ಸುದೀಪ್ ಮುಂದೆಯೇ ಮಂಜು ಪಾವಗಡ ಮೇಲೆ ಸಿಡಿದೆದ್ದ ಚಕ್ರವರ್ತಿ !ಆ ಲಕ್ಕಿ ಕಂಟೆಸ್ಟೆಂಟ್ ಕೈಗೆ ಚೊಂಬು ಕೊಟ್ಟಿದ್ದೇಕೆ ?

Entertainment
Advertisements

ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಮೊದಲ ದಿನವೇ ಜಡೆಗಳ ನಡುವೆ ಜುಗಲ್ ಬಂಧಿ ಏರ್ಪಟ್ಟಿತ್ತು. ಅದಾದ ಬಳಿಕ ಸ್ಪರ್ಧಿಗಳಿಗೆ ಹಲವು ಟಾಸ್ಕ್ ಗಳನ್ನ ನೀಡಿ ಅವರ ಸಾಮರ್ಥ್ಯ ಪ್ರದರ್ಶಿಸಲಾಯಿತು. ನಿನ್ನೆ ವಾರದ ಕಥೆ ಕಿಚ್ಚನ ಜೊತೆಯಲ್ಲಿ, ಇಡೀ ವಾರದ ಕಥೆಯನ್ನ ನಟ ಕಿಚ್ಚ ಸುದೀಪ್ ಸ್ಪರ್ಧಿಗಳ ಜೊತೆ ಹಂಚಿಕೊಂಡರು. ಈ ವೇಳೆ ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಯಾವ ಯಾವ ಸ್ಪರ್ಧಿಗಳು ಎಷ್ಟು ಚೇಂಜ್ ಆಗಿದ್ದಾರೆ. ಯಾವ ವಿಷಯದಲ್ಲಿ ಚೇಂಜ್ ಆಗಿದ್ದಾರೆ ಅಂತ ಹೇಳಿ ಎಂದು ಬಿಗ್ ಬಾಸ್ ಹೋಸ್ಟರ್ ಕಿಚ್ಚ ಸುದೀಪ್, ಚಕ್ರವರ್ತಿ ಚಂದ್ರಚೂಡ ಬಳಿ ಕೇಳಿದ್ರು. ಚಂದ್ರಚೂಡ ಸಹ ಪ್ರತಿಯೊಬ್ಬ ಸ್ಪರ್ಧಿಗಳ ಬಗ್ಗೆಯೂ ಒಂದೊಂದು ಕಾರಣಗಳನ್ನ ನೀಡಿದ್ರು. ಈ ವೇಳೆ ದಿವ್ಯಾ ಸುರೇಶ್ ಗೆ ಮಂಜು ಪಾವಗಡ ಮಾಡ್ತಿರೋ ಕೆಟ್ಟ ಕಾಮಿಡಿ ಬಗ್ಗೆ ಕೆಂಡಮಂಡಲರಾದ್ರು. ದಿವ್ಯಾ ಸುರೇಶ್ ಮತ್ತು ಮಂಜು ತಂದೆ- ತಾಯಿಗೆ ಗೌರವ ಕೊಡ್ತೇನೆ.

[widget id=”custom_html-4″]

Advertisements

ಆದ್ರೆ, ಒಂದು ಹೆಣ್ಣಿನ ಜೊತೆ ಗಂಡ- ಹೆಂಡ್ತಿ ನಾಟಕವಾಡೋದು ಇಷ್ಟ ಆಗಲ್ಲ. ನನ್ನ ಅಮ್ಮ, ಅಪ್ಪನೂ ಕೇಳಿದ್ರು. ಮಂಜು ಯಾಕೆ ಆ ದಿವ್ಯಾ ಸುರೇಶ್ ಬಗ್ಗೆ ಆ ರೀತಿ ಕೆಟ್ಟದಾಗಿ ಕಾಮಿಡಿ ಮಾಡ್ತಾನೆ ಅಂತ. ನಂಗೂ ಹಾಗೆ ಅನಿಸ್ತು. ಈ ರೀತಿ ಮಂಜು ಪಾವಗಡ ವರ್ತನೆ ನಾನು ಸಹಿಸೋಲ್ಲ ಅಂತ ವಾಗ್ದಾಳಿ ನಡೆಸಿದ್ರು. ಈ ವೇಳೆ ದಿವ್ಯಾ ಸುರೇಶ್ ಭಾವುಕರಾಗಿ ಕಣ್ಣೀರು ಹಾಕಿದ್ರು. ಇನ್ನು, ಮುಂದಿನ ವಾರದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಚಾಲೆಂಜಸ್೯ ತಂಡ ಭಾಗವಹಿಸಿದ್ದು, ಶಮಂತ್, ದಿವ್ಯಾ ಉರುಡುಗ, ಮಂಜು ಪಾವಗಡ, ಅರವಿಂದ್, ರಘು, ಪ್ರಿಯಾಂಕಾ ತಿಮ್ಮೇಶ್ ಭಾಗವಹಿಸಿದ್ದರು. ಆ ಟಾಸ್ಕ್ ನಲ್ಲಿ ಮಂಜು ಪಾವಗಡ ವಿಜೇತರಾಗಿ ಕ್ಯಾಪ್ಟನ್ ಆಗಿ ಆಯ್ಕೆಯಾದರು. ಈ ವೇಳೆ ಬಿಗ್ ಬಾಸ್ ನೀಡಿದ ವಸ್ತುಗಳಲ್ಲಿ ಚೊಂಬು ಕೂಡ ಒಂದು. ಬಿಗ್ ಬಾಸ್ ಹೋಸ್ಟರ್ ಕಿಚ್ಚ ಸುದೀಪ್, ಮೊದಲಿಗೇ ಆ ಚೊಂಬನ್ನು ಯಾರಿಗೆ ಕೊಡಲು ಬಯಸುತ್ತೀರಾ. ಜೊತೆಗೆ ಯಾಕೆ ಎಂದು ಕಾರಣ ನೀಡಿ ಅಂತ ರಘು ಅವರಿಗೆ ಮೊದಲು ಕೇಳಿದ್ರು.

[widget id=”custom_html-4″]

ಆಗ ರಘು, ಶಮಂತ್ ಹೆಸರನ್ನು ಆಯ್ಕೆ ಮಾಡಿ ಕಾರಣವನ್ನು ಹೇಳಿದ್ರು. ಬಳಿಕ ಶಮಂತ್ ಚಕ್ರವರ್ತಿ ಅವರ ಹೆಸರು ಚ್ಯೂಸ್ ಮಾಡಿ ಅವರಿಗೆ ಚೊಂಬು ನೀಡಿದ್ರು. ಹೀಗೆ ಒಬ್ಬರಿಂದ ಒಬ್ಬರಿಗೆ ಚೊಂಬು ಪಾಸ್ ಆಯ್ತು. ಕೊನೆಗೆ ಹೆಚ್ಚಿನ ಸ್ಪರ್ಧಿಗಳು ಚೊಂಬನ್ನ ಶಮಂತ್ ಗೆ ನೀಡಲು ಇಷ್ಟಪಟ್ಟಿದ್ದರಿಂದ ಕಿಚ್ಚ ಸುದೀಪ್, ಬಿಗ್ ಬಾಸ್ ಮುಂದಿನ ಆದೇಶದವರೆಗೂ ಚೊಂಬನ್ನ ಇಟ್ಟುಕೊಂಡು ಇರುವಂತೆ ಶಮಂತ್ ಗೆ ಹೇಳಿದ್ರು. ಜೊತೆಗೆ ಟ್ಯುಬ್ಲೆಟ್ ಕೂಡ ತಾವೇ ಇಟ್ಟುಕೊಂಡಿದ್ದರಿಂದ ಚೊಂಬು ಮತ್ತು ಟ್ಯುಬ್ಲೆಟ್ ಅನ್ನ ಒಟ್ಟಿಗೆ ಹಿಡಿದುಕೊಂಡು ತಿರುಗಾಡುವಂತಹ ಪರಿಸ್ಥಿತಿ ಶಮಂತ್ ಗೆ ಬಂದಿದೆ. ಒಟ್ನಲ್ಲಿ, ಅವರ್ ಬಿಟ್ ಇವರಾರು ಎಂಬಂತೆ ಕೊನೆಗೆ ಚೊಂಬು ಶಮಂತ್ ಕೈ ಸೇರಿದೆ. ಮುಂದೆ ಮತ್ಯಾರ ಕೈ ಸೇರುತ್ತದೆ ಅಂತ ಮುಂದಿನ ವಾರದ ಕಥೆ ಕಿಚ್ಚನ ಜೊತೆವರೆಗೂ ಕಾದು ನೋಡಬೇಕು..ಕಾಯ್ತಿರಾ ಅಲ್ವಾ..