ಶಾಲಾ ಶಿಕ್ಷಕನ ಹುದ್ದೆಗೆ ಅರ್ಜಿ ಹಾಕಿದ ಎಂ.ಎಸ್. ಧೋನಿ ! ಅರ್ಜಿಯಲ್ಲಿ ತಂದೆ ಹೆಸರು ಕಂಡು ದಂಗಾದ ಅಧಿಕಾರಿಗಳು.?

Sports
Advertisements

ಖ್ಯಾತ ಕ್ರಿಕೆಟಿಗ ಎಂ.ಎಸ್.ಧೋನಿ ಅಂದ್ರೆ ಯಾರಂತ ಆಡೋ ಮಕ್ಕಳಿಂದ ಹಿಡಿದು ವಯಸ್ಸಾದ ಹಣ್ ಹಣ್ ಮುದುಕರನ್ನ ಕೇಳಿದ್ರು ಥಟ್ ಅಂತ ಉತ್ತರ ಹೇಳ್ತಾರೆ. ನಮ್ಮ ಹೆಮ್ಮೆಯ ಬ್ಯಾಟ್ಸ್ ಮನ್ ಮಾಹಿ ಅಂತ. ಸಿಕ್ಸರ್, ಫೋರ್ , ಬೌಂಡರಿ ಸುರಿಮಳೆಗಳ ಹಿಟ್ ಬ್ಯಾಟ್ಸ್ ಮನ್ ಎಂ.ಎಸ್.ಧೋನಿ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಭರ್ಜರಿ ಸೌಂಡ್ ಮಾಡಿದ್ದಾರೆ. ಅದಲ್ಲದೇ, ಮಾಹಿ ಅವರ ಮುದ್ದು ಮಗಳು ಝಿವಾ ಅವರಿಂದಲೇ ತುಂಬಾ ಖ್ಯಾತಿ ಆಗಿದ್ದಾರೆ ಅನ್ನಲೂ ಬಹುದು. ಮಗಳಿಗೆ ಒಳ್ಳೆಯ ತಂದೆಯಾಗಿ, ತುಂಬಾ ಸಫೋರ್ಟಿವ್ ಆಗಿದ್ದಾರೆ. ಮುದ್ದು ಮಗಳ ತುಂಟಾದ ಜೊತೆ ಧೋನಿ ಆಟವಾಡ್ತಿರೋ ವಿಡಿಯೋಗಳನ್ನ ಅವರ ಪತ್ನಿ ಸಾಕ್ಷಿ ಅವರು ಆಗಾಗ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ತಾನೆ ಇರ್ತಾರೆ. ವೀಕ್ಷಕರು ಸಹ ಅಪ್ಪ- ಮಗಳ ಬಾಂಧವ್ಯ ನೋಡಿ ಖುಷಿಪಟ್ಟು ಕಮೆಂಟ್ ಮಾಡ್ತಾರೆ. ಇದೀಗ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಶಾಲಾ ಶಿಕ್ಷಕನ ಹುದ್ದೆಗೆ ಅರ್ಜಿ ಒಂದನ್ನ ಸಲ್ಲಿಸಿದ್ದಾರೆ. ಅರೆ, ಕ್ರಿಕೆಟ್ ಬಿಟ್ಟು ಟೀಚರ್ ಆಗಲು ಹೊರಟ್ರಾ ಮಾಹಿ ಅಂತ ಎಲ್ಲರಲೂ ಅನ್ಕೊಳ್ತಿದೀರಾ. ಅದನ್ನೂ ಹೇಳ್ತಿವಿ ಕೇಳಿ. ಎಂ.ಎಸ್.ಧೋನಿ ಒಂದು ಫಾರ್ಮ್ ಅನ್ನು ಭರ್ತಿ ಮಾಡಿದ್ದಾರೆ. ಶಿಕ್ಷಕ ಹುದ್ದೆಗೆ ಎಂ.ಎಸ್.ಧೋನಿ ಅವರ ನಾಮನಿರ್ದೇಶನವನ್ನು ನೋಡಿದ ನಂತರ ಎಲ್ಲರೂ ಆಶ್ಚರ್ಯಕ್ಕೊಳಗಾಗಿದ್ದಾರೆ.

[widget id=”custom_html-4″]

Advertisements

ಹೆಸರು- ಎಂ.ಎಸ್.ಧೋನಿ. ತಂದೆಯ ಹೆಸರು- ಸಚಿನ್ ತೆಂಡೂಲ್ಕರ್. ಎಲ್ಲರೂ ಆಶ್ಚರ್ಯಗೊಳ್ಳುತ್ತಿದ್ದೀರಾ? ಹೌದು ಈ ಸುದ್ದಿಯನ್ನು ನೋಡಿದಾಗ ನಮಗೂ ಹೀಗೆ ಆಯಿತು. ಈ ಆಘಾತಕಾರಿ ಸುದ್ದಿ ಛತ್ತೀಸ್​ಗಡ್​​ನಿಂದ ಬಂದಿದ್ದು. ಅಲ್ಲಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 14, 850 ಶಿಕ್ಷಕರ ನೇಮಕಾತಿಗಾಗಿ ರಾಜ್ಯದಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇದಕ್ಕಾಗಿ ಎಂ.ಎಸ್.ಧೋನಿ ಕೂಡ ಒಂದು ಫಾರ್ಮ್ ಅನ್ನು ಭರ್ತಿ ಮಾಡಿದ್ದಾರೆ. ಶಿಕ್ಷಕ ಹುದ್ದೆಗೆ ಎಂ.ಎಸ್.ಧೋನಿ ಅವರ ನಾಮನಿರ್ದೇಶನವನ್ನು ನೋಡಿದ ನಂತರ ಎಲ್ಲರೂ ಆಶ್ಚರ್ಯಕ್ಕೊಳಗಾಗಿದ್ದಾರೆ. ಎಂಎಸ್ ಧೋನಿ ತನ್ನ ತಂದೆಯ ಹೆಸರನ್ನು ಸಚಿನ್ ತೆಂಡೂಲ್ಕರ್ ಎಂದು ಬರೆದಿದ್ದಾರೆ ಎಂದು ತಿಳಿದ ಕೂಡಲೇ ಎರಡನೇ ಬಾರಿಗೆ ಎಲ್ಲರೂ ಕಣ್ ಗಳನ್ನ ಅರಳಿಸಿ ಮತ್ತೊಮ್ಮೆ ಅರ್ಜಿಯನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ಆದರೆ ಇದಕ್ಕಿಂತ ಇನ್ನೊಂದು ದೊಡ್ಡ ಆಶ್ಚರ್ಯ ಏನೆಂದರೆ. ಈ ಅರ್ಜಿಯನ್ನು ಪರಿಶೀಲಿಸಿದ ಅಧಿಕಾರಿಗಳು ಇದು ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ಪರೀಕ್ಷಿಸದೆ ಈ ಅರ್ಜಿದಾರನನ್ನು ಶಿಕ್ಷಕರ ನೇಮಕಾತಿ ಸಂದರ್ಶನಕ್ಕಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಈ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ಬಹುಶಃ ಅದರ ಹಿಂದಿನ ನೈಜ ಕಥೆ ಹೊರ ಬರುತ್ತಿರಲಿಲ್ಲ.

[widget id=”custom_html-4″]

ಶಿಕ್ಷಕರ ಸಂದರ್ಶನಕ್ಕೆ ಎಂ.ಎಸ್.ಧೋನಿ ಸೇರಿದಂತೆ 15 ಜನರನ್ನು ಅಧಿಕಾರಿಗಳು ಶುಕ್ರವಾರ ಕರೆದಿದ್ದರು. ಇದರಲ್ಲಿ ಎಲ್ಲರೂ ಹಾಜರಿದ್ದರು. ಆದರೆ ಎಂ.ಎಸ್.ಧೋನಿ ಮಾತ್ರ ಗೈರು ಹಾಜರಾಗಿದ್ದರು. ಅಲ್ಲಿಯೇ ಅನುಮಾನದ ಸೂಜಿ ಗಾಢವಾಯಿತು. ಹೀಗಾಗಿ ಈ ಅರ್ಜಿ ನಕಲಿ ಎಂದು ಅಧಿಕಾರಿಗಳು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ. ಶಿಕ್ಷಕ ಹುದ್ದೆಗೆ ಭರ್ತಿ ಮಾಡಿದ ನಮೂನೆಯ ಪ್ರಕಾರ, ಎಂ.ಎಸ್.ಧೋನಿ ಅವರು ದುರ್ಗ್‌ನ ಸಿಎಸ್‌ವಿಟಿಯು ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ ಎಂದು ಹೇಳಲಾಗಿದೆ. ಈ ವಿಷಯ ಬೆಳಕಿಗೆ ಬಂದ ನಂತರ, ಅದು ಸಖತ್ ವೈರಲ್ ಆಗುತ್ತಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿಯಂತೆ ಹರಡುತ್ತಿದೆ. ನಕಲಿ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಆದರೆ ಈ ಅರ್ಜಿ ನಕಲಿ ಎಂಬುದು ಮೇಲ್ನೋಟಕೆ ಕಂಡು ಬರುತ್ತಿದ್ದರೂ, ಸಂದರ್ಶನಕ್ಕೆ ಅಭ್ಯರ್ಥಿಯ ಆಯ್ಕೆ ಮಾಡಿರುವುದು ಎಲ್ಲರಿಗೂ ಆ’ಘಾತಕಾರಿಯಾಗಿ ಕಂಡು ಬರುತ್ತಿದೆ. ನಿಸ್ಸಂಶಯವಾಗಿ, ಈ ಪ್ರಕರಣಗಳನ್ನು ಕಾನೂನು ಕ್ರಮದಲ್ಲಿಯೂ ತನಿಖೆ ಮಾಡಲಾಗುತ್ತದೆ. ಹೀಗಾಗಿ ಈ ಕಥೆಯಲ್ಲಿ ಇನ್ನೂ ಕೆಲವು ತಿರುವುಗಳನ್ನು ನಾವು ಕಾಣಬಹುದಾಗಿದೆ.