ತನ್ನ ಸಮಾಧಿಗಾಗಿ ಬದುಕಿದ್ದಾಗಲೇ ಭೂಮಿ ಖರೀದಿ ಮಾಡಿದ ಕನ್ನಡದಲ್ಲಿ ನಟಿಸಿದ್ದ ಸ್ಟಾರ್ ನಟಿ! ಅಸಲಿ ಕಾರಣ ಏನ್ ಗೊತ್ತಾ?

Cinema
Advertisements

ಈ ಜಗದಲ್ಲಿ ಆಸೆಯೇ ಇಲ್ಲದ ಮನುಷ್ಯ ಇಲ್ಲವೇ ಇಲ್ಲ. ಒಬ್ಬಬ್ಬರಿಗೆ ಒಂದೊಂದು ರೀತಿಯ ಆಸೆಗಳು ಇರುತ್ತವೆ. ಆದ್ರೆ ಕೆಲವರ ಆಸೆಗಳನ್ನ ಕೇಳಿದ್ರೆ ವಿಚಿತ್ರ ಎನಿಸುತ್ತದೆ. ಆದೆ ರೀತಿ ಸ್ಯಾಂಡಲ್ ವುಡ್ ನಲ್ಲಿ ನಟಿಸಿದ್ದ ಈ ನಟಿಯ ಮನಸ್ಸಿನಲ್ಲಿ ಮೂಡಿದ ಆದೆಯಾ ಬಗ್ಗೆ ಕೇಳಿದ್ರೆ ನಿಮಗೆ ಅದು ವಿಚಿತ್ರ ಎನಿಸದೆ ಇರೋದಿಲ್ಲ. ತನ್ನ ತಂದೆ ತಾಯಿ ಬೇಡ ಎಂದರು ಅವರ ಮಾತನ್ನ ಕೇಳದೆ, ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಈ ನಟಿಯ ಹೆಸರು ರೇಖಾ ಎಂದು. ಮೂಲತಃ ತಮಿಳುನಾಡಿನವರಾದ ಈ ನಟಿ ಫೇಮಸ್ ಆಗಿದ್ದು ಮಾತ್ರ ಮಲಯಾಳಂ ಚಿತ್ರರಂಗದಲ್ಲಿ. ನಟ ದರ್ಷನ್ ಅವರ ಅಂಬರೀಶ ಚಿತ್ರ ಸೇರಿದಂತೆ, ಪೂರ್ಣ ಚಂದ್ರ, ಶತ್ರು ಹಾಗೂ ಪ್ರೇಮ ಕೈದಿ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

[widget id=”custom_html-4″]

ನಟಿ ರೇಖಾ ಅವರ ತಂದೆಯ ಹೆಸರು ವರದ್ ರಾಜ್ ಎಂದು. ತಂದೆ ಮಗಳು ಇಬ್ಬರಲ್ಲೂ ಅಪಾರವಾದ ಪ್ರೀತಿ ಇತ್ತು. ಆದರೆ ತಾನು ಸಿನಿಮಾದಲ್ಲಿ ನಟಿಸಬೇಕೆಂಬ ತನ್ನ ಆಸೆಯನ್ನ ತಂದೆಯ ಬಳಿ ವ್ಯಕ್ತಪಡಿಸಿದಾಗ ಅವರು ಇದಕ್ಕೆ ಅನುಮತಿ ಕೊಡಲಿಲ್ಲ. ನಮ್ಮದು ಸಂಪ್ರದಾಯ ಮನೆತನದ ಕುಟುಂಬ ಆಗಿರುವ ಕಾರಣ ನೀನು ಸಿನಿಮಾಗಳಲ್ಲಿ ನಟಿಸಬಾದು ಎಂದು ಮಗಳ ಆಸೆಗೆ ತಂದೆ ವರದ್ ರಾಜ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದ್ರೆ ಸಿನಿಮಾ ರಂಗದಲ್ಲಿ ಬೆಳೆಯಬೇಕು ಎಂದು ಕನಸು ಕಂಡಿದ್ದ ರೇಖಾ ಅವರು ಪ್ರೀತಿಯ ತಂದೆಯ ಮಾತನ್ನ ದಿಕ್ಕರಿಸಿ ಸಿನಿಮಾಗಳಲ್ಲಿ ನಟಿಸಿದ್ರು. ಇದರಿಂದ ತಂದೆಯ ಪ್ರೀತಿಯನ್ನ ರೇಖಾ ಅವರು ಕಳೆದುಕೊಳ್ಳಬೇಕಾಯಿತು. ಇದರಿಂದ ರೇಖಾ ಅವರು ಕೂಡ ತುಂಬಾ ನೊಂದುಕೊಂಡರು. ಅವರ ತಂದೆ ಕೂಡ ರೇಖಾ ಅವರು ನಟಿಸಿದ ಯಾವ ಸಿನಿಯಾ ಕೂಡ ನೋಡಲಿಲ್ಲ.

[widget id=”custom_html-4″]

Advertisements

ಇನ್ನು ಹೀಗೆ ದಿನಗಳು ಕಳೆದಂತೆ ಒಂದು ದಿನ ನಟಿ ರೇಖಾ ಅವರ ತಂದೆ ನಿಧನಹೊಂದಿದರು. ತನ್ನ ಪ್ರೀತಿಯ ತಂದೆಯ ಸಮಾಧಿಯನ್ನ ಚೆನ್ನೈನ ಕೀಲಿಪಕಾಮ್ ಎಂಬಲ್ಲಿ ಕಟ್ಟಿಸಿದ ರೇಖಾ ಅವರು ಆ ಸಮಾಧಿಯ ಪಕ್ಕದಲ್ಲೇ ಸ್ವಲ್ಪ ಭೂಮಿಯನ್ನ ಖರೀದಿಮಾಡುತ್ತಾರೆ. ತಂದೆ ಬದುಕಿದ್ದಾಗ ಅವರ ಪ್ರೀತಿಯಂತೂ ನನಗೆ ಸಿಗಲಿಲ್ಲ ಎಂದು ತುಂಬಾ ನೋವು ಅನುಭವಿಸಿದ್ದ ರೇಖಾ ಅವರು ನಾನು ಇಹಲೋಕ ತ್ಯಜಿಸಿದಾಗ ನನ್ನ ತಂದೆಯ ಸಮಾಧಿ ಪಕ್ಕದಲ್ಲೇ ನನ್ನ ಸಮಾಧಿ ಮಾಡಬೇಕೆಂಬ ಕುಟುಂಬದವರ ಕಡೆಯಿಂದ ಮಾತು ತೆಗೆದುಕೊಂಡಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆ ಬಹಿರಂಗ ಮಾಡಿದ್ದಾರೆ ನಟಿ ರೇಖಾ ಅವರು. ತಂದೆಯ ಪ್ರೀತಿಯೆಂದರೆ ಆಗೇ ಅಲ್ಲವೇ..ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ತಿಳಿಸಿ..