ಬೆಂಗಳೂರಿನಿಂದ ಮತ್ತೆ ಶಿಫ್ಟ್ ಆಯ್ತು ನಿಖಿಲ್ ಮದುವೆ..ಫೈನಲ್ ಆಗಿ ಮದ್ವೆ ನಡೆಯೋ ಸ್ಥಳ ಇದೆ ನೋಡಿ..

Cinema News
Advertisements

ಕೊರೋನಾವೈರಸ್ ಹರಡುವ ಭೀತಿಯಿಂದ ರಾಮನಗರದ ಬಳಿ ಇರುವ ಜಾನಪದ ಲೋಕದ ಬಳಿ ಏಪ್ರಿಲ್ ೧೭ರಂದು ಅದ್ದೂರಿಯಾಗಿ ನಡೆಯಬೇಕಿದ್ದ ನಿಖಿಲ್ ಮದುವೆ ಬೆಂಗಳೂರಿಗೆ ಶಿಫ್ಟ್ ಆಗಿತ್ತು. ನಿಗದಿ ಮಾಡಿದ ದಿನದಂದೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿವಾಸದ ಬಳಿ ಸರಳವಾಗಿ ಮದುವೆ ನೆರವೇರಿಸಲು ನಿರ್ಧಾರ ಮಾಡಲಾಗಿತ್ತು.

Advertisements

ಆದರೆ ಈಗ ಮತ್ತೆ ನಿಖಿಲ್ ಮದುವೆಯನ್ನ ರಾಮನಗರಕ್ಕೆ ಶಿಫ್ಟ್ ಮಾಡಲಾಗಿದೆ. ಹೌದು, ಈಗ ಬೆಂಗಳೂರು ಕೊರೋನಾ ಹಾಟ್ ಸ್ಪಾಟ್ ಆಗಿದ್ದು ರೆಡ್ ಜೋನ್ ನಲ್ಲಿದೆ. ಈ ಕಾರಣದಿಂದಲೇ ರಾಮನಗರದ ಕೇತುಗಾನಹಳ್ಳಿ ಗ್ರಾಮದ ಬಳಿ ಇರುವ ತೋಟದ ಮನೆಯಲ್ಲಿ ನಿಖಿಲ್ ರೇವತಿ ಮದುವೆಯನ್ನ ಸರಳವಾಗಿ ಮಾಡಲು ಕುಟುಂಬದವರು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಈಗಾಗಲೇ ತೋಟದ ಮನೆಯ ಬಳಿ ಮದುವೆ ಸಿದ್ದತೆಗಳು ಆರಂಭವಾಗಿದ್ದು ಮದುವೆ ಸೆಟ್ ಹಾಕೋದು ಸೇರಿದಂತೆ ಎಲ್ಲಾ ಸಿದ್ದತಾ ಕಾರ್ಯಗಳು ಭರದಿಂದ ಸಾಗುತ್ತಿವೆ. ಇನ್ನು ಸರಳವಾಗಿ ನೆರವೇರುವ ಈ ಮದುವೆಯಲ್ಲಿ ಎರಡೂ ಕುಟುಂಬದ ಕಡೆಯವರೂ ಸೇರಿ 70 ರಿಂದ 100ಜನರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಈ ಮೊದಲೇ ನಿರ್ಧಾರ ಮಾಡಿದ ಏಪ್ರಿಲ್ 17ರ ಮಹೂರ್ತದಂದೇ ನಿಖಿಲ್ ಕುಮಾರಸ್ವಾಮಿ ರೇವತಿಯವರ ಜೊತೆ ದಾಂಪತ್ಯಜೀವನಕ್ಕೆ ಕಾಲಿಡಲಿದ್ದಾರೆ. ಇನ್ನು ಕೊರೋನಾ ಸೋಂಕು ಕಡಿಮೆಯಾದಮೇಲೆ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆ ಎಂದು ಹೇಳಲಾಗಿದೆ.