ಸಪ್ಲೈಯರ್‌ ಆಗಿ ಕೆಲಸ ಮಾಡುತ್ತಿದ್ದ ಹುಡುಗ ಸ್ಯಾಂಡಲ್ವುಡ್ ನಲ್ಲಿ ಕೋಟಿ ರಾಮು ಆಗಿ ಬೆಳೆದಿದ್ದೇಗೆ ಗೊತ್ತಾ !

Advertisements

ಸ್ನೇಹಿತರೇ, ಚಂದನವನದ ಖ್ಯಾತ ನಟಿ ಮಾಲಾಶ್ರಿಯವರ ಪತಿ, ಕೋತಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು ಅವರು ನೆನ್ನೆಯಷ್ಟೇ ಕೊ’ರೋನಾದಿಂದಾಗಿ ತಮ್ಮ ಜೀವ ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದರೆ ತಪ್ಪಾಗಲಾರದು. ಇನ್ನು ಈ ಸಮಯದಲ್ಲಿ ನಟಿ ಮಾಲಾಶ್ರೀ ಮತ್ತು ಅವರ ಎರಡು ಮಕ್ಕಳ ಸ್ಥಿತಿಯಂತೂ ಮನಕಲಕುವಂತಿದೆ. ಇನ್ನು ಆಗಿನ ಕಾಲಕ್ಕೆ ಕೋಟ್ಯಂತರ ಹಣ ಹೂಡಿ ಸಿನಿಮಾಗಳನ್ನ ಮಾಡುತ್ತಿದ್ದ ಕಾರಣ ಅವರಿಗೆ ಕೋಟಿ ರಾಮು ಎಂಬ ಹೆಸರು ಬಂದಿತು. ಸಪ್ಲೈಯರ್‌ ಆಗಿ ಕೆಲಸ ಮಾಡುತ್ತಿದ್ದ ರಾಮು ಅವರು ಯಾವುದೇ ಗಾಡ್ ಫಾದರ್ ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ಇಷ್ಟು ಎತ್ತರಕ್ಕೆ ಬೆಳೆದು ಕೋಟಿ ನಿರ್ಮಾಪಕ ಎಂದು ಖ್ಯಾತರಾದವರು.

[widget id=”custom_html-4″]

Advertisements

ಹೌದು, ಕುಣಿಗಲ್ ನಲ್ಲಿ ಹುಟ್ಟಿದ ರಾಮು ಅವರು ಕೆಲಸ ಹುಡುಕಿಕೊಂಡು ಬಂದು ಬೆಂಗಳೂರಿನ ಗಾಲ್ಫ್ ಕ್ಲಬ್ ಒಂದ್ರಲ್ಲಿ ಸಪ್ಲೈಯರ್‌ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಆಗಿನಿಂದಲೇ ಸಿನಿಮಾ ರಂಗದ ಕಡೆ ಸೆಳೆತ ಹೆಚ್ಚಾಗಿದ್ದ ರಾಮು ಅವರು ಸಿನಿಮಾಗಳನ್ನ ನಿರ್ಮಾಣ ಮಾಡುವ ಆಫೀಸ್ ಒಂದರಲ್ಲಿ ಆಫೀಸ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇದೆ ವೇಳೆ ಸಿನಿಮಾ ನಿರ್ಮಾಣ ಮಾಡುವುದನ್ನ ಕಲಿತ ರಾಮು ಅವರು ಚಿತ್ರರಂಗದ ಕಡೆ ಕಾಲಿಡುತ್ತಾರೆ. ಇನ್ನು ರಾಮು ಅವರಿಗೆ ಆಕ್ಷನ್ ಸಿನಿಮಾ ಗಳೆಂದರೆ ತುಂಬಾ ಇಷ್ಟವಿದ್ದ ಕಾರಣ ಪರಭಾಷೆಯವರಿಗಿಂತ ಸ್ಯಾಂಡಲ್ವುಡ್ ನಲ್ಲಿ ಅದ್ದೂರಿಯಾದ ಆಕ್ಷನ್ ಸಿನಿಮಾವೊಂದನ್ನ ನಿರ್ಮಾಣ ಮಾಡಬೇಕು ಎಂದು ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಾರೆ.

[widget id=”custom_html-4″]

ಒಬ್ಬ ಸಪ್ಲೈಯರ್‌ ಆಗಿ ಕೆಲಸ ಮಾಡುತ್ತಿದ್ದ ಹುಡುಗ ೧೯೯೩ರಲ್ಲಿ ನಟ ದೇವರಾಜ್ ಅವರ ಅಭಿನಯದ ಗೋ’ಲಿಬಾರ್ ಚಿತ್ರವನ್ನ ನಿರ್ಮಾಣ ಮಾಡುತ್ತಾರೆ ರಾಮು ಅವರು. ಇನ್ನು ಆ ಚಿತ್ರದ ಮೇಕಿಂಗ್ ಬಜೆಟ್ ನೋಡಿ ಇಡೀ ಚಿತ್ರರಂಗ ಆ ಕಾಲಕ್ಕೆ ಮರುಳಾಗಿತ್ತು. ಇನ್ನು ತಾವು ನಿರ್ಮಾಣ ಮಾಡಿದ ಮೊತ್ತ ಮೊದಲ ಸಿನಿಮಾ ಗೋ’ಲಿಬಾರ್ ಚಿತ್ರ ಬಾಕ್ಸ್ ಆಫಿಸ್ ನಲ್ಲಿ ಗೆಲ್ಲುತ್ತದೆ. ಅಲ್ಲಿಂದ ಶುರುವಾದ ನಿರ್ಮಾಪಕ ರಾಮು ಅವರ ಸಿನಿ ಪಯಣ, ಲಾಕಪ್ ಡೆ’ತ್, ಏಕೆ 47, ಸಿಂಹದ ಮರಿ, ಕಲಾಸಿಪಾಳ್ಯ, ಸರ್ಕಲ್ ಇನ್ಸಪೆಕ್ಟರ್ ನಂತಹ ಅದ್ದೂರಿ ಚಿತ್ರಗಳು ಸೇರಿದಂತೆ ಅನೇಕ ಚಿತ್ರಗಳನ್ನ ಕನ್ನಡಕ್ಕೆ ಕೊಟ್ಟ ಕೀರ್ತಿ ರಾಮು ಅವರಿಗೆ ಸಲ್ಲುತ್ತದೆ.

[widget id=”custom_html-4″]

ಆಗಿನ ಕಾಲಕ್ಕೆ ಸ್ಟಾರ್ ನಟರಾಗಿದ್ದ ದೇವರಾಜ್, ಶಶಿಕುಮಾರ್, ಶಿವರಾಜ್ ಕುಮಾರ್ ಮಾಲಾಶ್ರೀ ಸೇರಿದಂತೆ ದರ್ಶನ್, ಕಿಚ್ಚ ಸುದೀಪ್ ಸೇರಿದಂತೆ ಬಹುತೇಕ ನಟರಿಗೆ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ರಾಮು ಅವರು ೧೯೯೭ರಿಂದ ಇಲ್ಲಿಯ ತನಕ ಸುಮಾರು ೩೮ಕ್ಕಿಂತ ಹೆಚ್ಚು ಸಿನಿಮಾಗಳಿಗೆ ನಿರ್ಮಾಣ ಮಾಡಿದ್ದಾರೆ. ದೇಹ ದೊಡ್ಡದಾಗಿದ್ದರೂ ನಾಚಿಕೆಯ ಸ್ವಭಾವದವರಾಗಿದ್ದ ರಾಮು ಅವರು ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇನ್ನು ರಾಮು ಅವರ ನಿರ್ಮಾಣದ ಕಡೆಯ ಚಿತ್ರ ಅರ್ಜುನ್ ಗೌಡ ಪೂರ್ತಿಯಾಗಿದ್ದು ಬಿಡುಗಡೆಯ ಹೊಸ್ತಿಲಲ್ಲಿದೆ. ಸುಂದರವಾದ ಕುಟುಂಬ ಹೊಂದಿರುವ ರಾಮು ಮಾಲಾಶ್ರೀ ದಂಪತಿಗೆ ಅನನ್ಯ, ಆರ್ಯನ ಹೆಸರಿನ ಇಬ್ಬರು ಮಕ್ಕಳಿದ್ದಾರೆ.

ಇನ್ನು ಮಾಹಿತಿಗಳ ಪ್ರಕಾರ ತನ್ನ ಮಗಳಾದ ಅನನ್ಯ ಅವರನ್ನ ಸಿನಿಮಾ ರಂಗಕ್ಕೆ ಪರಿಚಯಿಸುವ ಸಲುವಾಗಿ ಫೋಟೋಶೂಟ್ ಕೂಡ ಮಾಡಲಾಗಿತ್ತು ಎಂದು ಹೇಳಲಾಗಿದೆ. ಆದರೆ ತನ್ನ ಮಗಳನ್ನ ಬಣ್ಣದ ಲೋಕಕ್ಕೆ ಪರಿಚಯಿಸುವ ಮೊದಲೇ ನಿರ್ಮಾಪಕ ರಾಮು ಅವರು ತನ್ನ ಮುದ್ದಾದ ಕುಟುಂಬವನ್ನ ಬಿಟ್ಟು ಹೋಗಿದ್ದಾರೆ. ಸಪ್ಲೈಯರ್‌ ಆಗಿದ್ದ ಒಬ್ಬ ಹುಡುಗ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕ ಎಂದು ಕರೆಸಿಕೊಳ್ಳುವಷ್ಟರ ಮಟ್ಟಿಗೆ ಬೆಳೆದಿದ್ದು ಕಮ್ಮಿ ಸಾಧನೆ ಏನೂ ಅಲ್ಲ. ತನ್ನ ಪ್ರೀತಿಯ ಪತಿಯನ್ನ ಕಳೆದುಕೊಂಡಿರುವ ಮಾಲಾಶ್ರೀ ಮತ್ತು ಅವರ ಮಕ್ಕಳಿಗೆ ದುಃಖವನ್ನ ಭರಿಸುವಂತಹ ಧೈರ್ಯ ಆ ದೇವರು ಕೊಡಲಿ ಎಂದು ನಾವು ಪ್ರಾರ್ಥನೆ ಮಾಡೋಣ..