ದಶಕಗಳ ಕಾಲ ನಾಯಕಿನಟಿಯಾಗಿ ಮೆರೆದ ಕನಸಿನ ರಾಣಿ ಮಾಲಾಶ್ರಿಯವರ ಪುತ್ರಿ ಹೇಗಿದ್ದಾರೆ ನೋಡಿ..

Cinema

ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಕನಸಿನ ರಾಣಿ ಮಾಲಾಶ್ರೀ. ಇನ್ನು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನಾಳಿದ ನಟಿ ಮಾಲಾಶ್ರೀ ಅಂಬರೀಷ್, ರವಿಚಂದ್ರನ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಸುನಿಲ್, ಶಶಿಕುಮಾರ್ ಸೇರಿದಂತೆ ಸ್ಟಾರ್ ನಟರ ಜೊತೆ ನಟಿಸಿದವರು.

ಇನ್ನು ಕನ್ನಡ ಚಿತ್ರರಂಗದಲ್ಲಿ ನಾಯಕ ನಟರಂತೆ ಮಿಂಚಿದ ನಟಿಯೆಂದರೆ ಅದು ಮಾಲಾಶ್ರಿಯವರು ಮಾತ್ರ.

ಇನ್ನು ಕೋಟಿ ನಿರ್ಮಾಪಕ ಎಂದೇ ಹೆಸರಾಗಿರುವ ರಾಮು ಜೊತೆ ಮದುವೆಯಾದವರು. ಇನ್ನು ಈ ಮುದ್ದಿನ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಪುತ್ರ ಆರ್ಯನ್ ಹಾಗೂ ಪುತ್ರಿ ಅನನ್ಯಾ ಎಂದು.

ಇನ್ನು ಅನನ್ಯಾ ಬಿಷಪ್ ಕಾಟನ್ ಗರ್ಲ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಫೇಸ್ಬುಕ್ ನಲ್ಲಿ ತಮ್ಮ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ.

ಇನ್ನು ಗಂಗಾ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿರುವ ಮಾಲಾಶ್ರೀಯವರು ೨೬ ಚಿತ್ರಗಳಲ್ಲಿ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.