ಸಿಎಂ ಯಡಿಯೂರಪ್ಪ ಕುಮಾರಸ್ವಾಮಿಗೆ ಮಾತ್ರ ಇಮ್ಯೂನಿಟಿ ಪವರ್ ಇರೋದಾ !ಭಾರೀ ಸದ್ದು ಮಾಡಿದ ಯುವತಿಯ ವಿಡಿಯೋ..

Kannada News
Advertisements

ಇಮ್ಯೂನಿಟಿ ಪವರ್ ಸಿಎಂ ಯಡಿಯೂರಪ್ಪ, ಕುಮಾರಸ್ವಾಮಿಗೆ ಮಾತ್ರ ಇರುತ್ತೆ. ಯಾಕಂದ್ರೆ ಇಮ್ಯೂನಿಟಿ ಅಂದ್ರೆ ನೀವ್ ಅದ್ಕೊಂಡಿರೋ ದೇಹದಲ್ಲಿ ಅಲ್ಲ. ಬದಲಾಗಿ ಖಜಾನೆಯಲ್ಲಿರೋ ಕಾಸು ಸ್ವಾಮಿ. ಖಜಾನೆಯಲ್ಲಿ ಕಾಸಿದ್ರೆ ಇಮ್ಯೂನಿಟಿ ಪವರ್ ಜಾಸ್ತಿನೇ ಇರುತ್ತೆ. ಹಾಗಾಗಿ ಅವರೆಲ್ಲ ಕೊರೊನಾದಿಂದ ಗೆದ್ದು ಬರ್ತಾರೆ ..ಹೀಗಂತ ಮೈಸೂರಿನ ಯುವತಿಯೊಬ್ಬಳು ಸರ್ಕಾರವನ್ನ ಬಡಿದೆಬ್ಬಿಸುವಂತೆ ಜಾಡಿಸಿರೋ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಸರ್ಕಾರದ ವೈಫಲ್ಯವನ್ನ ಈ ಯುವತಿ ಎತ್ತಿ ತೋರಿಸಿದ್ದಾಳೆ. ಈ ಮೂಲಕ ದುಡಿಯುವ ವರ್ಗದವರ ನೋವಿನ ಅಂತರಾಳವನ್ನ ಈ ಯುವತಿ ಅದೆಷ್ಟು ಅಚ್ಚುಕಟ್ಟಾಗಿ ಹೇಳಿದ್ದಾಳೆ ಅಂದ್ರೆ ಎಂಥವರೂ ಸಹ ಮೆಚ್ಚಲೇಬೇಕು.

[widget id=”custom_html-4″]

Advertisements

ನಮ್ಮ ಸರ್ಕಾರಗಳು ಬಡವರಿಗೊಂದು ನ್ಯಾಯ. ಶ್ರೀಮಂತರಿಗೊಂದು ನ್ಯಾಯ ಮಾಡ್ತಿವೆ. ಬಡವರು ಏನಾದ್ರು ಕೊರೊನಾದಿಂದ ಮೃ’ತಪಟ್ರೆ, ಅವರ ದೇಹದಲ್ಲಿ ಇಮ್ಯೂನಿಟಿ ಪವರ್ ಇರಲಿಲ್ಲ. ಹಾಗಾಗಿ ಸ’ತ್ತೋದ್ರು ಅಂತಾರೆ. ಆದ್ರೆ, ರಾಜಕಾರಣಿಗಳಿಗೆಲ್ಲಾ ಇಮ್ಯೂನಿಟಿ ಪವರ್ ಜಾಸ್ತಿನೇ ಇರುತ್ತೆ. ಯಾಕಂದ್ರೆ ಅವರ ಖಜಾನೆಯಲ್ಲಿ ಹಣವಿರುತ್ತಲಾ ಅಂತ ಈ ಯುವತಿ ವ್ಯಂಗ್ಯ ಮಾಡಿದ್ದಾಳೆ. ಇನ್ನ ಕೇರಳ, ಆಂಧ್ರ ಸರ್ಕಾರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾಳೆ. ಕೊರೊನಾ ಸಂಕಷ್ಟ ಕಾಲದಲ್ಲಿ ಕೇರಳ, ಆಂಧ್ರ ಸರ್ಕಾರ ಬಡವರಿಗೆ ಹಣ, 40ಕೆಜಿ ಅಕ್ಕಿ, ಬೇಳೆ, ಮೆಣಸಿನಕಾಯಿ ಹೀಗೆ ಅವಶ್ಯಕವಾದ ವಸ್ತುಗಳನ್ನ ಮನೆ ಮನೆಗೆ ನೀಡಿದ್ರು. ಆದ್ರೆ, ನಾವು ಕನ್ನಡದವರು ಅಂತ ಹೇಳಿಕೊಳ್ಳಲು ನಾಚಿಕೆಯಾಗುತ್ತೆ. ನಮ್ಮ ರಾಜ್ಯ ಸರ್ಕಾರ ಬಡವರಿಗೆ ಅಂತ ಏನ್ ಮಾಡಿದೆ? ಯಾರಿಗೂ ಸಹಾಯ ಮಾಡೋ ಮನಸೇ ಇಲ್ಲ. ನಾನ್ ಬದುಕಿದ್ರೆ ನನಗೆ, ನೀನ್ ಬದುಕಿದ್ರೆ ನಿನಗೆ ಅಷ್ಟೆ ಸರ್ ಜೀವನ. ನಾವು ಕನ್ನಡದವರು ನೀರ್ ಕೇಳಿದ್ರೆ, ಪಾನಕ ಕೊಡ್ತೀವಿ ಅಂತಾರೆ. ಆದ್ರೆ, ನೀರಲ್ಲ ಬಚ್ಚಲಲ್ಲಿ ಹೋಗೋ ನೀರ್ ಸಹ ಕೊಡಲ್ಲ ಈಗ ಅಂತ ಕಾಲ ಬಂದಿದೆ.

[widget id=”custom_html-4″]

ಜನಪ್ರತಿನಿಧಿಗಳಿಗೆ ವೋಟ್ ಹಾಕಿದ್ದಕ್ಕೆ ನಮಗೆ ಈ ಸ್ಥಿತಿ ಬಂದಿದೆ. ನಾವು ಬಡವರು ತಿನ್ನೋಕು ಗತಿಯಿಲ್ಲದೇ, ಕೊರೊನಾ ಚಿಕಿತ್ಸೆಗೂ ಕಾಸಿಲ್ಲದೇ ಪರದಾಡ್ತಿದೀವಿ. ಆದ್ರೆ, ಈ ರಾಜಕಾರಣಿಗಳು ಕುರ್ಚಿಗಾಗಿ ಹೊ’ಡೆದಾಡ್ತಿದಾರೆ. ವೋಟ್ ಹಾಕುವಾಗ ಎಲ್ಲರ ಮನೆನೂ ನೆನಪಿರುತ್ತೆ ಇವರಿಗೆ? ಬಡವರಿಗೆ ತಿನ್ನಲು ಅನ್ನ ಕೊಡಲು ಇವರಿಗೆ ಯೋಗ್ಯತೆ ಇಲ್ಲ ಎಂದು ಯುವತಿ ವಾಗ್ದಾಳಿ ನಡೆಸಿದ್ದಾಳೆ. ಸರ್ಕಾರ ಲಾಕ್ ಡೌನ್ ಟೈಮ್ ನಲ್ಲಿ ಅಕ್ಕಿ ಕೊಡ್ತು. ಎಷ್ಟು ಕೊಟ್ರು ಕೇವಲ 2 ಕೆಜಿ ಅಷ್ಟೇ. ಸಾಕಾಗುತ್ತೆ ಅಷ್ಟೆ. ಸರ್ಕಾರದವರೇನು ಒಂದೂವರೇ ಕೆಜಿ ಅಕ್ಕಿ ಯೂಸ್ ಮಾಡ್ತಾರಾ?ಅಂತ ಯುವತಿ ಬಡವರಿಗಾದ ಅ’ನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾಳೆ. ಒಟ್ಟಿನಲ್ಲಿ ಈ ಮೈಸೂರಿನ ಯುವತಿ ದುಡಿಯುವ ವರ್ಗದ ಜನರ ಕಷ್ಟಗಳ ಬಗ್ಗೆ ಹೇಳಿಕೊಂಡಿರೋ ಈ ವಿಡಿಯೋ ಸಾಕಷ್ಟು ವೈರಲ್ ಆಗಿ, ಜನರ ಮನ ತಟ್ಟಿದೆ.