ಬಿಸಿ ರಾಗಿಮುದ್ದೆ ಡೋಲೊ ಮಾತ್ರೆ..ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದ ಈ ಯುವತಿ ಯಾರು ಗೊತ್ತಾ ?ಈಕೆ ಓದಿರೋದು ಏನ್ ಗೊತ್ತಾ?

Inspire Kannada Mahiti
Advertisements

ಕೆಲವು ದಿನಗಳ ಹಿಂದಷ್ಟೇ ಕೊರೋನಾ, ಲಾಕ್ ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬಳು ಸ್ಥಳೀಯ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಲ್ಲಿ ಸಿಕ್ಕಾಪಟ್ಟೆ ಸಡ್ಡು ಮಾಡಿತ್ತು. ದಿನ ಕಳೆದು ಬೆಳಗಾಗುವುದರೊಳಗೆ ರಾಗಿ ಮುದ್ದೆ, ಡೋಲೋ ೬೫೦ ಮಾತ್ರೆ ಕೊರೋನಾಗೆ ಮದ್ದು ಎಂದಿದ್ದ ಆಕೆ ಕರ್ನಾಟಕ ರಾಜ್ಯದಂತ ಫೇಮಸ್ ಆಗಿಬಿಟ್ಟಿದ್ದಳು. ಎಷ್ಟರ ಮಟ್ಟಿಗೆ ಎಂದರೆ ಸೋಷಿಯಲ್ ಮೀಡಿಯಾಗಳು, ಮಾಧ್ಯಮಗಳಿಂದ ಹಿಡಿದು ವಾಟ್ಸಾಪ್ ಸ್ಟೇಟಸ್ ಗಳಲ್ಲಿಯೂ ಸಹ ಆಕೆ ಮಾತನಾಡಿದ್ದ ವಿಡಿಯೋ ಹಲಚಲ್ ಎಬ್ಬಿಸಿತ್ತು. ಆಕೆ ಕೊರೋನಾ ಲಕ್ಡೌನ್ ಕುರಿತಂತೆ ಸರ್ಕಾರ ಹಾಗೂ ರಾಜಕಾರಣಿಗಳು ಬಗ್ಗೆ ತರಾಟೆ ತೆಗೆದುಕೊಂಡಿದ್ದ ಆ ವಿಡಿಯೋ ವಾಸ್ತವಕ್ಕೆ ಸರಿ ಎನಿಸಿದ್ದ ಕಾರಣವೇನೋ ಸಾಮಾನ್ಯ ಯುವತಿಯೊಬ್ಬಳು ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಳು.

[widget id=”custom_html-4″]

Advertisements

ಪಕ್ಕದ ರಾಜ್ಯದ ಸರ್ಕಾರ ಅಲ್ಲಿನ ಸಾಮಾನ್ಯ ಜನರಿಗೆ ಹೇಗೆಲ್ಲಾ ನೆರವಾಗುತ್ತಿದೆ, ನಮ್ಮ ರಾಜ್ಯಸರ್ಕಾರ ಏಕೆ ಬಡವರಿಗೆ ಧ್ವನಿಯಾಗುತ್ತಿಲ್ಲ ಎಂದು ಸರ್ಕಾರವನ್ನ ತರಾಟೆ ತೆಗೆದುಕೊಂಡಿದ್ದರು ಈ ಮಹಿಳೆ. ಇನ್ನು ರಾಜಕಾರಾಣಿಗಳಿಗೆ ವಾಸಿಯಾಗುವ ಕೊರೋನಾ ಸಾಮಾನ್ಯ ಜನರಿಗೇಕೆ ವಾಸಿಯಾಗುತ್ತಿಲ್ಲ ಎಂದು ರಾಜ್ಯಸರ್ಕಾರ ಹಾಗೂ ರಾಜಕಾರಣಿಗಳಿಗೆ ಪ್ರಶ್ನೆಗಳನ್ನ ಮಾಡಿದ್ದಳು. ಇನ್ನು ಸಾಮಾನ್ಯ ಹುಡುಗಿಯೊಬ್ಬಳು ಇಷ್ಟೆಲ್ಲಾ ಮಾತನಾಡಿದ ಮೇಲೆ ಆಕೆ ಯಾರು, ಯಾವ ಊರು ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೆ ಇರುತ್ತದೆ. ಸಾಂಸ್ಕೃತಿಕ ನಗರಿ ಮೈಸೂರಿನ ಜನತಾನಗರದ ನಿವಾಸಿಯಾಗಿರುವ ಈ ಯುವತಿಯ ಹೆಸರು ಶಶಿರೇಖಾ ಎಂದು. ಅದೇನೋ ಗಾದೆ ಮಾತಿನಂತೆ ‘ಕಡ್ಲೆ ಇದ್ದವರಿಗೆ ಹಲ್ಲಿಲ್ಲ, ಹಲ್ಲಿದ್ದವರಿಗೆ ಕಡ್ಲೆ ಇಲ್ಲ ಎಂಬಂತೆ’ ಓದಿನಲ್ಲಿ ಮುಂದಿದ್ದರೂ ಮನೆಯಲ್ಲಿ ಜೀವನ ಸಾಗಿಸಲು ಕಷ್ಟವಾದಷ್ಟು ಬಡತನ. ಹಾಗಾಗಿ ಆಕೆಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲಾಗಿಲ್ಲ. ಇಂತಹ ಕಷ್ಟದಲ್ಲಿಯೂ ಸಹ ಆಕೆ ಎಂಟನೇ ತರಗತಿಯವರೆಗೆ ಓದಿದ್ದಾರೆ.

[widget id=”custom_html-4″]

ಬಳಿಕ ಆಕೆಗೆ ಮದ್ವೆ ಮಾಡುತ್ತಾರೆ. ಇನ್ನು ಈಗ ಆಕೆಗೆ ಧೃತಿ ಎನ್ನುವ ಹೆಣ್ಣುಮಗಳೊಬ್ಬಳಿದ್ದಾಳೆ. ಇನ್ನು ತನಗಂತೂ ಓದಲಿಕ್ಕೆ ಅವಕಾಶ ಸಿಗಲಿಲ್ಲ. ನನ್ನ ಮಗಳು ಆದ್ರೂ ಚೆನ್ನಾಗಿ ಓದಿ ಐಎಎಸ್ ಅಧಿಕಾರಿಯಬೇಕು ಎಂಬುದು ಶಶಿರೇಖಾ ಅವರ ಕನಸಂತೆ. ಅದಕ್ಕಾಗಿ ನಾನು ಎಷ್ಟು ಕಷ್ಟ ಬೇಕಾದರೂ ಪಡುತ್ತೇನೆ. ನನ್ನ ಕನಸನ್ನ ನನ್ನ ಮಗಳ ಮೂಲಕ ನೇರಿಸಿಕೊಳ್ಳುತ್ತೇನೆ ಎಂದು ಶಶಿರೇಖಾ ಅವರು ಹೇಳಿದ್ದಾರೆ. ತನ್ನ ಮಗಳು ಮಹಿಳಾ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಂತೆ ಸಾಮಾನ್ಯ ಜನರಿಗೆ ಸ್ಪಂದಿಸುವಂತಹ ದಿಟ್ಟ, ದಕ್ಷ ಅಧಿಕಾರಿಯಾಗಬೇಕು ಎಂಬುದು ನನ್ನ ಕನಸು ಎಂದು ಹೇಳಿದ್ದಾರೆ. ಈ ಮಹಿಳೆಯ ಕನಸನ್ನ ಆ ದೇವರು ಈಡೇರಿಸುವಂತಾಗಲು ಎಂಬುದೇ ನಮ್ಮ ಆಶಯ..