8ವರ್ಷದಿಂದ ಪ್ರೀತಿಸುತ್ತಿದ್ದ ಗೆಳೆಯನ ಜೊತೆ ನಿಚ್ಚಿತಾರ್ಥ ಮಾಡಿಕೊಂಡ ನಿಂಗಿ..ಹುಡುಗ ಯಾರು ಗೊತ್ತಾ?ಈ ಫೋಟೋಸ್ ನೋಡಿ..

Entertainment

ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವಿಭಿನ್ನ ಕಥಾ ಹಂದರ ಹೊಂದಿರುವ ಕಮಲಿ ಧಾರವಾಹಿ ವೀಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಕಮಲಿ ಪಾತ್ರದಾರಿಯ ಸ್ನೇಹಿತೆಯಾಗಿ ನಿಂಗಿ ಪಾತ್ರದಲ್ಲಿ ಮಿಂಚಿರುವ ನಟಿ ಅಂಕಿತಾ ಕೂಡ ತನ್ನ ಅಭಿನಯದಿಂದ ಮೆಚ್ಚುಗೆಗಳಿಸಿದ್ದಾರೆ. ಇನ್ನು ಕಮಲಿ ಸೀರಿಯಲ್ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿರುವ ನಟಿ ಅಂಕಿತಾ ತಾನು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಅಂಕಿತಾ ತನ್ನ ೨೮ನೇ ವರ್ಷದ ಹುಟ್ಟುಹಬ್ಬದಂದೇ ನಿಚ್ಚಿತಾರ್ಥ ಮಾಡಿಕೊಂಡಿರುವುದು ವಿಶೇಷವಾಗಿದೆ. ಇನ್ನು ಅಂಕಿತಾ ಪ್ರೀತಿಸುತ್ತಿರುವ ಹುಡುಗನ ಹೆಸರು ಸುಹಾಸ್ ಎಂದು.

ಇನ್ನು ನಿಂಗಿ ಅಲಿಯಾಸ್ ಅಂಕಿತಾ ಹೇಳುವ ಹಾಗೆ ಸುಹಾಸ್ ಎಂಟು ವರ್ಷಗಳ ಹಿಂದೆ ನನಗೆ ಪ್ರಪೋಸ್ ಮಾಡಿದ್ದು ನಾವಿಬ್ಬರು ಅಂದಿನಿಂದಲೂ ಪ್ರೀತಿಸುತ್ತಿದ್ದೆವು. ನನ್ನ ಜೀವನದ ಬೆಸ್ಟ್ ಪಾರ್ಟ್ನರ್ ಮತ್ತು ಬೆಸ್ಟ್ ಫ್ರೆಂಡ್ ಸುಹಾಸ್ ಎಂದು ಅಂಕಿತಾ ಹೇಳಿದ್ದಾರೆ. ಇನ್ನು ಹೊಸ ಜೀವನ ನಡೆಸಲು ಮುಂದಾಗಿರುವ ನಮ್ಮ ಪ್ರೀತಿಯನ್ನ ಒಪ್ಪಿಕೊಂಡ ನಮ್ಮ ತಂದೆ ತಾಯಿಗೆ ನನ್ನ ಧನ್ಯವಾದಗಳು ಎಂದು ಅಂಕಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇನ್ನು ಕಮಲಿ ಧಾರಾವಾಹಿಯಲ್ಲಿ ನಿಂಗಿ ಪಾತ್ರದಲ್ಲಿ ಪೆದ್ದು ಪೆದ್ದಾಗಿ ಅಭಿನಯಿಸಿರುವ ಅಂಕಿತಾ ಓದಿರುವುದು ಇಂಜಿನಿಯರಿಂಗ್ ಪದವಿ. ಹುಟ್ಟಿದ್ದು ಬೆಂಗಳೂರು ಆದ್ರೂ, ತಮಿಳುನಾಡಿನ ಅಯ್ಯರ್ ಕುಟುಂಬಕ್ಕೆ ಸೇರಿದ ಅಂಕಿತಾ ಇಂಜಿನಿಯರಿಂಗ್ ಮುಗಿದ ಬಳಿಕ ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡುತ್ತಾರೆ.

ಇನ್ನು ತನ್ನ ಚಿಕ್ಕವಯಸ್ಸಿನಿಂದಲೇ ಅಭಿನಯದಲ್ಲಿ ಆಸಕ್ತಿ ಹೊಂದಿದ್ದ ನಿಂಗಿ ತನ್ನ ಐಟಿ ಕೆಲಸಕ್ಕೆ ಗುಡ್ ಬೈ ಹೇಳಿ ತನ್ನ ಅಭಿನಯವನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುತ್ತಾಳೆ. ಇನ್ನು ತಮಿಳು ಕಿರುತೆರೆಯಿಂದ ಅಂಕಿತಾಗೆ ಅವಕಾಶಗಳು ಅರಸಿ ಬಂದರೂ, ಕನ್ನಡದ ಕಮಲಿ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಅದೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿಯೂ ಕೂಡ ಅಂಕಿತಾ ಸ್ಫರ್ಧಿಯಾಗಿ ಭಾಗವಹಿಸಿದ್ದರು. ಇನ್ನು ಈಗ ತನ್ನ ಬಹುದಿನದ ಗೆಳೆಯ ಸುಹಾಸ್ ಜೊತೆ ನಿಚ್ಚಿತಾರ್ಥ ಮಾಡಿಕೊಂಡಿದ್ದು ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ.