ಸೋಪಿನ ನೀರಿನಲ್ಲಿ ನೋಟುಗಳನ್ನ ತೊಳೆದ ರೈತ..

News
Advertisements

ಲಾಕ್ ಡೌನ್ ಮಾಡಲಾಳಗಿದ್ದರೂ, ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಹೆಚ್ಚಾಗುತ್ತಿದ್ದು, ಈಗ ಸಕ್ಕರೆ ನಾಡಿನಲ್ಲೂ ಸಹ ಕೊರೋನಾ ಸೋಂಕು ಕಂಡುಬಂದಿದ್ದು, ಮಂಡ್ಯದ ಜನರಲ್ಲಿ ಭಯದವಾತಾವರಣ ಸೃಷ್ಟಿಯಾಗಿದೆ.

Advertisements

ಇನ್ನು ಮಂಡ್ಯದಲ್ಲೂ ಕೊರೋನಾ ಸೋಂಕಿಗೆ ಕಾರಣವಾಗಿರೋದು ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಸಭೆಗೆ ಹೋಗಿದ್ದ ಏಳು ಜನರಿಂದ. ಇನ್ನು ಈ ಭಯದಿಂದಲೇ ನೋಟುಗಳನ್ನ ನೀರಿನಿಂದ ತೊಳೆದಿರುವ ರೈತನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ಇದು ಮಂಡ್ಯಾ ಜಿಲ್ಲೆಯ ಮಾರಚಾಕನಹಳ್ಳಿ ಗ್ರಾಮದಲ್ಲಿ ಕಂಡುಬಂದಿದೆ. ರೇಷ್ಮೆ ಬೆಳೆದ ರೈತನೊಬ್ಬ ಅದನ್ನ ಮುಸ್ಲಿಂ ವ್ಯಾಪಾರಿಯೊಬ್ಬನಿಗೆ ಮಾರಾಟ ಮಾಡಿದ್ದಾನೆ. ಇನ್ನು ಆ ರೈತ ನೋಟುಗಳಿಂದ ಕೊರೋನಾ ಹರಡುತ್ತೆ ಎಂಬ ಭಯದಿಂದ ನೋಟುಗಳನ್ನ ನೀರಿನಲ್ಲಿ ತೊಳೆದಿದ್ದಾನೆ.

ಇನ್ನು ನೋಟುಗಳನ್ನ ತೊಳೆಯಲು ಪ್ರಮುಖ ಕಾರಣ ಮುಸ್ಲಿಂ ವ್ಯಾಪಾರಿ ಹಣ ಕೊಟ್ಟನೆಂದು. ರೈತ 2000,500,100ರೂ ಮುಖಬೆಲೆಯ ನೋಟುಗಳನ್ನ ನೀರಿನಲ್ಲಿತೊಳೆಯುತ್ತಿದ್ದು ಅದನ್ನ ಪಕ್ಕದಲ್ಲಿ ನಿಂತ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು ಅದು ಸಖತ್ ವೈರಲ್ ಆಗಿದೆ.