ಮಗನನ್ನು ಕರೆತರಲು ಬರೋಬ್ಬರಿ 1400ಕಿಮೀ ಸ್ಕೂಟಿ ಓಡಿಸಿಕೊಂಡು ಹೋದ ಮಹಾತಾಯಿ..ಮುಂದೆ ಏನಾಯ್ತು ಗೊತ್ತಾ.?

News

ದೇಶದಾದ್ಯಂತ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಎಷ್ಟೋ ಜನ ತಮ್ಮ ಕುಟುಂಬದವರಿಂದ ದೂರವಿರುವಂತಾಗಿದೆ. ಹೇಗಾದರೂ ಮನೆಗೆ ಹೋಗಲೇಬೇಕೆನ್ನುವ ಕೆಲವರು ನಡೆದುಕೊಂಡೇ ತಮ್ಮ ತಮ್ಮ ಮನೆಗಳಿಗೆ ಹೋಗುತ್ತಿದ್ದಾರೆ. ಮತ್ತೆ ಅನೇಕರು ತಮ್ಮ ಮನೆಗಳಿಗೆ ಹೋಗುವ ಪ್ರಯತ್ನ ಮಾಡುತ್ತಲೇ ಇದ್ದಾರೆ.

ಇದರ ನಡುವೆ ತಾಯಿಯೊಬ್ಬಳು ತನ್ನ ಮಗನನನ್ನ ಮನೆಗೆ ಕರೆತರಲು ಬರೋಬ್ಬರಿ 1400ಕಿಮೀ ಸ್ಕೂಟಿ ಓದಿಸಿಕೊಂಡು ಹೋಗಿದ್ದಾಳೆ. ಇನ್ನು ಇದು ತೆಲಂಗಾಣದ ನಿಜಾಮಾಬಾದ್ ನಲ್ಲಿ ನಡೆದಿದೆ. ಇನ್ನು ಮಗನಿಗೋಸ್ಕರ ಈ ಸಾಹಸ ಮಾಡಿದ ೫೦ವರ್ಷದ ಆ ಮಹಾತಾಯಿ ರಜಿಯಾ ಬೇಗಂ ಎಂದು.

ಇನ್ನು ಸ್ಥಳೀಯ ಪೋಲೀಸರ ಅನುಮತಿಪಡೆದು ಸೋಮವಾರ ಬೆಳಿಗ್ಗೆಯೇ ಸ್ಕೂಟಿಯಲ್ಲಿ ಆಂಧ್ರಪ್ರದೇಶದ ನೆಲ್ಲೂರಿಗೆ ತಮ್ಮ ಸ್ಕೂಟಿಯಲ್ಲೇ ಪ್ರಯಾಣ ಬೆಳೆಸಿದ್ದಾರೆ. ಇನ್ನು ಹೆದ್ದಾರಿ ರಸ್ತೆಯ ಮುಖಾಂತರ ಹೋದ ಆ ಮಹಿಳೆ ಆಂಧ್ರಪ್ರದೇಶದ ನೆಲ್ಲೂರು ತಲುಪಿದ್ದು, ಬುಧವಾರ ಸಂಜೆಯೇ ತನ್ನ ಮಗನ ಜೊತೆಗೆ ಮನೆಗೆ ವಾಪಾಸ್ ಆಗಿದ್ದಾಳೆ.

ಮಗನಿಗೋಸ್ಕರ ಧೈರ್ಯದಿಂದ ಈ ಸಾಹಸ ಮಾಡಿರುವ ಈ ಮಹಿಳೆ ದಿನವೊಂದಕ್ಕೆ ೪೭೦ ಕಿಮೀ ನಂತಯೇ ಮೂರೂ ದಿನ ೧೪೦೦ ಕಿಮೀಗಳ ಪ್ರಯಾಣವನ್ನ ಮಾಡಿದ್ದಾರೆ. ಅದಕ್ಕೆ ಹೇಳೋದು ತಾಯಿಯಾದವಳು ತನ್ನ ಮಕ್ಕಳಿಗೋಸ್ಕರ ಏನೂ ಬೇಕಾದ್ರೂ ಮಾಡುತ್ತಾಳೆ ಎಂಬುದಕ್ಕೆ ಈ ಮಹಾತಾಯಿಯೇ ಸಾಕ್ಷಿ. ಇನ್ನು ಈ ಮಹಾತಾಯಿಯ ಸಾಹಸಕ್ಕೆ ನೀವೇನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ..