ಕರೋನ ಬಂದ ನಂತರ ಭಾರತದಲ್ಲಿ ಎರಡುವರೆ ಕೋಟಿ ಫೋನ್ ಗಳು ಸ್ವಿಚ್ ಆಫ್.?

News
Advertisements

ಭಾರತದಲ್ಲಿ ಕರೋನ ಬಂದ ನಂತರ ಎರಡುವರೆ ಕೋಟಿ ಫೋನ್ ಗಳು ಸ್ವಿಚ್ ಆಫ್ ಆಗಿವೆ ಎಂದು ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ ಸಂಘ ವರದಿ ನೀಡಿದೆ.

Advertisements

ಇತ್ತೀಚೆಗೆಚೀನಾ ದೇಶದಲ್ಲಿ ಕರೋನ ಬಂದ ನಂತರ ಎರಡು ಕೋಟಿ ಫೋನ್ ಗಳು ಸ್ವಿಚ್ ಆಫ್ ಆಗಿರುವುದರ ಹಿಂದೆ ಏನೋ ಕಾರಣವಿದೆ. ಕರೋನದಿಂದ ಸತ್ತವರ ಸಂಖ್ಯೆಯನ್ನು ಚೀನಾ ಮರೆ ಮಾಚುತ್ತಿದೆ ಎಂದು ಭಾರತದ ಟೀವಿ ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದವು. ಜಗತ್ತಿನ ಇತೆರೆ ದೇಶಗಳೂ ಕೂಡ ಈ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದವು. ಆದರೆ ಈಗ ಭಾರತದಲ್ಲೂ ಸಹ ಕರೋನ ಬಂದ ಒಂದು ತಿಂಗಳ ನಂತರ ಎರಡುವರೆ ಕೋಟಿ ಫೋನ್ ಗಳು ಸ್ವಿಚ್ ಆಫ್ ಆಗಿರುವುದು ಎಲ್ಲರಿಗೂ ಆತಂಕ ಮೂಡಿಸಿದೆ. ಮತ್ತು ಇದಕ್ಕೂ ಕರೋನಗು ಇರುವ ಸಂಬಂಧವೇನು ಎಂಬ ಪ್ರಶ್ನೆ ಮೂಡಿದೆ.

ಅಸಲಿ ವಿಷಯ ಏನೆಂದರೆ, ಕೊರನಾ ಬಂದ ನಂತರ ಭಾರದಲ್ಲಿ ಹೀಗೆ ಭಾರೀ ಪ್ರಮಾಣದಲ್ಲಿ ಫೋನ್ ಗಳು ಸ್ವಿಚ್ ಆಫ್ ಆಗಿರುವುದು ಸತ್ಯ. ಆದರೆ ಅದಕ್ಕೆ ಕಾರಣ ಜನ ಮೃತ ಪಟ್ಟಿರುವುದು ಅಲ್ಲ. ಕೆಟ್ಟ ಫೋನ್ ಗಳು ರಿಪೇರಿ ಆಗದೇ ಇರುವುದು. ಲಾಕ್ ಡೌನ್ ನಿಂದಾಗಿ ಕೆಟ್ಟ ಮೊಬೈಲ್ ಫೋನ್ ಗಳು ರಿಪೇರಿ ಆಗುತ್ತಿಲ್ಲ. ಬೇರೆ ಫೋನ್ ಗಳನೂ ಖರೀದಿ ಮಾಡಲಾಗುತ್ತಿಲ್ಲ. ಆದ ಕಾರಣ ಇಷ್ಟು ದೊಡ್ಡ ಪ್ರಮಾಣದಲ್ಲಿ ಫೋನ್ ಗಳು ಸ್ವಿಚ್ ಆಫ್ ಆಗಿವೆ.