನ್ನಡದಲ್ಲಿಯೂ ಪ್ರಸಾರವಾಗುತ್ತಿದ್ದು ಹಿಂದೆಂದೂ ಕಂಡುಕೇಳರಿಯದ ದೃಶ್ಯ ವೈಭವವನ್ನು ಕನ್ನಡಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.

Advertisements

ಹಿಂದಿಯಲ್ಲಿ ನೋಡಿ ಸರಿಯಾಗಿ ಅರ್ಥ ಆಗದೆ ಅಷ್ಟಕ್ಕೇ ಸಮಾಧಾನಪಟ್ಟುಕೊಂಡಿದ್ದ ಎಷ್ಟೋ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ ಮಹಾಭಾರತ ಪ್ರತೀ ದಿನ ರಸ ದೌತಣವನ್ನೇ ನೀಡುತ್ತಿದೆ. ವಾಸುದೇವ ಕೃಷ್ಣನ ತಂತ್ರ, ಶಕುನಿಯ ಕುತಂತ್ರ, ದುರ್ಯೋಧನನ ಕಪಟ, ಪಾಂಡವರ ಜೇಷ್ಠ ಧರ್ಮರಾಯನ ಧರ್ಮ, ಕರ್ಣಾಜುನರ ಕಾಳಗ, ದೈತ್ಯ ದೇಹಿ ಭೀಮನ ಆರ್ಭಟ, ಪಿತಾಮಹ ಭೀಷ್ಮನ ಪ್ರತಿಜ್ಞೆ ಇವೆಲ್ಲವೂ ಕಣ್ಣಿಗೆ ಕಟ್ಟಿದಂತೆ ನಮ್ಮ ಮುಂದೆಯೇ ನಡೆಯುತ್ತಿದೆಯೇ ಎಂಬಂತೆ ಪ್ರಸಾರವಾಗುತ್ತಿದೆ ಈ ಮಹಾನ್ ದೃಶ್ಯಕಾವ್ಯ.

ಸ್ಟಾರ್ ಸುವರ್ಣ ವಾಹಿನಿಯು ಮಹಾಭಾರತವನ್ನ ಕನ್ನಡದಲ್ಲಿ ಪ್ರಸಾರ ಮಾಡುತ್ತಿರುವುದಕ್ಕೆ ಸಾವಿರಾರು ವೀಕ್ಷಕರು ಧನ್ಯವಾದಗಳನ್ನ ಅರ್ಪಿಸುತ್ತಿದ್ದಾರೆ. ಆದರೆ ಅನೇಕರು ವಾಹಿನಿಯ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಹೌದು ಸ್ನೇಹಿತರೆ, ಮಹಾಭಾರತದ ಎಪಿಸೋಡ್ ಗಳು ಅತಿ ವೇಗವಾಗಿ ಮುಗಿಯುತ್ತಿರುವುದು ಹಾಗೂ ಅನೇಕ ಸನ್ನಿವೇಶಗಳನ್ನ ಸ್ಕಿಪ್ ಮಾಡಿದ್ದಾರೆ ಎನ್ನುವುದು ಜೊತೆಗೆ ನೈಜ ಕತೆಯನ್ನ ಬಿಟ್ಟು ಕೆಲವು ಕಾಲ್ಪನಿಕ ಸನ್ನಿವೇಶಗಳನ್ನ ಸೇರಿಸಿದ್ದಾರೆ ಎಂಬುದೇ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. (ವೀಕ್ಷಕರು ಮಾಡಿರುವ ಕಾಮೆಂಟ್ ಗಳು ಕೆಳಗಡೆ ಇರುವ ಈ ಚಿತ್ರದಲ್ಲಿದೆ ನೋಡಿ)

ಹೌದು, ಹನ್ನೆರಡು ವರ್ಷ ವನವಾಸ ಹಾಗೂ ಒಂದು ವರ್ಷದ ಅಜ್ನ್ಯಾತ ವಾಸವನ್ನ ಕೇವಲ ಮೂರೇ ದಿನದಲ್ಲಿ ತೋರಿಸಿ ಮುಗಿಸಿದ್ದಾರೆ. ಇನ್ನು ದ್ರೌಪದಿ ಸಮೇತ ಪಂಚ ಪಾಂಡವರು ಅಜ್ನ್ಯಾತ ವಾಸದ ವೇಳೆ ಮತ್ಸ್ಯ ದೇಶದ ರಾಜ ವಿರಾಟನ ಆಶ್ರಯದಲ್ಲಿದ್ದಾಗ ಕೌರವರು ಗೋವುಗಳಿಗಾಗಿ ವಿರಾಟರಾಜನ ರಾಜ್ಯದ ಮೇಲೆ ಆಕ್ರಮಣ ಮಾಡುತ್ತಾರೆಯೇ ಹೊರತು ಮತ್ಸ್ಯ ದೇಶದ ಒಳಗೆ ಅವರು ಪ್ರವೇಶ ಮಾಡಿಯೇ ಇರುವುದಿಲ್ಲ. ಜೊತೆಗೆ ಬೃಹನ್ನಳೆ ವೇಷ ಧರಿಸಿದ್ದ ಅರ್ಜುನ ವಿರಾಟ ರಾಜನ ಮಗ ಉತ್ತರ ಕುಮಾರ ಜೊತೆ ಬಂದು ಕೌರವ ಸೇನೆ ಮೇಲೆ ತನ್ನ ಸಮ್ಮೋಹನ ಅಸ್ತ್ರವನ್ನ ಬಿಟ್ಟು ಭೀಷ್ಮ ಕರ್ಣ ದುರ್ಯೋಧನ ಆದಿಯಾಗಿ ಎಲ್ಲರನ್ನು ಮೂರ್ಛೆ ಗೊಳ್ಳುವಂತೆ ಮಾಡಿ ಅವರ ಆಭರಣಗಳನ್ನೆಲ್ಲಾ ತೆಗೆದುಕೊಂಡು ಹೋಗಿ ರಾಜಕುಮಾರಿ ಉತ್ತರೆಗೆ ನೀಡುತ್ತಾನೆ ಎಂಬುದು ವ್ಯಾಸ ಭಾರತದಲ್ಲಿದೆ. ಆದರೆ ಈಗ ಪ್ರಸಾರವಾಗುತ್ತಿರುವ ಮಹಾಭಾರತದಲ್ಲಿ ಇದನ್ನ ಬೇರೆಯದೇ ರೀತಿಯಲ್ಲಿ ತೋರಿಸಲಾಗಿದೆ ಅನೇಕರ ಅಭಿಪ್ರಾಯವಾಗಿದೆ. (ವೀಕ್ಷಕರು ಮಾಡಿರುವ ಕಾಮೆಂಟ್ ಗಳು ಕೆಳಗಡೆ ಇರುವ ಈ ಚಿತ್ರದಲ್ಲಿದೆ ನೋಡಿ)

ಇನ್ನು ಪಾಂಡವರು ವನವಾಸದಲ್ಲಿದ್ದಾಗ ಏಕಚಕ್ರನಗರ (ಇಂದಿನ ಕೈವಾರ ಕ್ಷೇತ್ರ)ದಲ್ಲಿದ್ದಾಗ ಬಕಾಸುರ ಎಂಬ ರಾಕ್ಷಸನನ್ನ ಭೀಮ ವಧೆ ಮಾಡುವ ಸನ್ನಿವೇಶ ಇಲ್ಲ..ಹೀಗೆ ಅನೇಕ ಸನ್ನಿವೇಶಗಳನ್ನ ಕಟ್ ಮಾಡಲಾಗಿದೆ ಎಂಬುದು ವೀಕ್ಷಕರ ವಾದ. ಇನ್ನು ಅನೇಕರು ದಯವಿಟ್ಟು ಮಹಾಭಾರತ ಎಪಿಸೋಡ್ ಗಳನ್ನ ವೇಗವಾಗಿ ಮುಗಿಸಬೇಡಿ ಎಂದರೆ ಹಲವರು ಇದು ಮುಗಿದ ಬಳಿಕ ಮತ್ತೊಮ್ಮೆ ಪ್ರಸಾರಮಾಡಿ ಎಂದು ವಾಹಿನಿಯವರಿಗೆ ಮನವಿ ಮಾಡುತ್ತಿದ್ದಾರೆ. ಯಾವಾಗಲು ಮೊಬೈಲ್ ಸೋಷಿಯಲ್ ಮಿಡಿಯಾಗಳಲ್ಲೇ ಕಳೆಯುವ ಇಂದಿನ ಯುವಜನಾಂಗದಿಂದ ಮಹಾಭಾರತ ಸೀರಿಯಲ್ ಗೆ ಈ ಪಾಟಿ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿರುವುದು ಅಚ್ಚರಿ ಜೊತೆಗೆ ಸಂತೋಷದ ವಿಷಯವಾಗಿದೆ. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ.. ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.