ಸಂಕಷ್ಟದಲ್ಲಿ ಕುಮಾರಣ್ಣ..ನಿಖಿಲ್ ಮದುವೆಯ ವರದಿ ಸಲ್ಲಿಸುವಂತೆ ಕೋರ್ಟ್ ನಿಂದ ಆದೇಶ?

News

ಇತ್ತೀಚೆಗಷ್ಟೇ ರಾಮನಗರದ ಕೇತುಗನಹಳ್ಳಿನ ಕುಮಾರಸ್ವಾಮಿ ಅವರ ತೋಟದ ಮನೆ ಬಳಿ ನಿಖಿಲ್ ಹಾಗೂ ರೇವತಿ ಅವರ ಮದುವೆ ಮಾಡಲಾಗಿತ್ತು. ಲಾಕ್ ಡೌನ್ ಆಗಿದ್ದರಿಂದ ಕೇವಲ ಕುಟುಂಬದವರು, ಆಪ್ತರು ಮಾತ್ರ ಮದುವೆ ಸಮಾಂಭದಲ್ಲಿ ಪಾಲ್ಗೊಂಡಿದ್ದರು.

ಇನ್ನು ಲಾಕ್ ಡೌನ್ ಆಗಿದ್ದರಿಂದ ಕೇವಲ ೭೦ ರಿಂದ ನೂರು ಜನಕ್ಕೆ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಗಿತ್ತು. ಜೊತೆಗೆ ಲಾಕ್ ಡೌನ್ ನಿಯಮದ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿತ್ತು. ಆದರೆ ಈಗ ಲಾಕ್ ಡೌನ್ ನಿಯಮಗಳನ್ನ ಪಾಲನೆ ಮಾಡಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯಸರ್ಕಾರಕ್ಕೆ ಆದೇಶ ಮಾಡಿದೆ.

ಇನ್ನು ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಬಂದಿದ್ದು, ಇತ್ತೀಚೆಗಷ್ಟೇ ನಡೆದ ನಿಖಿಲ್ ಅವರ ಮದುವೆ ವಿಚಾರವನ್ನ ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ಮದುವೆಯಲ್ಲಿ ಪಾಲ್ಗೊಂಡಿದ್ದ ಜನರೆಷ್ಟು, ಅಲ್ಲಿ ಸೋಷಿಯಲ್ ಡಿಸ್ಟೆನ್ಸ್ ನ್ನ ಪಾಲನೆ ಮಾಡಲಾಗಿತ್ತೆ, ಇದರೆಲ್ಲದರ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರಿ ವಕೀಲರಿಗೆ ಆದೇಶ ಮಾಡಿದ್ದಾರೆ.