29ವರ್ಷಗಳ ಬಳಿಕ ಮತ್ತೆ ತೆರೆ ಮೇಲೆ ಬಂದ ಮಾಸ್ಟರ್ ಮಂಜುನಾಥ್..

Cinema Entertainment
Advertisements

1980 ಹಾಗೂ 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಬಾಲ್ಯದಲ್ಲೇ ಮಿಂಚಿದ ನಟರೆಂದರೆ ಮಾಸ್ಟರ್ ಮಂಜುನಾಥ್ ಮತ್ತು ಮಾಸ್ಟರ್ ಆನಂದ್. ಇನ್ನು ನಟ ನಿರ್ದೇಶಕ ಶಂಕರ್ ನಾಗ್ ಅವರ ಅಭಿನಯದಲ್ಲಿ ಮೂಡಿಬಂದ ಮಾಲ್ಗುಡಿ ಡೇಸ್’ ನಲ್ಲಿ ಮಾಸ್ಟರ್ ಮಂಜುನಾಥ್ ಸ್ವಾಮಿ ಅನ್ನೋ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು.

Advertisements

ಇನ್ನು ಹಲವಾರು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದ ಬಾಲ ನಟ ಮಾಸ್ಟರ್ ಮಂಜುನಾಥ್ ರವರು ಬರೋಬ್ಬರಿ ೨೯ವರ್ಷಗಳಿಂದ ಮತ್ತೆ ತೆರೆಮೆರೆ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಕನ್ನಡದ ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಜೀನ್ಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಇವರ ಜೊತೆಯಾಗಿ ಮಾಸ್ಟರ್ ಆನಂದ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇಂದು ರಾತ್ರಿ ೯ಗಂಟೆಗೆ ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗಲಿರುವ ರಿಯಾಲಿಟಿ ಶೋ ಜೀನ್ಸ್ ಕಾರ್ಯಕ್ರಮದಲ್ಲಿ ಮಾಸ್ಟರ್ ಮಂಜುನಾಥ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಟ ಶಂಕರ್ ನಾಗ್ ನವರು ತೀರಿಕೊಂಡಾಗ ನಾನು ಮಾರಿಷಸ್ ನಲ್ಲಿದ್ದೆ, ಇನ್ನು ಈಗಿನ ತರ ಆಗ ಮೊಬೈಲ್ ಆಗಲಿ ಬೇರೆ ಯಾವುದೇ ನೆಟ್ವರ್ಕ್ ವ್ಯವಸ್ಥೆ ಆಗಲಿ ಇರಲಿಲ್ಲ.ಆಗಾಗಿ ಶಂಕ್ರಣ್ಣ ತೀರಿಕೊಂಡ ಸುದ್ದಿ ನನಗೆ ತಿಳಿಯಲಿಲ್ಲ ಎಂದು ಭಾವುಕರಾಗಿ ಮಾತನಾಡಿರುವ ಪ್ರೊಮೋ ಪ್ರಸಾರವಾಗಿದೆ.

ಇನ್ನು ಮಾಲ್ಗುಡಿ ಡೇಸ್ ಸಂದರ್ಭದಲ್ಲಿನ ಹಾಗೂ ಶಂಕರ್ ನಾಗ್ ರವರ ಜೊತೆಯಲ್ಲಿನ ಒಡನಾಟದ ಬಗ್ಗೆ ಮಾಸ್ಟರ್ ಮಂಜುನಾಥ್ ಬಿಚ್ಚಿಡಲಿದ್ದಾರೆ. ಇನ್ನು ಮಂಜುನಾಥ್ ರವರ ಜೊತೆಗೆ, ಮಾಸ್ಟರ್ ಆನಂದ್ ಕೂಡ ಈ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದು, ವೀಕ್ಷಕರಿಗೆ ಭರಪೂರ ಮನರಂಜನೆ ಅಂತೂ ಸಿಗಲಿದೆ. ಇನ್ನು ಮಾಸ್ಟರ್ ಮಂಜುನಾಥ್ ರವರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ಕಾಮೆಂಟ್ ಮಾಡಿ ತಿಳಿಸಿ, ಇಷ್ಟ ಆದ್ರೆ ಶೇರ್ ಮಾಡಿ..