ನಿಗದಿಯಂತೆ ನಡೆಯಲಿದೆ ನಿಖಿಲ್ ಮದುವೆ..ಎಲ್ಲಿ ಯಾವಾಗ ಯಾರೆಲ್ಲಾ ಸೇರ್ತಾರೆ ಮದುವೆಗೆ ನೋಡಿ..

Cinema News
Advertisements

ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಈ ಮೊದಲೇ ನಿಗದಿ ಮಾಡಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆಗೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದವರು ನಿಗದಿ ಮಾಡಿದ್ದ ಮಹೂರ್ತದಲ್ಲೇ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

Advertisements

ನಮಗೆಲ್ಲಾ ತಿಳಿದಿರುವಂತೆ ನಿಖಿಲ್, ರೇವತಿಯವರ ಮದುವೆ ಏಪ್ರಿಲ್ ೧೭ಕ್ಕೆ ನಿಚ್ಚಯವಾಗಿದ್ದು, ರಾಮನಗರದ ಬಳಿ ಇರುವ ಜಾನಪದ ಲೋಕದ ಬಳಿ ಅದ್ದೂರಿಯಾಗಿ ಮದುವೆ ಮಾಡಲು ಎಲ್ಲಾ ತಯಾರಿಗಳು ನಡೆದಿದ್ದವು. ಆದರೆದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಇಡೀ ದೇಶದಾದ್ಯಂತ ಲಾಕ್ ಡೌನ್ ಜಾರಿ ಮಾಡಲಾಯಿತು. ಇನ್ನು ಯಾವುದೇ ಅದ್ದೂರಿ ಮದುವೆ ಸಮಾರಂಭಗಳನ್ನ ಮಾಡುವಂತಿಲ್ಲ. ಹೀಗಾಗಿ ನಿಖಿಲ್ ಮದುವೆಯನ್ನ ಮಾಡುವುದೋ, ಬೇಡವೋ, ಅಥ್ವಾ ಮುಂದಕ್ಕೆ ಹಾಕುವುದೋ, ಹೀಗೆ ಯಾವುದೇ ನಿರ್ಣಯ ತೆಗೆದುಕೊಳ್ಳಲಾರದೆ ದೇವೇಗೌಡರ ಕುಟುಂಬ ಗೊಂದಲದಲ್ಲಿತ್ತು.

ಈಗ ಭಾನುವಾರದಂದು ತಂದೆ ದೇವೇಗೌಡರೊಂದಿಗೆ ನಿಖಿಲ್ ಮಾಡುವೆ ಕುರಿತು ಚರ್ಚೆ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಂತಿಮ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಕೊರೋನಾ ಸೋಂಕು ಹರಡುವ ಭೀತಿಯ ಹಿನ್ನಲೆಯಲ್ಲಿ ಹೆಚ್ಚಿನ ಜನರು ಮದುವೆ ಸಮಾರಂಭಗಳಿಗೆ ಸೇರುವಂತಿಲ್ಲ. ಈ ಕಾರಣದಿಂದಲೇ ತಮ್ಮ ಕುಟುಂಬದವರ ಮಟ್ಟಿಗೆ ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಮೂಲಗಳ ಪ್ರಕಾರ ನಿಖಿಲ್ ರೇವತಿ ಮದುವೆಗೆ ಏಪ್ರಿಲ್ ೧೭ ಒಳ್ಳೆಯ ಮಹೂರ್ತವಾಗಿದ್ದು, ಇದನ್ನ ಬಿಟ್ಟರೆ ನಾಲ್ಕು ತಿಂಗಳವರೆಗೆ ಯಾವುದೇ ಒಳ್ಳೆಯ ಮಹೂರ್ತ ಇಲ್ಲ. ಶ್ರಾವಣದ ಮಾಸದವರೆಗೆ ಕಾಯದೆ ಬೇರೆ ದಾರಿ ಇಲ್ಲ. ಇದರಿಂದ ಮದುವೆ ಮಾಡುವುದು ತುಂಬಾ ತಡವಾಗಲಿದೆ. ಇನ್ನು ಈಗಾಗಲೇ ಮದುವೆ ನಿಚ್ಚಯವಾದ ದಿನದಿಂದೆ ಮದುವೆ ಮಾಡಲು ಎರಡೂ ಕುಟುಂಬದವರು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಮಹೂರ್ತ ಫಿಕ್ಸ್ ಮಾಡಿದಏಪ್ರಿಲ್ ೧೭ರಂದೆ ವಧು ರೇವತಿಯವರ ನಿವಾಸವಾಗಿರುವ ಜ್ಞಾನಭಾರತಿ ಬಡಾವಣೆಯಲ್ಲಿ ಮಹೂರ್ತ ನಡೆಯಲಿದೆ ಎಂದು ಹೇಳಲಾಗಿದೆ. ಇನ್ನು ಈ ಮಹೂರ್ತ ಸಮಾರಂಭದಲ್ಲಿ ಎರಡು ಕುಟುಂಬದವರು ಸೇರಿ ಕೇವಲ ೫೦ಜನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಕೊರೋನಾ ಸೋಂಕು ಕಡಿಮೆಯಾದ ಬಳಿಕ ಪರಿಸ್ಥಿತಿ ನೋಡಿಕೊಂಡು ಅದ್ದೂರಿಯಾಗಿ ಅರತಕ್ಷತೆ ಮಾಡುತ್ತಾರೆ ಎಂದು ಹೇಳಲಾಗಿದೆ.