59 ಆ್ಯಪ್ ನಿಷೇಧದ ಬೆನ್ನಲ್ಲೇ ಕುತಂತ್ರಿ ಚೀನಾಗೆ ಮತ್ತೊಂದು ದೊಡ್ಡ ಶಾಕ್ ಕೊಟ್ಟ ಮೋದಿ !

News
Advertisements

ಲಡಾಖ್‌ನ ಗ್ವಾಲಾನ್ ಕಣಿವೆಯಲ್ಲಿ ಕುತಂತ್ರಿ ಚೀನಾ ದೇಶ ನಡೆಸಿದ ಪೈ’ಶಾಚಿಕ ಕೃ’ತ್ಯದ ಬಳಿಕ ಕೇಂದ್ರ ಸರ್ಕಾರವು ಚೀನಾದ 59 ಆ್ಯಪ್‌ ಗಳಿಗೆ ಭಾರತದಿಂದ ಗೇಟ್ ಪಾಸ್ ಕೊಟ್ಟಿದೆ. ಟಿಕ್ ಟಾಕ್ ಸೇರಿದಂತೆ ಚೀನಾದ ಹಲವಾರು ಆ್ಯಪ್ ಗಳಿಗೆ ಭಾರತ ಅತೀ ದೊಡ್ಡ ಮಾರುಕಟ್ಟೆಯಾಗಿತ್ತು. ಕೋಟ್ಯಂತರ ರೂಪಾಯಿಗಳಲ್ಲಿ ಲಾಭಗಳಿಸುತ್ತಿದ್ದವು ಕೂಡ. ಇನ್ನು ಭಾರತದ ಡೇಟಾವನ್ನ ಈ ಆ್ಯಪ್ ಗಳು ತಮ್ಮ ದೇಶಕ್ಕೆ ರವಾನಿಸುತ್ತಿದೆ ಎಂಬ ಆರೋಪವಿದ್ದು ದೇಶದ ಭದ್ರತೆಯ ದೃಷ್ಟಿಯಿಂದ 59 ಚೀನಾ ಆ್ಯಪ್ ಗಳನ್ನ ಬ್ಯಾನ್ ಮಾಡಲಾಗಿದೆ.

59 ಚೀನಾ ಆ್ಯಪ್ ಗಳನ್ನ ನಿಷೇಧ ಮಾಡಿ ಚೀನಾಗೆ ಬಾರೀ ಹೊಡೆತಕೊಟ್ಟಿರುವ ಕೇಂದ್ರ ಸರ್ಕಾರ ಈಗ ಚೀನಾ ಕಂಪನಿಗಳು ಜೊತೆ ಯಾವುದೇ ರೀತಿಯ ಒಪ್ಪಂದ ಮಾಡಿಕೊಳ್ಳದಂತೆ ಹಾಗೂ ಚೀನಾ ನಿರ್ಮಿತ ಉಪಕರಣಗಳನ್ನ ಬಳಸದಂತೆ ಕೇಂದ್ರಸರ್ಕಾರದ ೪ ಸಚಿವಾಲಯಗಳು ನಿರ್ಧಾರ ಮಾಡಿವೆ ಎಂದು ಹೇಳಲಾಗಿದೆ.

ಇನ್ನು ಇದು ಇಷ್ಟಕ್ಕೆ ನಿಲ್ಲದೆ ಚೀನಾ ದೇಶದ ಕಂಪನಿಗಳು ಭಾರತದ ಹೈವೇ ಪ್ರಾಜೆಕ್ಟ್ ಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವರಾಗಿರುವ ನಿತಿನ್ ಗಡ್ಕರಿಯವರು ಹೇಳಿದ್ದಾರೆ. ಇನ್ನು ಚೀನಾ ಕಂಪನಿಗಳು ಬೇರೆ ಕಂಪನಿಗಳು ಜೊತೆ ಜಾಯಿಂಟ್ ವೆಂಟರ್ ವೆಂಚರ್ ಮೂಲಕ ಬಿಡ್ ಮಾಡಲು ಕೂಡ ಅವಕಾಶವಿಲ ಎಂದು ಗಡ್ಕರಿಯವರು ಹೇಳಿದ್ದಾರೆ. ಇನ್ನು ಭಾರತೀಯ ರೈಲ್ವೆ ಕೂಡ ಇದಕ್ಕೆ ಕೈ ಜೋಡಿಸಿದ್ದು ಧರ್ಮಲ್ ಕ್ಯಾಮೆರಾಗಳ ಪೂರೈಕೆಗಾಗಿ ಚೀನಾದೊಂದಿಗೆ ನೀಡಿದ್ದ ಟೆಂಡರ್ ಕೂಡ ರದ್ದು ಮಾಡಿದೆ. ಭಾರತೀಯ ಸೈನಿಕರೊಂದಿಗೆ ಮೋಸದ ಆಟವಾಡಿದ ಕುತಂತ್ರಿ ಚೀನಾಕ್ಕೆ ಬುದ್ದಿ ಕಲಿಸುವ ಸಲುವಾಗಿ ಮೋದಿಯವರು ಚೀನಾದ ಮೇಲೆ ದೊಡ್ಡ ಡಿಜಿಟಲ್ ಸ್ಟ್ರೈಕ್ ನ್ನ ನಡೆಸಿದ್ದಾರೆ.