ಸ್ನೇಹಿತರೇ, ಈಗಾಗಲೇ ಸೋಂಕಿನ ಕಾರಣದಿಂದಾಗಿ ಕಿರುತೆರಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸಲ್ ೮ ಅರ್ಧಕ್ಕೆ ಸ್ಟಾಪ್ ಆಗಿದ್ದು ಉಳಿದಿದ್ದ ೧೧ ಸ್ಪರ್ಧಿಗಳೂ ತಮ್ಮ ತಮ್ಮ ಮನೆಗಳಿಗೆ ಹೋಗಿ ಆಗಿದೆ. ಇನ್ನು ಬಿಗ್ ಬಾಸ್ ಶೋ ಅರ್ಧಕ್ಕೆ ನಿಂತ ಕಾರಣ ಮನೆಯಲ್ಲಿ ಉಳಿದಿದ್ದ ಸ್ಪರ್ಧಿಗಳಿಗೆ ತುಂಬಾ ಬೇಜಾರಾಗಿದ್ದಂತೂ ನಿಜ. ಅದರಲ್ಲೂ ಮಜಾ ಭಾರತ ಖ್ಯಾತಿಯ ಮಂಜು ಪಾವಗಡ ಹಾಗೂ ಕೆಪಿ. ಅವರವಿಂದ್ ಅವರು ಈ ಬಿಗ್ ಬಾಸ್ ನ ವಿನ್ನರ್ ಗಳು ಎಂದು ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದರು.
[widget id=”custom_html-4″]

ಇನ್ನು ಬಿಗ್ ಬಾಸ್ ಮನೆಯಲ್ಲಿ ತನ್ನ ಮನರಂಜನೆಯಿಂದ ಬಿಗ್ ಬಾಸ್ ನ ವೀಕ್ಷಕರ ಮನಸೆಳೆದಿದ್ದ ಪಾವಗಡ ಮಂಜು ಅವರೇ ವಿನ್ನರ್ ಆಗುತ್ತಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಸುದ್ದಿಯಾಗುತ್ತಲೇ ಇತ್ತು. ಇನ್ನು ಬಡತನದಲ್ಲಿ ಹುಟ್ಟಿ ಕಷ್ಟಗಳ ನಡುವೆಯೇ ಬೆಳೆದು ಬಂದಿದ್ದ ಮಂಜು ಪಾವಗಡ ಅವರು ವಿನ್ನರ್ ಆಗೋದು ಪಕ್ಕಾ ಎಂಬ ಮಾತುಗಳು ಕೇಳಿ ಬರುತ್ತಲೇ ಇದ್ದವು. ಆದರೆ ಕೊ’ರೋನಾ ಹೆಚ್ಚಾದ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿದ್ದು ಬಿಗ್ ಬಾಸ್ ಅರ್ಧಕ್ಕೆ ನಿಲ್ಲಿಸಲಾಯಿತು. ಇನ್ನು ಈ ಸುದ್ದಿಯನ್ನ ಕೇಳಿದ ಪಾವಗಡ ಮಂಜು ಬಿಗ್ ಬಾಸ್ ಮನೆಯಿಂದ ಹೊರಬರುವ ಮುನ್ನ ಕಣ್ಣೀರಿಟ್ಟಿದ್ದರು. ನಾನು ಗೆದ್ದೇ ಗೆಲ್ಲುತ್ತೇನೆ ಅನ್ನೋ ನಂಬಿಕೆ ನನ್ನಲ್ಲಿತ್ತು. ಬಿಗ್ ಬಾಸ್ ನಿಂದ ಏನೋ ಬರುತ್ತೆ, ಅದರಿಂದ ಹೊಸ ಬದುಕನ್ನ ಕಟ್ಟಿಕೊಳ್ಳುವೆ ಎಂಬ ಆಸೆ ಇತ್ತು. ಆದರೆ ನನಗೆ ಹಣೆಬರಹ ಸರಿ ಇಲ್ಲ. ನಾನು ಸ್ಪರ್ಧಿಯಾಗಿದ್ದ ಈ ಬಿಗ್ ಬಾಸ್ ಸಂಚಿಕೆಯಲ್ಲೇ ಈ ರೀತಿ ಆಗಬೇಕಿತ್ತಾ..ಎಂದು ತಮ್ಮ ಬೇಸರವನ್ನ ಬಿಗ್ ಬಾಸ್ ಮನೆಯಲ್ಲೇ ಹೊರಹಾಕಿದ್ದರು ಪಾವಗಡ ಮಂಜು.
[widget id=”custom_html-4″]

ಇನ್ನು ಗೆಲ್ಲುವ ಸ್ಫರ್ಧಿ ಎನಿಸಿದ್ದ ಮಂಜು ಅವರು ಪಡೆದುಕೊಂಡಿರುವ ಸಂಭಾವನೆ ಬಗ್ಗೆ ವೀಕ್ಷಕರಲ್ಲಿ ಇದ್ದೆ ಇದೆ. ಹೌದು, ಈ ಮೊದಲೇ ಬಿಗ್ ಬಾಸ್ ಜೊತೆ ಮಾತು ಕತೆಯಾಗಿರುವಂತ ವಾರಕ್ಕೆ 30 ಸಾವಿರ ಸಂಭಾವನೆ ಕೊಡಲಾಗಿದೆ ಎಂದು ಹೇಳಲಾಗಿದೆ. ಇನ್ನು ಹತ್ತು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಮಂಜು ಅವರಿಗೆ ಒಟ್ಟು 3 ಲಕ್ಷ ಸಂಭಾವನೆ ದೊರೆತಿದೆ ಎಂದು ಹೇಳಲಾಗಿದೆ. ಇನ್ನು ಮಾಹಿತಿಗಳ ಪ್ರಕಾರ ಅರ್ಧಕ್ಕೆ ನಿಂತಿರುವ ಬಿಗ್ ಬಾಸ್ ಮತ್ತೆ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಬಿಗ್ ಬಾಸ್ ಅರ್ಧಕ್ಕೆ ನಿಂತಿದ್ದರೂ ಸಿನಿಮಾ ರಂಗದಲ್ಲಿ ಅವಕಾಶಗಳು ಅರಸಿ ಬರಲಿವೆ ಎಂಬ ನಿರೀಕ್ಷೆಯಲ್ಲಿದ್ದಾರೆ ಪಾವಗಡ ಮಂಜು. ಅವರಿಗೆ ಹೆಚ್ಚೆಚ್ಚು ಅವಕಾಶಗಳು ದೊರೆತು ದೊಡ್ಡ ನಟನಾಗಿ ಬೆಳೆಯಲಿ ಎಂಬುದೇ ನಮ್ಮಯ ಆಶಯ..