ತಾಯಿಯ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಪೋಸ್ಟ್ ಮಾಡಿದ ನಿಖಿಲ್..ಆ ಪೋಸ್ಟ್ ನಲ್ಲಿ ಏನಿದೆ ಗೊತ್ತಾ.?

News
Advertisements

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆ ರೇವತಿಯವರೊಂದಿಗೆ ಏಪ್ರಿಲ್ 17ರಂದು ರಾಮನಗರ ಮತ್ತು ಚನ್ನಪಟ್ಟಣದ ನಡುವೆ ಇರುವ ಜಾನಪದ ಲೋಕದಲ್ಲಿ ನಡೆಯಲಿದೆ. ಇನ್ನು ಮದುವೆ ಸಂಭ್ರಮದಲ್ಲಿರುವ ಸ್ಯಾಂಡಲ್ವುಡ್ ಯುವರಾಜ ನಿಖಿಲ್ ತನ್ನ ತಾಯಿ ಅನಿತಾ ಕುಮಾರಸ್ವಾಮಿಯವರ ಹುಟ್ಟುಹಬ್ಬಕ್ಕೆ ಶುಭಕೋರಿ ಪೋಸ್ಟ್ ಮಾಡಿದ್ದಾರೆ.

Advertisements

ಅನಿತಾ ಕುಮಾರಸ್ವಾಮಿ ಹುಟ್ಟುಹಬ್ಬದ ಪ್ರಯುಕ್ತ ಪ್ರೀತಿಯಿಂದ ತನ್ನ ತಾಯಿಗೆ ಬರ್ತ್ ಡೇ ಶುಭಾಶಯಗಳನ್ನು ತಿಳಿಸಿದ್ದು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಅಮ್ಮನ ಜೊತೆಗೆ ರೇವತಿ ಸಮೇತನಾಗಿರುವ ಫೋಟೋವನ್ನ ಕೂಡ ಹಂಚಿಕೊಂಡಿದ್ದಾರೆ.

ಹಾಗಾದ್ರೆ ನಿಖಿಲ್ ಕುಮಾರಸ್ವಾಮಿ ಪೋಸ್ಟ್ ನಲ್ಲಿ ತನ್ನ ತಾಯಿಯ ಬಗ್ಗೆ ಬರೆದುಕೊಂಡಿರುವುದೇನು ಗೊತ್ತಾ.? ಅಮ್ಮ ನಿಂಗೆ ನಿನ್ನ ಪ್ರೀತಿಯ ಮಗನಿಂದ ಹುಟ್ಟು ಹಬ್ಬದ ಶುಭಾಶಯಗಳು. ಅಮ್ಮ ನೀನು ನನಗೆ ಜನ್ಮ ಕೊಟ್ಟಾಗಿನಿಂದ ಹಿಡಿದು ಇದುವರೆಗೂ ನನಗಾಗಿ ತುಂಬಾ ತ್ಯಾಗ ಮಾಡಿರುವೆ. ಅಮ್ಮ ಇಡೀ ನನ್ನ ಜೀವನ ಪೂರ್ತಿ ನಿಂಗೆ ಋಣಿಯಾಗಿರುತ್ತೇನೆ. ನೀನು ಯಾವಾಗಲೂ ನಗುತಿರಬೇಕು. ನೀನು ಫೋಟೋದಲ್ಲಿ ಹೇಗೆ ನಗುತ್ತಿದ್ದಿಯೋ ಹಾಗೆ ಎಂದೆಂದಿಗೂ ನೀನು ಖುಷಿಯಾಗಿರಬೇಕು.

ಲವ್ ಫ಼ಾರ್ ಎವರ್ ಎಂದು ಬರೆದು ಹ್ಯಾಶ್ ಟ್ಯಾಗ್ ಹಾಕಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇನ್ನು ತನ್ನ ಭಾವಿ ಪತ್ನಿ ರೇವತಿಯವರೊಂದಿಗೆ ತಾಯಿ ಅನಿತಾ ಕುಮಾರಸ್ವಾಮಿ ಜೊತೆಗಿರುವ ಫೋಟೋವನ್ನ ಕೂಡ ಹಂಚಿಕೊಂಡಿದ್ದಾರೆ. ಅನಿತಾ ಕುಮಾರಸ್ವಾಮಿಯವರಿಗೆ ನಮ್ಮ ತಂಡದ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು.