ವಿಚ್ಛೇದನದ ಬಳಿಕ ಹೊಸ ಹುಡುಗಿ ಹುಡುಕಿಕೊಂಡ ನಾಗಚೈತನ್ಯ.!ಅಸಲಿಗೆ ಈ ಚೆಲುವೆ ಯಾರ್ ಗೊತ್ತಾ.?

Cinema

ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಟಾಲಿವುಡ್ ಸ್ಟಾರ್ ನಟ ನಾಗಚೈತನ್ಯ, ನಟಿ ಸಮಂತಾ ಅವರು ಇಬ್ಬರು ಒಬ್ಬರಿಂದ ಒಬ್ಬರು ದೂರ ಆಗಲಿಕ್ಕೆ ವಿ’ಚ್ಛೇದನ ಪಡೆದುಕೊಂಡಿದ್ದಾರೆ. ಈ ಸುದ್ದಿ ಈಗಾಗಲೇ ಸಾಕಷ್ಟು ಜನರಿಗೆ ಗೊತ್ತು. ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ಅವರು ಬೇರೆ ಬೇರೆ ಆಗಿದ್ದು, ಇವರಿಬ್ಬರ ಅಭಿಮಾನಿಗಳಿಗೆ ಎಲ್ಲಿಲ್ಲದ ನೋವು ಉಂಟಾಗಿತ್ತು. ಸಾಕಷ್ಟು ಜನರು ಇವರಿಬ್ಬರ ವಿ’ಚ್ಛೇದನವನ್ನು ಒಮ್ಮೆಗೆ ಒಪ್ಪಲಿಲ್ಲ. ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಳ್ಳಬೇಕಿದ್ದ ಈ ಜೋಡಿ ಈ ರೀತಿ ಬೇರೆ ಬೇರೆ ಆಗಿಬಿಟ್ಟರಲ್ಲ ಎಂದು ಅಭಿಮಾನಿಗಳು ಮತ್ತು ಟಾಲಿವುಡ್ ಸಿನಿಮಾರಂಗದ ಕಲಾವಿದರು ಕೂಡ ನೊಂ’ದುಕೊಂಡರು.

ಹೌದು ಸಮಂತ ನಾಗಚೈತನ್ಯ ಈಗಾಗಲೇ ಇಬ್ಬರು ಬೇರ್ಪಟ್ಟಿದ್ದು, ಅವರೋಂದು ತೀರ, ಇವರೊಂದು ತೀರ ಎನ್ನುವಂತಾಗಿದೆ. ಜೊತೆಗೆ ಸಮಂತ ಹಾಗೂ ನಟ ನಾಗಚೈತನ್ಯ ಅವರವರ ಸಿನಿಮಾ ಶೂಟಿಂಗ್ ನಲ್ಲಿ ತುಂಬಾ ಬಿಜಿಯಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಯ ನಡುವೆ ನಾಗಚೈತನ್ಯ ಅವರು ಇನ್ನೊಬ್ಬ ಸುಂದರಿಯ ಹಿಂದೆ ಹೋಗಿದ್ದಾರೆ, ನಾಗಚೈತನ್ಯ ಅವರಿಗೆ ಇನ್ನೊಬ್ಬ ಸುಂದರಿ ಸಿಕ್ಕಿದ್ದಾರೆ ಎಂಬ ಮಾತುಗಳು ಅತ್ತ ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಹೌದು ನಟ ನಾಗಚೈತನ್ಯ ಅವರಿಗೆ ಹೊಸ ಗರ್ಲ್ಫ್ರೆಂಡ್ ಸಿಕ್ಕಿರುವುದು ನಿಜ. ಆದರೆ ನಿಜ ಜೀವನದಲ್ಲಿ ಅಲ್ಲ, ಬದಲಿಗೆ ತೆರೆಯ ಮೇಲೆ ಮಾತ್ರ ಎನ್ನಲಾಗಿದೆ. ಆ ನಟಿ ಬೇರಾರೂ ಅಲ್ಲ, ಅವರೇ ನಟಿ ಪ್ರಿಯ ಶಂಕರ್ ಭವಾನಿ ಎಂದು ತಿಳಿದುಬಂದಿದೆ. ಹೌದು ವಿಕ್ರಮ್ ಕೆ ನಿರ್ದೇಶನದಲ್ಲಿ ಹಾಗೂ ನಾಗಚೈತನ್ಯ ಅವರ ನಟನೆಯ ಒರಿಜಿನಲ್ ವೆಬ್ಸೇರೀಸ್ ಒಂದು ಮೂಡಿ ಬರುತ್ತಿದೆ.

ಈ ಸಿರೀಸ್ ಶೂಟಿಂಗ್ ಮುಂಬರುವ ವರ್ಷದಲಿ ಆರಂಭವಾಗಲಿದೆಯಂತೆ. ಈ ಪ್ರಿಯಾ ಶಂಕರ್ ಭವಾನಿ ನಾಗಚೈತನ್ಯ ಅವರಿಗೆ ನಟಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಪ್ರಿಯಾ ಶಂಕರ್ ಭವಾನಿ ಮೂಲತಹ ತಮಿಳುನಾಡಿನ ನಟಿ. ಮೊದಲಿಗೆ ಇವರು ನ್ಯೂಸ್ ಚಾನೆಲ್ ನಲ್ಲಿ ನಿರೂಪಣೆ ಮಾಡುತ್ತಿದ್ದರು. ನಂತರ ತಮಿಳು ಕಿರುತೆರೆಯ ಧಾರಾವಾಹಿಯೊಂದರಲ್ಲಿ ಕೂಡ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.

ಮೇಯದ ಮಾನ್ ಎಂಬ ಸಿನಿಮಾದಲ್ಲಿ ನಟಿಸಿ, 2017ರಲ್ಲಿ ಹೆಚ್ಚು ಪ್ರಖ್ಯಾತಿ ಪಡೆದರು. ನಟಿ ಪ್ರಿಯಾ ಶಂಕರ್ ಭವಾನಿ ಅವರದೆ ಆದ ಅಭಿನಯದ ಮೂಲಕ ಇದೀಗ ಹೆಚ್ಚು ಸುದ್ದಿಯಲ್ಲಿದ್ದಾರೆ. ಹಾಗೆ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಜೊತೆಗೆ ಸುಮಾರು ಸಿನಿಮಾಗಳು ಇದೀಗ ಅವರ ಕೈಯಲ್ಲಿವೆ ಎಂದು ತಿಳಿದುಬಂದಿದೆ…