ಕುರಿ ಪ್ರತಾಪ್ ಮತ್ತು ಸೃಜನ್ ಲೋಕೇಶ್ ಮಜಾ ಟಾಕೀಸ್ ನ 1 ಎಪಿಸೋಡ್ ಗೆ ಪಡೆಯೋ ಸಂಭಾವನೆ ಕೇಳಿದ್ರೆ ಅಚ್ಚರಿ ಆಗುತ್ತೆ !

Advertisements

ಸ್ನೇಹಿತರೆ, ವೀಕ್ಷಕರನ್ನ ನಕ್ಕು ನಲಿಸಿ ಮನರಂಜನೆಯ ರಸದೌತಣ ನೀಡುವ ಖ್ಯಾತ ಕಿರುತೆರೆಯ ಕಾಮಿಡಿ ಶೋಗಳಲ್ಲಿ ಮಜಾ ಟಾಕೀಸ್ ಕಾಮಿಡಿ ಶೋ ಕೂಡ ಒಂದು. ಇನ್ನು ಹಲವು ವರ್ಷಗಳಿಂದ ನಡೆಯುತ್ತಿರುವ ಈ ಕಾಮಿಡಿ ಶೋನಲ್ಲಿ ಕಿರುತೆರೆ ಹಾಗೂ ಹಿರಿತೆರೆಯ ಖ್ಯಾತ ಕಲಾವಿದರಿದ್ದಾರೆ. ಟಾಪ್ ನಾಯಕ ನಟರ ಜೊತೆ ಬೆಳ್ಳಿತೆರೆಯಲ್ಲಿ ಮಿಂಚಿರುವ ಹಾಸ್ಯ ಕಲಾವಿದರು ಕೂಡ ಮಜಾ ಟಾಕೀಸ್ ನಲ್ಲಿದ್ದಾರೆ. ಇನ್ನು ನಟ ಸೃಜನ್ ಲೋಕೇಶ್ ಅವರ ನೇತೃತ್ವದಲ್ಲಿ ಪ್ರಸಾರವಾಗುತ್ತಿರುವ ಈ ಶೋ ಹೆಚ್ಚಿನ ವೀಕ್ಷಕರನ್ನ ಹೊಂದಿದ್ದು, TRPಯಲ್ಲೂ ಕೂಡ ಉತ್ತಮ ರೆಕಾರ್ಡ್ ಹೊಂದಿದೆ.

[widget id=”custom_html-4″]

Advertisements

ಇನ್ನು ಈ ಕಾಮಿಡಿ ಶೋ ಮೂಲಕ ಬದುಕು ಕಟ್ಟಿಕೊಂಡ ನಟರು ಇದ್ದಾರೆ. ಹಿರಿಯ ಹಾಸ್ಯ ನಟ ಮಂಡ್ಯ ರಮೇಶ್ ಅಲಿಯಾಸ್ ಮುದ್ದೇಶ, ಕುರಿ ಪ್ರತಾಪ್ ಅಲಿಯಾಸ್ ಕುರಿ, ಶ್ವೇತಾ ಚೆಂಗಪ್ಪ ಅಲಿಯಾಸ್ ರಾಣಿ, ಅನುಪಮಾ ಅಲಿಯಾಸ್ ವರಲಕ್ಷ್ಮಿ, ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಅಲಿಯಾಸ್ ಭಟ್ಟ, ಮಿಮಿಕ್ರಿ ದಯಾನಂದ್, ಪವನ್ ಕುಮಾರ್, ನಿರ್ದೇಶಕ ಇಂದ್ರಜಿತ್ ಲೋಕೇಶ್ ಸೇರಿದಂತೆ ಹಲವಾರು ಖ್ಯಾತ ಕಲಾವಿದರಿದ್ದಾರೆ. ಇನ್ನು ಮಜಾ ಟಾಕೀಸ್ ಕಾಮಿಡಿ ಶೋ ಮೂಲಕ ಹೆಚ್ಚು ಹೆಸರು ಮಾಡಿದವರು ಕುರಿ ಪ್ರತಾಪ್ ಬಿಗ್ ಬಾಸ್ ೭ರ ಸಂಚಿಕೆಯಲ್ಲಿ ಸ್ಪರ್ಧಿಯಾಗುವ ಅವಕಾಶ ಕೂಡ ಪಡೆದುಕೊಂಡು ನೂರು ದಿನಗಳ ಕಾಲ ಬಿಗ್ ಮನೆಯಲ್ಲಿದ್ದ ಕುರಿ ಪ್ರತಾಪ್ ರನ್ನರ್ ಆಪ್ ಆಗಿದ್ದರು.

[widget id=”custom_html-4″]

ಇನ್ನು ಈಗಂತೂ ಕುರಿ ಪ್ರತಾಪ್ ಅವರು ದೊಡ್ಡ ದೊಡ್ಡ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಮಜಾ ಟಾಕೀಸ್ ಮೂಲಕ ಇಷ್ಟೆಲ್ಲಾ ಹೆಸರು ಮಾಡಿರುವ ಕುರಿ ಪ್ರತಾಪ್ ಅವರಿಗೆ ಮಜಾ ಟಾಕೀಸ್ ನಿಂದ ಸಿಗೋ ಸಂಭಾವನೆ ಎಷ್ಟು ಗೊತ್ತಾ? ಕುರಿ ಪ್ರತಾಪ್ ಅವರು ಮಜಾ ಟಾಕೀಸ್ ನ ಎಪಿಸೋಡ್ ಒಂದಕ್ಕೆ ಬರೋಬ್ಬರಿ 50ಸಾವಿರ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ. ಇನ್ನು ಮಜಾ ಟಾಕೀಸ್ ಮೂಲ ಕರ್ತೃ ಆಗಿರುವ ಸೃಜನ್ ಲೋಕೇಶ್ ಅವರು ಕೂಡ ಕಡಿಮೆ ಏನೂ ಇಲ್ಲ. ನಟರೂ ಆಗಿರುವ ಸೃಜನ್ ಅವರು ಈವರೆಗೆ ಹಲವಾರು ಕಿರುತೆರೆ ಶೋಗಳನ್ನ ನಡೆಸುಕೊಟ್ಟಿದ್ದಾರೆ. ಲೋಕೇಶ್ ಪ್ರೊಡಕ್ಷನ್ ನಿರ್ಮಾಣ ಮಾಡಿರುವ ಮಜಾ ಟಾಕೀಸ್ ನ ಒಂದು ಎಪಿಸೋಡ್ ಗೆ 75 ಸಾವಿರದವರೆಗೆ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ವೀಕ್ಷಕರಿಗೆ ಪ್ರತೀ ವಾರ ಮನರಂಜನೆಯ ರಸದೌತಣ ನೀಡುತ್ತಿರುವ ಮಜಾ ಟಾಕೀಸ್ ಹೆಚ್ಚು ವರ್ಷಗಳ ಕಾಲ ಹೀಗೆ ಪ್ರಸಾರವಾಗಲಿ..