ಹಿಟ್ ಸಿನಿಮಾದಲ್ಲಿ ನಟಿಸಿದ್ದ ಈ ನಟನಿಗೆ ಕೊನೆಗೆ ಎಂತಾ ಗತಿ ಬಂತು ಗೊತ್ತಾ ? ಯಾವ ನಟನಿಗೂ ಹೀಗೆ ಆಗಬಾರದು..

Cinema

ಸ್ನೇಹಿತರೇ, ಸಿನಿಮಾ ಲೋಕ ಎಂದರೆ ಅದೊಂತರ ಮಾಯಾ ಲೋಕ ಇದ್ದ ಹಾಗೆ. ಒಂದು ಬಾರಿ ಈ ಮಾಯಾಲೋಕದ ಕಡೆ ಆಕರ್ಷಿತರಾದ್ರೆ ಮುಗಿತು..ಅದರ ಸೆಳೆತ ಬಿಡೋದಿಲ್ಲ. ಅದರಲ್ಲೂ ಸಿನಿಮಾ ಎಂಬ ಮಾಯಾಲೋಕದ ಕಡೆ ಹೆಚ್ಚಾಗಿ ಆಕರ್ಷಿತರಾಗುತ್ತಿರುವ ಯುವಕರು ಬಣ್ಣದ ಲೋಕದಲ್ಲಿ ಸ್ಟಾರ್ ನಟನಾಗಿ ಮಿಂಚಬೇಕೆಂದು ತಮ್ಮ ಓದನ್ನ ಅರ್ಧಕ್ಕೆ ನಿಲ್ಲಿಸಿ ಬರುವವರು ಬಳಿಕ ಅಲ್ಲಿಯೂ ಕೂಡ ಸರಿಯಾದ ಅವಕಾಶಗಳು ಸಿಗದೇ ತಮ್ಮ ಜೀವನವನನ್ನೇ ನಾಶ ಮಾಡಿಕೊಳ್ಳುವವರು ಅನೇಕರಿದ್ದಾರೆ. ಇನ್ನು ಈ ನಟನ ಪರಿಸ್ಥಿತಿ ಕೂಡ ಅದೇ ಆಗಿದೆ. ಕನ್ನಡದಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಗೋಲ್ಡನ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ತಮಿಳಿನ ಕಾದಲ್ ಸಿನಿಮಾದ ರಿಮೇಕ್. ತಮಿಳಿನಲ್ಲಿ ಈ ಚಿತ್ರ ದೊಡ್ಡ ಸಂಚಲವನ್ನೇ ಸೃಷ್ಟಿ ಮಾಡಿತ್ತು.

ಇನ್ನು ಸಿನಿಮಾ ಲೋಕದಲ್ಲಿ ಮಿಂಚಬೇಕೆಂದು ಚೆನ್ನೈಗೆ ಬಂದ ಪಲ್ಲು ಬಾಬು ಹುಡುಗನ ಪಾತ್ರದಲ್ಲಿ ನಟಿಸಿದ್ದರು. ಇನ್ನು ಈತನ ನಟನೆ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ಕೊಟ್ಟಿತ್ತು. ಈ ಚಿತ್ರದ ಮೂಲಕ ಸಾಕಷ್ಟು ಹೆಸರು ಮಾಡಿದ್ದ ಪಲ್ಲು ಬಾಬು ಇನ್ನು ಮುಂದೆ ಸಿನಿಮಾ ರಂಗದಲ್ಲಿ ಒಳ್ಳೆಯ ಅವಕಾಶಗಳು ಸಿಗಲಿವೆ ಎಂದು ಭಾವಿಸಿದ್ದರು. ಆದರೆ ಆಗಿದ್ದೆ ಬೇರೆ..ಹೌದು, ಕಾದಲ್ ಸಿನಿಮಾದ ಬಳಿಕ ಪಲ್ಲು ಬಾಬು ಅವರಿಗೆ ಅಂದುಕೊಂಡಂತೆ ಅವಕಾಶಗಳು ಸಿಗದಿದ್ದರೂ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಲು ಅವಕಾಶಗಳು ಒಲಿದು ಬಂದರೂ, ಅಷ್ಟಾಗಿ ಕೈ ಹಿಡಿಯಲಿಲ್ಲ. ಬರಬರುತ್ತಾ ಚಿಕ್ಕ ಪುಟ್ಟ ಅವಕಾಶಗಳೇ ಇಲ್ಲವಾದವು. ಹೀಗೆ ಬಡತನದಲ್ಲೇ ಬೆಂದೆದ್ದ ಪಲ್ಲು ಬಾಬು ಅವರ ಹೆತ್ತವರು ಅನಾರೋಗ್ಯದಿಂದ ಸಾ’ವಿಗೀಡಾದ್ರು.

ಇನ್ನು ತಾನು ಓದಬೇಕಾಗಿದ್ದ ವಯಸ್ಸಿನಲ್ಲಿ ಸಿನಿಮಾ ಕಡೆ ಆಕರ್ಷಣೆ ಬೆಳೆಸಿಕೊಂಡಿದ್ದ ಕಾರಣ, ಪಲ್ಲು ಬಾಬು ಅವರಿಗೆ ಎಲ್ಲಿಯೂ ಕೆಲಸ ಕೂಡ ಸಿಗಲಿಲ್ಲ. ಒಂದು ಕಡೆ ಸಿನಿಮಾಗಳಲ್ಲಿ ಅವಕಾಶಗಳು ಸಿಗಲಿಲ್ಲ. ಮತ್ತೊಂದು ಕಡೆ ತಂದೆ ತಾಯಿ ಇಲ್ಲವಾದರು. ಮತ್ತೊಂದು ಕಡೆ ಸರಿಯಾದ ವಿಧ್ಯೆ ಇಲ್ಲದ ಕಾರಣ ಎಲ್ಲಿಯೂ ಕೆಲಸ ಕೂಡ ಸಿಗಲಿಲ್ಲ. ಇವೆಲ್ಲದರಿಂದ ಮಾನಸಿಕವಾಗಿ ಜ’ರ್ಜರಿತರಾದ ಪಲ್ಲು ಬಾಬು ಹೊಟ್ಟೆ ಪಾಡಿಗಾಗಿ ದೇವಸ್ಥಾನದ ಬಳಿ ಭಿಕ್ಷೆ ಬೇಡಲು ಕುಳಿತರು. ಬಳಿಕ ಇದೆ ಖಾಯಂ ಕೆಲಸವಾಗಿ ಬಿಟ್ಟಿತ್ತು ಆ ನಟನಿಗೆ. ಬಣ್ಣದಲೋಕದಲ್ಲಿ ನಟನಾಗಿ ಮಿಂಚಬೇಕೆಂದು ಮಹಾನಗರಕ್ಕೆ ಬಂದ ಈ ಪಲ್ಲು ಬಾಬುವಿನ ಕತೆ ಏನಾಯ್ತು ನೋಡಿ..ಕೊನೆಗೆ ಪಲ್ಲು ಬಾಬುವಿನ ಸ್ಥಿತಿ ನೋಡಿ, ಹಲವಾರು ಕಲಾವಿದರು ತಮ್ಮ ಕೈಲಾದ ಸಹಾಯ ಮಾಡಿದ್ದರು. ಆದರೆ ಪಲ್ಲು ಬಾಬು ಕೊನೆಗೆ ಚೆನ್ನೈ ಮಹಾನಗರದ ಆಟೋವೊಂದರಲ್ಲಿ ಶ,ವವಾಗಿ ದೊರೆತಿದ್ದು ದು,ರಂತವೇ ಸರಿ..