ಭಾರತದ ಅತೀ ಹೆಚ್ಚು ವಿದ್ಯಾರ್ಹತೆ ಇರುವ ವ್ಯಕ್ತಿ, ಕಿರಿಯ ಶಾಸಕ, ನಟ ಇನ್ನು ಏನೇನೋ-ಇದೆಲ್ಲಾ ಇವರೊಬ್ಬರೆ !

Kannada News
Advertisements

ಒಂದು ಡಿಗ್ರಿಯನ್ನ ತೆಗೆದುಕೊಂಡು, ಕೆಲಸ ಹುಡುಕುವಷ್ಟರಲ್ಲಿ ಈ ಜೀವನವೇ ಸಾಕಾಗಿ ಹೋಗಿರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತೆಗೆದುಕೊಂಡಿರುವ ಪದವಿಗಳನ್ನ ಕೇಳಿದ್ರೆ ನೀವೇ ಒಂದು ಕ್ಷಣ ಶಾಕ್ ಆಗ್ತೀರಾ..ಇನ್ನು ಭಾರತದ ಅತೀ ಹೆಚ್ಚಿನ ವಿದ್ಯಾರ್ಹತೆ ಇರುವ ವ್ಯಕ್ತಿಯೆಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಈತನ ಹೆಸರು ರೆಕಾರ್ಡ್ ಆಗಿದೆಯೆಂದರೆ ನೀವೇ ಒಂದು ಕ್ಷಣ ಊಹಿಸಿಕೊಳ್ಳಿ..

Advertisements

ಒಬ್ಬ ವ್ಯಕ್ತಿ ವಿದ್ಯಾಭ್ಯಾಸದಲ್ಲಿ ಏನೆಲ್ಲಾ ಮಾಡಬಹುದು ಎಂಬುದಕ್ಕೆಶ್ರೀಕಾಂತ್ ಜಿಚ್ಕರ್ ಅವರೇ ಸಾಕ್ಷಿ. ಭಾರತ ಸರ್ಕಾರದ ಪ್ರತಿಷ್ಠಿತ ಉದ್ಯಗಳಾದ ಐಎಎಸ್, ಐಪಿಸ್ ಮಾಡಿರುವ ಇವರು, ಎಂಬಿಬಿಎಸ್ ಜೊತೆ ಎಂಡಿ ಕೂಡ ಮಾಡಿಕೊಂಡಿದ್ದಾರೆ. ಇನ್ನು LLB ಮಾಡಿರುವ ಇವರು ಅಂತಾರಾಷ್ಟ್ರೀಯ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಇನ್ನು ಇಷ್ಟೆಲ್ಲಾ ಸಾಲದು ಎಂಬಂತೆ ಬಿಜಿನೆಸ್ ಆಡಳಿತ ಜೊತೆಗೆ ಜರ್ನಲಿಸಂ ನಲ್ಲಿ ಮಾಸ್ಟರ್ಸ್ ಪದವಿಯನ್ನ ಪಡೆದಿದ್ದಾರೆ.

ಇನ್ನು ೧೯೭೮ರಲ್ಲಿ ಐಪಿಎಸ್ ಪರೀಕ್ಷೆ ಬರೆದು ಐಪಿಎಸ್ ಆಫೀಸರ್ ಆಗಿ ಆಯ್ಕೆಯಾದ್ರೂ, IPS ಹುದ್ದೆಗೆ ರಾಜೀನಾಮೆ ನೀಡಿ, ಮತ್ತೆ ೧೯೮೦ನೇ ಇಸವಿಯಲ್ಲಿ ಐಎಎಸ್ ಪರೀಕ್ಷೆ ಬರೆದ್ರು. ಅದರಲ್ಲೂ ಕೂಡ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದ ಶ್ರೀಕಾಂತ್ ಕೇವಲ ನಾಲ್ಕು ತಿಂಗಳಿನಲ್ಲೇ ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ರು. ಇನ್ನು ಅದೇ ವರ್ಷದಲ್ಲಿ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶ್ರೀಕಾಂತ್ ರವರು ತಾವು ಸ್ಪರ್ಧಿಸಿದ್ದ ಮೊದಲ ಚುನಾವಣೆಯಲ್ಲಿ ಗೆದ್ದುಸಚಿವರಾದ್ರು.. ವಿಶೇಷ ಏನೆಂದರೆ ಅವರು ಕೇವಲ ೨೬ನೇ ವಯಸ್ಸಿಗೆ ಸಚಿವರಾಗಿ, ಭಾರತದ ಅತೀ ಚಿಕ್ಕ ವಯಸ್ಸಿನ ಮಂತ್ರಿ ಎಂಬ ಹೆಗ್ಗಳಿಕೆ ಪಾತ್ರರಾದರು. ಇನ್ನು ಬರೋಬ್ಬರಿ ೧೪ ಖಾತೆಗಳನ್ನ ಹೊಂದಿದ ಕಿರಿಯ ಸಚಿವ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ತಮ್ಮ ವೈಯುಕ್ತಿಕ ಗ್ರಂಥಾಲಯವನ್ನೇ ಹೊಂದಿದ್ದ ಶ್ರೀಕಾಂತ್ ಜಿಚ್ಕರ್ ಅವರು ಓದಿನ ಜೊತೆಗೆ ಅದ್ಭುತ ಛಾಯಾಗ್ರಾಹಕ, ವರ್ಣ ಚಿತ್ರಕಲಾವಿದರೂ ಹೌದು. ಇಷ್ಟೇ ಅಲ್ಲದೆ ನಟನೆಯಲ್ಲೂ ಕೈಚಳಕ ತೋರಿಸಿದ್ದರು ಶ್ರೀಕಾಂತ್ ಜಿಚ್ಕರ್. ಎಲ್ಲಾ ಕ್ಷೇತ್ರದ ಎಲ್ಲಾ ವಿಷಯಗಳಲ್ಲೂ ಮಹಾನ್ ಪರಿಣತರಾಗಿದ್ದ ಶ್ರೀಕಾಂತ್ ಜಿಚ್ಕರ್ ಅವರು ಹುಟ್ಟಿದ್ದು ಸೆಪ್ಟೆಂಬರ್ ೧೪, ೧೯೫೪ರಂದು. ಮರಾಠಿ ಕುಟುಂಬದಲ್ಲಿ ನಾಗಪುರದ ಅಜಂ ಗಾವ್ ಎಂಬಲ್ಲಿ ಹುಟ್ಟಿದ್ದಾರೆ.

ನಾಗಪುರದಲ್ಲಿ ಸಂದಿ ಪಾನಿ ಎಂಬ ಶಾಲೆಯನಂ ಸ್ಥಾಪನೆ ಮಾಡಿದ್ದ ಶ್ರೀಕಾಂತ್ ರವರು ೧೯೯೨ ರಿಂದ ಹಿಡಿದು ೯೮ರವರೆಗೆ ರಾಜ್ಯಸಭಾ ಸದಸ್ಯರೂ ಕೂಡ ಆಗಿದ್ದರು. ಆದರೆಮಹಾನ್ ವ್ಯಕ್ತಿಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬಂತೆ, ೨೦೦೪ ಜೂನ್ ಎರಡರಂದು ಕಾರಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅಪಘಾತವಾಗಿ ನಿಧನರಾದ್ರು. ಆಗ ಅವರಿಗೆ ಕೇವಲ ೫೧ವರ್ಷ ವಯಸ್ಸಾಗಿತ್ತು.