ಕನ್ನಡ ಕಿರುತೆರೆ ಲೋಕದಲ್ಲಿ ಹೆಚ್ಚು ಫೇಮಸ್ ಆಗಿರುವ ಲಕ್ಷ್ಮಿ ಬಾರಮ್ಮ ಸೀರಿಯಲ್ ನ ಗೊಂಬೆ ಖ್ಯಾತಿಯ ನಟಿ ನೇಹಾ ಗೌಡ ಅವರು ಕನ್ನಡಿಗರಿಗೆ ಚಿರಪರಿಚಿತರಾಗಿರುವವರೇ..ಕನ್ನಡ ಕಿರುತೆರೆ ಧಾರಾವಾಹಿಗಳಲ್ಲೂ ಕೂಡ ಮಿಂಚಿರುವ ನಟಿ ನೇಹಾ ಹಲವಾರು ಅವಾರ್ಡ್ ಗಳನ್ನ ಕೂಡ ಪಡೆದುಕೊಂಡಿದ್ದಾರೆ. ಇನ್ನು ಈಗ ಕನ್ನಡದ ಖಾಸಗಿ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ರಾಜ ರಾಣಿ’ ರಿಯಾಲಿಟಿ ಶೋ ನಲ್ಲಿ ನೇಹಾ ಗೌಡ ಹಾಗೂ ಅವರ ಪತಿ ಚಂದನ್ ಜೊತೆ ಭಾಗವಹಿಸಿದ್ದಾರೆ. ಕಿರುತೆರೆಯ ಸೆಲೆಬ್ರೆಟಿ ಜೋಡಿಗಳನ್ನ ಪರಿಚಯಿಸಿ ಅವರ ಕಡೆಯಿಂದ ಹಲವಾರು ಟಾಸ್ಕ್ ಗಳನ್ನ ಮಾಡಿಸಿ, ಅವರ ಮದುವೆ, ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟ ಅನುಭವಗಳನ್ನ ಹಚ್ಚಿಕೊಳ್ಳಲು ರಾಜರಾಣಿ ರಿಯಾಲಿಟಿ ಶೋ ಮೂಲಕ ವೇದಿಕೆ ಕಲ್ಪಿಸಲಾಗಿದೆ.
ಇನ್ನು ಈ ರಿಯಾಲಿಟಿ ಶೋನಲ್ಲಿ ನೇಹಾ ಗೌಡ ಚಂದನ್ ದಂಪತಿ ಕೂಡ ಭಾಗವಹಿಸಿದ್ದು, ಇದೆ ವೇದಿಕೆಯಲ್ಲಿ ನಟಿ ನೇಹಾ ಗೌಡ ಮಗುವೊಂದನ್ನ ದತ್ತು ಪಡೆಯುವುದಾಗಿ ಹೇಳಿಕೊಂಡಿದ್ದಾರೆ. ಹಲವಾರು ವರ್ಷಗಳಿಂದಲೇ ಹೆಣ್ಣು ಮಗುವನ್ನ ದತ್ತು ಪಡೆಯಬೇಕು ಎಂಬ ಆಲೋಚನೆ ನನ್ನ ಮನಸಿನಲಿತ್ತು ಎಂದು ಅವರು ಅವರು ಹೇಳಿದ್ದಾರೆ. ಇನ್ನು ಈ ವಿಷಯ ನನ್ನ ಕುಟುಂಬದವರಿಗೂ ಕೂಡ ತಿಳಿದಿಲ್ಲ. ಹೆಣ್ಣು ಮಗುವನ್ನ ದತ್ತು ಪಡೆಯುವುದರ ಬಗ್ಗೆ ನನ್ನ ಅನಿಸಿಕೆ ಹಂಚಿಕೊಂಡಾಗ ಸ್ವತಃ ಚಂದನ್ ಕೂಡ ಅಚ್ಚರಿಯಾಗಿದ್ದರು. ಆದರೆ ನನ್ನ ಪತಿ ಚಂದನ್ ಎಂದೆಂದಿಗೂ ನನ್ನ ಆಯ್ಕೆ ಏನೇ ಇರಲಿ ಅದನ್ನ ಒಪ್ಪಿಕೊಳ್ಳುವ ವ್ಯಕ್ತಿ ಎಂದು ನೇಹಾ ಗೌಡ ಹೇಳಿದ್ದಾರೆ.

ಇನ್ನು ಇದರ ಬಗ್ಗೆ ನೇಹಾ ಪತಿ ಚಂದನ್ ಪ್ರತಿಕ್ರಿಯೆ ನೀಡಿದ್ದು,ನೇಹಾ ಈಗಾಗಲೇ ಸ್ವತಂತ್ರಳಾಗಿದ್ದಾಳೆ. ತನ್ನದೇ ಕಷ್ಟಪಟ್ಟು ಕೆಲಸ ಮಾಡಿರುವ ಆಕೆ ಶ್ರಮ ಜೀವನ ನಡೆಸುತ್ತಿದ್ದಾಳೆ. ಜೊತೆಗೆ ಒಂದು ಹೆಣ್ಣು ಮಗುವಿಗೆ ತನ್ನ ಕುಟುಂಬದ ಪ್ರೀತಿ ತೋರಿಸುತ್ತಿದ್ದಾಳೆ. ಯಾರಿಗೂ ಗೊತ್ತಿಲ್ಲದೇ ಈಗಾಗಲೇ ಒಂದು ಹೆಣ್ಣು ಮಗುವಿನ ಜೀವನಕ್ಕೆ ಆಧಾರವಾಗಿರುವ ನೇಹಾ ಮತ್ತೊಂದು ಹೆಣ್ಣು ಮಗುವನ್ನ ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾಳೆ. ನಮ್ಮ ಮನೆಯಲ್ಲಿ ನಮ್ಮ ಕುಟುಂಬದವರು ನಮಗೆ ನೀಡುವ ಪ್ರೀತಿಯನ್ನ ನಾವು ಬೇರೆ ಹೆಣ್ಣುಮಕ್ಕಳಿಗೂ ನೀಡಬೇಕು. ಅವರಿಗೂ ಕೂಡ ತಂದೆ ತಾಯಿಯ ಪ್ರೀತಿ ಸಿಗುವಿನಂತಾಗಬೇಕು ಎಂದು ನೇಹಾಗೌಡ ಹೇಳಿದ್ದಾರೆ.