ಸಿಕ್ಕಾಪಟ್ಟೆ ಫೇಮಸ್ ಆದ ಕಣ್ಣೇ ಅದಿರಿಂದಿ ಹಾಡಿಗೆ ಮಂಗ್ಲಿ ಪಡೆದ ಹಣ ಎಷ್ಟು ಗೊತ್ತಾ ?

Cinema
Advertisements

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಡಿ ಬಾಸ್ ದರ್ಶನ್ ಅವರ ಅಭಿನಯದ, ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಅದ್ದೂರಿ ಚಿತ್ರ ರಾಬರ್ಟ್ ಬರೊಬ್ಬರೋ ೧೦೦ಕೋಟಿ ಕಲೆಕ್ಷನ್ ಮಾಡುವ ಮೂಲಕ ದೊಡ್ಡ ಇತಿಹಾಸವನ್ನೇ ಸೃಷ್ಟಿ ಮಾಡಿತ್ತು. ದಾಸ ದರ್ಶನ್ ಅವರು ಮೂರೂ ಶೇಡ್ ಗಳಲ್ಲಿ ಅಭಿನಯಯಿಸಿದ್ದ ರಾಬರ್ಟ್ ಚಿತ್ರದಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ ಕೂಡ ನಟಿಸಿದ್ದರು. ಇನ್ನು ಇದೆ ಮೊದಲ ಬಾರಿಗೆ ದರ್ಶನ್ ಅವರ ರಾಬರ್ಟ್ ಆಂಧ್ರ ತೆಲಂಗಾಣದಲ್ಲೂ ಬಿಡುವದೇ ಕಂಡಿತ್ತು. ಇನ್ನು ಚಿತ್ರದ ಹಾಡುಗಳೇ ಅಷ್ಟೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದವು. ಇನ್ನು ತೆಲುಗು ವರ್ಷನ್ ನಲ್ಲಿ ಅದ್ಭುತವಾಗಿ ಮೂಡಿಬಂದಿದ್ದ ‘ಕಣ್ಣೇ ಅದಿರಿಂದಿ’ ಹಾಡು ಅಂತೂ ದೂಳೆಬ್ಬಿಸಿತ್ತು.

[widget id=”custom_html-4″]

Advertisements

ಹೌದು, ಈ ಹಾಡನ್ನ ಹಾಡಿದವರು ತೆಲುಗಿನ ಗಾಯಕನ್ ಮಂಗ್ಲಿ ಖ್ಯಾತಿಯ ಸತ್ಯವತಿ ರಾಥೋಡ್. ಹೈದರಾಬಾದ್ ನಲ್ಲಿ ನಡೆದಿದ್ದ ರಾಬರ್ಟ್ ಪ್ರೀ ರಿಲೀಸ್ ಕಾರ್ಯಕ್ರಮದ ವೇದಿಕೆಯಲ್ಲಿ ಕಣ್ಣೇ ಅದಿರಿಂದಿ ಹಾಡನ್ನ ಮಂಗಲಿ ಲೈವ್ ಆಗಿ ಹಾಡಿ, ಡಿ ಬಾಸ್ ಅಭಿಮಾನಿಗಳ ಮನ ತಣಿಯುವಂತೆ ಮಾಡಿದ್ರು. ಈ ಹಾಡು ಎಷ್ಟರ ಮಟ್ಟಿಗೆ ಫೇಮಸ್ ಆಯ್ತು ಎಂದರೆ, ಕನ್ನಡದ ‘ಕಣ್ಣು ಹೊಡೆಯಾಕ’ಹಾಡಿಗಿಂತ ಮಂಗಲಿ ಹಾಡಿದ್ದ ತೆಲುಗು ವರ್ಷನ್ ಡಿ ಬಾಸ್ ಅಭಿಮಾನಿಗಳಲ್ಲಿ ಸಿನಿಮಾದ ಬಗ್ಗೆ ಇದ್ದ ಕ್ರೇಜ್ ನ್ನ ಮತ್ತಷ್ಟು ಹೆಚ್ಚುವಂತೆ ಮಾಡಿತ್ತು. ಅಲ್ಲಿಯವರೆಗೂ ಕನ್ನಡದವರಿಗೆ ಅಷ್ಟೊಂದು ಚಿರಪರಿಚಿತರಲ್ಲದ ಗಾಯಕಿ ಮಂಗ್ಲಿ, ಕರ್ನಾಟಕದಲ್ಲಿ ಸಿಕ್ಕಾಪಟ್ಟ ಈ ಫೇಮಸ್ ಆಗಿಬಿಟ್ಟರು.

[widget id=”custom_html-4″]

ಒಟ್ಟಿನಲ್ಲಿ ತೆಲುಗಿನವರು ಸಹ ರಾಬರ್ಟ್ ತೆಲುಗು ವರ್ಷನ್ ಸಿನಿಮಾ ನೋಡುವಂತೆ ಮಾಡಿದು ಗಾಯಕಿ ಮಂಗಲಿ ಹಾಡಿದ ಈ ಹಾಡಿನಿಂದ ಎಂದರೆ ತಪ್ಪಾಗೊದಿಲ್ಲ. ಹಾಗಾದ್ರೆ,ಇಷ್ಟೆಲ್ಲಾ ಸೆನ್ಸೇಷನ್ ಕ್ರಿಯೇಟ್ ಮಾಡಿದ ಹಾಡಿದ ಕಣ್ಣೇ ಅದಿರಿಂದಿ ಹಾಡಿಗೆ ಗಾಯಕಿ ಮಂಗ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತಾ ? ತೆಲುಗಿನ ಕಿರುತೆರೆ ವಾಹಿನಿಯಲ್ಲೂ ಕೂಡ ನಿರೂಪಕಿಯಾಗಿ ಕೆಲಸ ಮಾಡಿರುವ ಮಂಗ್ಲಿ ಅಲಿಯಾಸ್ ಸತ್ಯವತಿ ರಾಥೋಡ್ ಅವರು ಈ ಹಾಡಿಗಾಗಿ 1 ಲಕ್ಷ 80 ಸಾವಿರ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಮಾಹಿತಿಯೊಂದರ ಪ್ರಕಾರ ಕರ್ನಾಟಕ ಸಂಗೀತದಲ್ಲಿ ಡಿಪ್ಲೋಮ ಮಾಡಿರುವ ಮಂಗ್ಲಿ ಕನ್ನಡದ ಸಿನಿಮಾವೊಂದಕ್ಕೆ ಕನ್ನಡದಲ್ಲೇ ಹಾಡಲಿದ್ದಾರೆ ಎಂದು ಹೇಳಲಾಗಿದೆ.