ಮೋದಿ ಗಡಿಭಾಗಕ್ಕೆ ಧಿಡೀರ್ ಭೇಟಿಕೊಟ್ಟ ಬೆನ್ನಲ್ಲೇ ಮಹತ್ವದ ಪ್ರತಿಕ್ರಿಯೆ ಕೊಟ್ಟ ಕುತಂತ್ರಿ ಚೀನಾ ಹೇಳಿದ್ದೇನು ಗೊತ್ತಾ ?

News
Advertisements

ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ಉಂಟಾದ ನಂತರ ಎರಡು ದೇಶಗಳಲ್ಲಿ ಗಡಿಯಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಸೈನಿಕರನ್ನ ನಿಯೋಜನೆ ಮಾಡಲಾಗಿದ್ದು ಉದ್ವಿಗ್ನತೆ ಎದುರಾಗಿದೆ. ಇನ್ನು ಚೀನಾ ಮಾಡಿದ ಕುತಂತ್ರಕ್ಕೆ ಪ್ರತಿಕಾರವಾಗಿ ಡಿಜಿಟಲ್ ಸ್ಟ್ರೈಕ್ ನಡೆಸಿದ್ದ ಭಾರತ ಕೋಟ್ಯಾಂತರ ರೂಪಾಯಿಗಳ ಲಾಭ ಮಾಡುತ್ತಿದ್ದ 59 ಚೀನೀ ಅಪ್ಲಿಕೇಶನ್ ಗಳ ಬ್ಯಾನ್ ಮಾಡಿತ್ತು.

ಈಗ ಇದೆ ವೇಳೆ ಪ್ರಧಾನಿ ಮೋದಿಯವರೇ ಗಡಿಗೆ ಖುದ್ದಾಗಿ ಭೇಟಿ ನೀಡಿದ್ದು ಭಾರತ ಯಾವುದೇ ಸಮಯದಲ್ಲೂ ಯಾವ ಬೆದರಿಕೆಗೂ ಮಣಿಯುವುದಿಲ್ಲ ನಾವು ಎಲ್ಲದಕ್ಕೂ ಸಿದ್ಧರಿರುವುದಾಗಿ ಕುತಂತ್ರಿ ಚೀನಾಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಇನ್ನು ಯಾವುದೇ ಒಂದು ಸುಳಿವು ಇಲ್ಲದೆ ಪ್ರಧಾನಿಯವರು ಲಡಾಕ್ ನ ಸೇ’ನಾ ನೆಲೆಗಳಿಗೆ ಭೇಟಿ ಕೊಟ್ಟಿರುವುದಕ್ಕೆ ಚೀನಾ ದಂಗಾಗಿ ಹೋಗಿದೆ. ಮತ್ತೊಂದು ಕಡೆ ನಮ್ಮ ಭಾರತೀಯ ವೀರ ಯೋಧರಲ್ಲಿ ಹೊಸ ಹುಮ್ಮಸ್ಸು ಮೂಡಿರುವುದು ಸುಳ್ಳಲ್ಲ.

ಇನ್ನು ಪ್ರಧಾನಿ ಭೇಟಿಯ ಬಳಿಕ ಗಡಿಭಾಗದಲ್ಲಿ ಸೇನಾ ಚಟುವಟಿಕೆಗಳು ಗರಿಗೆದರಲಿವೆ ಎಂದು ಹೇಳಲಾಗಿದ್ದು, ಇದೆ ವೇಳೆ ಕುತಂತ್ರಿ ಚೀನಾ ಕೂಡ ಮೊದಲ ಪ್ರತಿಕ್ರಿಯೆ ಕೊಟ್ಟಿದೆ. ಮೋದಿ ಭೇಟಿಯ ಬೆನ್ನಲ್ಲೇ ಮೊದಲ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ಸಂಬಂಧಗಳ ಸುಧಾರಣೆಗಾಗಿ ಪ್ರಯತ್ನಿಸಬೇಕು. ಆದರೆ ಈಗಿರುವ ಪರಿಸ್ಥಿತಿಯನ್ನ ಮತ್ತಷ್ಟು ಬಿಕ್ಕೊಟ್ಟುಗೊಳಿಸಬಾರದು. ಭಾರತ ಮತ್ತು ಚೀನಾ ಪರಸ್ಪರ ಮಾತುಕತೆಗಳ ಮೂಲಕ ಬಿಕ್ಕಟ್ಟು ಶಮನಕ್ಕೆ ಪ್ರಯತ್ನ ಮಾಡಬೇಕು ಎಂದು ಚೀನಾ ವಿದೇಶಾಂಗ ಇಲಾಖೆ ಹೇಳಿದೆ. ಒಟ್ಟಿನಲ್ಲಿ ಮೋದಿಯವರ ಧಿಡೀರ್ ಭೇಟಿಗೆ ಚೀನಾ ಕಂಗಾಲಾಗಿರುವುದಂತೂ ಸತ್ಯ.