ಚೀನಾಗೆ ಮತ್ತೊಂದು ಶಾಕ್ ಕೊಡಲು ಮೋದಿ ಪ್ಲಾನ್ ! ದೇಶದ ಯುವಜನತೆಗೆ ಚಾಲೆಂಜ್ ಕೊಟ್ಟ ನಮೋ..

News
Advertisements

ಭಾರತದ ಗಡಿಭಾಗದಲ್ಲಿ ಕುತಂತ್ರ ಮಾಡಿದ ಚೀನಾಗೆ ಒಂದೊರ ಬಳಿಕ ಒಂದರೊಂತೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಡುತ್ತಿದೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ರಾಷ್ತ್ರೀಯ ಭದ್ರತೆಯ ದೃಷ್ಟಿಯಿಂದ ಚೀನಾದ 59 ಆ್ಯಪ್ ಗಳು ದೇಶಕ್ಕೆ ಮಾರಕ ಎಂದು ನಿಷೇದ ಮಾಡಲಾಗಿದೆ. ಇನ್ನು ಭಾರತ ಅಭಿವೃದ್ಧಿಪಡಿಸುವ ಆ್ಯಪ್ ಗಳನ್ನ ಚೀನಾ ಇರಲಿ ನಾವೇ ಬಳಕೆ ಮಾಡುತ್ತಿಲ್ಲ..

ಆದರೆ ಸಾಫ್ಟ್‌ವೇರ್‌ ಪ್ರೋಗ್ರಾಮಿಂಗ್ ಬರೆಯಬಲ್ಲ ನಿಪುಣರು ನಮ್ಮಲ್ಲಿಯೇ ಇರುವಾಗ ನಮ್ಮದೇ ಸ್ವದೇಶಿ ಆ್ಯಪ್ ಗಳನ್ನೇಕೆ ತಯಾರು ಮಾಡಲು ಆಗುತ್ತಿಲ್ಲ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈಗ ಇದರ ನಡುವೆಯೇ ಮತ್ತೊಂದು ಹೆಜ್ಜೆ ಇಟ್ಟಿರುವ ಪ್ರಧಾನಿ ಮೋದಿಯವರು ಚೀನಾಗೆ ಮತ್ತೊಂದು ಶಾಕ್ ನೀಡುವ ಸಲುವಾಗಿ ನಮ್ಮ ದೇಶದ ಯುವಕರಿಗೊಂದು ಚಾಲೆಂಜ್ ನೀಡಿದ್ದಾರೆ.

ನಮ್ಮದೇ ಆದ ಸ್ವದೇಶಿ ಆ್ಯಪ್ ಅಭಿವೃದ್ಧಿಗೊಳಿಸುವ ಮೂಲಕ ಭಾರತದ ಜೊತೆ ಕೈ ಜೋಡಿಸಿ ಎಂದು ದೇಶದ ಯುವ ಜನತೆಗೆ ಟ್ವೀಟ್ ಮಾಡುವ ಮೂಲಕ ಕರೆ ನೀಡಿದ್ದಾರೆ ಮೋದಿ. ನಮ್ಮ ಸ್ವದೇಶೀಯವಾದ ಆ್ಯಪ್ ಗಳನ್ನ ತಯಾರಿಸಲು ನಮ್ಮ ಯುವ ಜನತೆಯಲ್ಲಿ ತುಂಬಾ ಉತ್ಸಾಹವಿದೆ. ದೇಶದ ಯುವಕರೇ @GoI_MeitY ಮತ್ತು @AIMtoInnovate ನೊಂದಿಗೆ ಸೇರಿ ಮೇಡ್ ಇಂಡಿಯಾ ಪ್ರೊಡೆಕ್ಟ್, ಆ್ಯಪ್ ಗಳನ್ನ ತಯಾರಿಸುವ ಚಾಲೆಂಜ್ ಸ್ವೀಕಾರ ಮಾಡಿ. ನೀವು ಜನಿಸಿದ ನಿಮ್ಮ ಮಾತೃ ಭೂಮಿಗೆ ಒಳ್ಳೆಯದು ಮಾಡುವ ಉದ್ದೇಶವಿದ್ದರೆ ಚಾಲೆಂಜ್ ನ್ನ ಸ್ವೀಕರಿಸಿ ಎಂದು ಮೋದಿ ಹೇಳಿದ್ದಾರೆ.