ನಿವೇದಿತಾ ಜೈನ್ ನಿಜಕ್ಕೂ ಮೇಲಿಂದ ಕಾಲು ಜಾರಿ ಬಿದ್ದಳಾ. ನಿಜಕ್ಕೂ ಏನಾಗಿತ್ತು ಆ ಸ್ನಿಗ್ಧ ಸುಂದರಿಗೆ

Uncategorized
Advertisements

ಕನ್ನಡ ಚಿತ್ರರಂಗ ಕಂಡ ಸ್ನಿಗ್ದ ಸುಂದರಿ, ಮುದ್ದು ಮುಖದ ನಟಿ ನಿವೇದಿತಾ ಜೈನ್ ನೆನಪಿದ್ದಾರಾ ಸ್ನೇಹಿತರೆ. ಸ್ಯಾಂಡಲ್ ವುಡ್ ನಲ್ಲಿ ಅರಳುವ ಮುನ್ನವೇ ಬಾಡಿಹೋದ ಪ್ರತಿಭಾನ್ವಿತ ನಟಿ. ಇನ್ನು ನಿಜಕ್ಕೂ ಈ ನಟಿ ಮಹಡಿಯಿಂದ ಕಾಲು ಜಾರಿ ಬಿದ್ದು, ಪ್ರಾಣ ತೆತ್ತಾಳಾ.. ಸ್ನೇಹಿತರೆ, ಆಗ ೧೯೯೮ ಮೇ ತಿಂಗಳು. ಆಗಿನ ಬೆಂಗಳೂರು ಈಗಿದ್ದಂತೆ ಟ್ರಾಫಿಕ್ ಆಗಲಿ, ಜನರ ಓಡಾಟ ಆಗಲಿ ಅಷ್ಟಿರಲಿಲ. ಅನೇಕಾ ಏರಿಯಾಗಳು ಜನರಿಲ್ಲದೆ ಸ್ಥಬ್ದವಾಗಿದ್ದವು. ಅದೇ ರೀತಿ ಆಗಿನ ಬೆಂಗಳೂರು ಉತ್ತರ ಭಾಗದಲ್ಲಿ ಇದ್ದ ರಾಜ ರಾಜೇಶ್ವರಿ ನಗರ ಕೂಡ ಒಂದು ನಿರ್ಜನ ಪ್ರದೇಶವಾಗಿತ್ತು.

ಅಲ್ಲೊಂದು ಇಲ್ಲೊಂದು ಮನೆಗಳು ಮಾತ್ರ ಅಲ್ಲಿದ್ದವು. ಇನ್ನು ಹೀಗಿರುವಾಗ ಅದೇ ವರ್ಷ ಮೇ ತಿಂಗಳಿನ ೧೭ನೇ ತಾರೀಖಿನಂದು ಅದೇ ರಾಜರಾಜೇಶ್ವರಿ ನಗರದಲ್ಲಿನ ಭವ್ಯ ಬಂಗಲೆಯ ಮೇಲಿಂದ ಸುಂದರವಾದ ಯುವತಿಯ ದೇಹ ದೊಪ್ಪಂತ ಕೆಳಕ್ಕೆ ಬಿಟ್ಟು. ತಲೆ ಕೈಗಳಿಗೆ ಗಂಭೀರವಾದ ಗಾಯಗಳಾಗಿದ್ದು, ತಕ್ಷಣವೇ ಆ ದೇಹವನ್ನ ಮಲ್ಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಂದ ಮುಂದಿನ ೨೪ ದಿನಗಳವರೆಗೆ ಆ ಯುವತಿಯ ದೇಹ ಕೋಮಾ ಸ್ಥಿತಿಯಲ್ಲಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ ೧೦ ರಂದು ವಿಧಿವಶರಾದ್ರು. ಹೀಗೆ ಕಲಾ ಮರಣಕ್ಕೆ ತುತ್ತಾದ ಯುವತಿ ಬೇರೆ ಯಾರೂ ಅಲ್ಲ, ಅವರೇ ಸ್ನಿಗ್ದ ಸುಂದರ ಯುವತಿ ನಿವೇದಿತಾ ಜೈನ್. ಆಕೆ ತೀರಿಕೊಂಡಾಗ ಕೇವಲ ೧೮ ವರ್ಷ ವಯಸ್ಸಾಗಿತ್ತು.

ಇನ್ನು ನಿವೇದಿತಾ ಜೈನ್, ಕ್ಯಾಪ್ಟನ್ ರಾಜೇಂದ್ರ ಜೈನ್ ಮತ್ತು ಗೌರಿಪ್ರಿಯ ದಂಪತಿಗಳ ಪುತ್ರಿಯಾಗಿ 1979ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ರು. ಕೇವಲ ೧೫ನೇ ವಯಸ್ಸಿಗೆ ಮಿಸ್ ಬೆಂಗಳೂರು ಕಿರೀಟ ಮುಡಿಗೇರಿಸಿಕೊಂಡವರು. ಇನ್ನು ಶಿವರಾಜ್ ಕುಮಾರ್ ಅಭಿನಯದ ಶಿವಸೈನ್ಯ ಚಿತ್ರದ ಮೂಲಕ 1996ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಇನ್ನು ಆಗಿನ ಅಂಬರೀಷ್ ಸೇರಿದಂತೆ ಹಲವಾರು ಸ್ಟಾರ್ ನಟರೊಂದಿಗೆ ಅಭಿನಯಿಸಿದ್ದ ನಿವೇದಿತಾ ಜೈನ್ ಬಹುಬೇಗ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾದ್ರು. ಇನ್ನು ತನ್ನ ಚಿಕ್ಕವಯಸ್ಸಿಗೆ ಸೌಂದರ್ಯ ಪ್ರೇಮರವರಂತ ದೊಡ್ಡ ನಟಿಯರೊಂದಿಗೆ ಗುರುತಿಸಿಕೊಂಡಿದ್ದ ನಿವೇದಿತಾ ಅವರ ಹೆಸರು ಅಂದಿನ ಪತ್ರಿಕೆಗಳ ಹೆಡ್ ಲೈನ್ ನಲ್ಲಿ ರಾರಾಜಿಸಿತ್ತು. ಆದರೆ ನಟಿಯ ಧಿಡೀರ್ ಸಾವು ಇಡೀ ಚಿತ್ರರಂಗವನ್ನೇ ನಡುಗುವಂತೆ ಮಾಡಿತ್ತು. ಅಸಂಖ್ಯಾತ ಅಭಿಮಾನಿಗಳು ಆ ದಿನ ನಿವೇದಿತಾ ಅವರನ್ನ ನೋಡುವುದಕ್ಕೆ ಅಂದು ಮನೆ ಮುಂದೆ, ಮಲ್ಯ ಆಸ್ಪತ್ರೆಯ ಮುಂದೆ ಬಂದು ಸೇರಿದ್ದರು. ಹಾಗಾದ್ರೆ ನಿವೇದಿತಾ ಸಾವಿಗೀಡಾಗಿದ್ದು ಹೇಗೆ, ಅಂದು ಅಲ್ಲಿ ನಡೆದಿದ್ದರೂ ಏನು ಎಂಬುದನ್ನ ತಿಳಿಯಲು ಮೇಲೆ ಹಾಕಿರುವ ವಿಡಿಯೋ ನೋಡಿ