ಲಾಕ್ ಡೌನ್ ಇದ್ದರೂ ಹೂವುಗಳನ್ನು ಮಾರುತ್ತಿದ್ದ ವಯಸ್ಸಾದ ಅಜ್ಜಿ ! ಅಲ್ಲಿಗೆ ಬಂದ ಪೊಲೀಸರು ಅಜ್ಜಿಗೆ ಮಾಡಿದ್ದೇನು ಗೊತ್ತಾ ?

Inspire

ಸ್ನೇಹಿತರೇ, ಈ ಕೊ’ರೋನಾ ಸೋಂಕು ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ರ’ಣಕೇಕೆ ಹಾಕುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಗಳಿಲ್ಲದೆ, ಆಕ್ಸಿಜೆನ್ ಇಲ್ಲದೆ ಸಾ’ವಿಗೀಡಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರ ನಡುವೆ ಜನರ ಕೂಡ ಮುಖಕ್ಕೆ ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ನಿರ್ಲಕ್ಷ್ಯೆ ತೋರುತ್ತಿರುವುದು ಕೂಡ ಸೋಂಕಿನ ಹೆಚ್ಚಳಕ್ಕೆ ಕಾರಣವಾಗಿದೆ. ಆಗಾಗಿ ಕೊ’ರೋನಾ ಸೋಂಕಿನ ಚೈನ್ ಲಿಂಗ್ ನ್ನ ಬ್ರೇಕ್ ಮಾಡುವ ಸಲುವಾಗಿ ಹಲವು ರಾಜ್ಯಗಳ ಸರ್ಕಾರಗಳು ಲಾಕ್ ಡೌನ್ ಸೇರಿದಂತೆ ಟಫ್ ರೂಲ್ ಗಳ ಮೊರೆ ಹೋಗಿವೆ. ಇನ್ನು ಈ ಲಾಕ್ ಡೌನ್ ಗಳಿಂದ ಬಡವರು, ದಿನಗೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರ ಮಾಡಿ ಜೀವನವ ನಡೆಸುವವರು ಹಾಗೂ ನಿರ್ಗತಿಕರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ.

ಇನ್ನು ಇದೆ ವೇಳೆ ಸೋಂ’ಕು ಹೆಚ್ಚಾಗಿ ಹರಡುತ್ತಿರುವ ಕಾರಣ ಮುಂಬೈನಲ್ಲೂ ಕೂಡ ಲಾಕ್ ಡೌನ್ ಮಾಡಲಾಗಿದೆ. ಇನ್ನು ಮುಂಬೈನ ಪ್ರದೇಶವೊಂದರಲ್ಲಿ ತುಂಬಾ ವಯಸ್ಸಾಗಿರುವ ಅಜ್ಜಿಯೊಬ್ಬರು ಹೂವಗಳನ್ನ ಮಾರಿ ಜೀವನ ನಡೆಸುತ್ತಿದ್ದರು. ಲಾಕ್ ಡೌನ್ ಇದ್ದರೂ ಸಹ ಹೂಗಳನ್ನ ಮಾರುತ್ತಿದ್ದ ಅಜ್ಜಿಯನ್ನ ನೋಡಿ ಅಲ್ಲಿನ ಸ್ಥಳೀಯ ಪೊಲೀಸರು ಲಾಕ್ ಡೌನ್ ಇರುವ ಕಾರಣ ಹೂಗಳನ್ನ ಮಾರದಂತೆ, ಹೊರಗಡೆ ಬಾರದಂತೆ ಆ ತಾಯಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಹೂಗಳನ್ನ ಮಾರದಿದ್ದರೆ ನನ್ನ ಕುಟುಂಬವು ಹಸಿವಿನಿಂದ ಸಾ’ಯಬೇಕಾಗುತ್ತದೆ ಎಂದು ಅಜ್ಜಿ ಪೊಲೀಸರಿಗೆ ತಿಳಿಸಿದ್ದಾರೆ.

ಇನ್ನು ಅಜ್ಜಿಯ ಸಂಕಷ್ಟವನ್ನ ಕೇಳಿ ಭಾವುಕರಾದ ಪೊಲೀಸರು ಆ ತಾಯಿಗೆ ೫೦೦ರುಗಳನ್ನ ಕೊಟ್ಟು ಲಾಕ್ ಡೌನ್ ಮುಗಿಯುವವರಿಗೂ ಪ್ರತೀ ದಿವಸ 500ರೂಪಾಯಿಗಳನ್ನ ಕೊಡುವುದಾಗಿ ಪೊಲೀಸರು ಅಜ್ಜಿಗೆ ಭರವಸೆ ನೀಡಿದ್ದಾರೆ. ಇನ್ನು ಮುಂಬೈ ಪೊಲೀಸರ ಈ ಮಾನವೀಯತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ. ಸ್ನೇಹಿತರೇ, ಎಲ್ಲಾ ಪೊಲೀಸರು ಒಂದೇ ರೀತಿ ಇರೋದಿಲ್ಲ. ಅವರೂ ಕೂಡ ಮನುಷ್ಯರೇ. ಅವರಲ್ಲಿ ಕೂಡ ಮಾನವೀಯತೆ ತುಂಬಿರುವ ಅಧಿಕಾರಿಗಳು ಬಹುತೇಕರಿದ್ದಾರೆ. ಇದರ ಬಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..