ಮನುಷ್ಯನಂತೆ ಮನೆ ಒಳಗೆ ಹೋಗಲು ನವಿಲಿನಿಂದ ಪ್ರಯತ್ನ!ಇಂಟರ್ನೆಟ್ ನಲ್ಲಿ ವೈರಲ್ ಆಯ್ತು ವಿಡಿಯೋ

Kannada News

ನಮ್ಮ ರಾಷ್ಟ್ರೀಯ ಪಕ್ಷಿಯಾಗಿರುವ ನವಿಲಿನ ವಿಡಿಯೋವೊಂದು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ದೇಶದಲ್ಲಿ ಲಾಕ್ ಡೌನ್ ಆದ ಬಳಿಕ ನವಿಲು ಮುಂಬೈನ ಬೀದಿಗಳಲ್ಲಿ ಕಾಣಿಸಿಕೊಂಡಿತ್ತು, ಬಳಿಕಯಾವುದೊ ಹಳ್ಳಿಯಲ್ಲಿ ಸಾಮಾಜಿಕ ಅಂತರ ಪಾಲಿಸುವುದು ಹೇಗೆ ಎಂಬಂತೆ ಈ ನವಿಲು ಕಾಣಿಸಿಕೊಂಡಿತ್ತು.

ಈಗ ನವಿಲಿನ ವಿಡಿಯೋವೊಂದುಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಇನ್ನು ವಿಡಿಯೋದಲ್ಲಿರುವಂತೆ ನವಿಲು ಮನೆಯೊಂದರ ಕಿಟಿಕಿ ತೆಗೆಯಲು ಪ್ರಯತ್ನ ಮಾಡುತ್ತಿದೆ. ಇನ್ನು ಈ ವಿಡಿಯೋ ನೋಡಿದಾಗ ಮನಸ್ಸಿಗೆ ಅನ್ನಿಸೋದೇನು ಅಂದ್ರೆ,

ಇನ್ನೋಸೆಂಟ್ ಮಗುವೊಂದು ತನ್ನನ್ನ ಒಳಗೆ ಬಿಡು ಅನ್ನುವಂತೆ ತಾಯಿಯ ಬಳಿ ವ್ವಿನಂತಿಸುತ್ತಿರುವ ಹಾಗೆ ಅನ್ನಿಸುತ್ತದೆ ಎಂದು IFS ಅಧಿಕಾರಿಯಾಗಿರುವ ಸಂದೀಪ್ ತ್ರಿಪಾಠಿ ಎಂಬುವವರು ವಿಡಿಯೋ ಸಮೇತ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.