ಕೇವಲ 12 ರುಪಾಯಿಗೆ 1ಲೀಟರ್ ಪೆಟ್ರೋಲ್ ! ಖರೀದಿಗಾಗಿ ಮುಗಿಬಿದ್ದ ವಾಹನ ಸವಾರರು

News
Advertisements

ಕೊರೋನಾ ಲಾಕ್ ಡೌನ್ ನಿಂದ ಈಗಾಗಲೇ ಜನ ತತ್ತರಿಸಿರುವಾಗ ದಿನದಿಂದ ದಿನಕ್ಕೆ ಪೆಟ್ರೋಲ್ ಡೀಸೆಲ್ ಧರ ಹೆಚ್ಚಾಗುತ್ತಿರುವುದು ಶ್ರೀ ಸಾಮಾನ್ಯ ಜನರ ಜೀವನ ಸಂಕಷ್ಟಕ್ಕೀಡಾಗಿದ್ದು ಬೆಂಕಿಗೆ ತುಪ್ಪ ಸುರಿದಂತಾಗಿದೆ. ತುತ್ತು ಊಟಕ್ಕೂ ಕಷ್ಟ ಪಡುತ್ತಿರುವ ಇಂತಹ ಸಮಯದಲ್ಲಿ ಹೆಚ್ಚಾಗುತ್ತಿರುವ ತೈಲ ಬೆಲೆ ಏರಿಕೆ ಶ್ರೀಸಾಮಾನ್ಯ ಜನರ ಜೀವನ ಪಾತಾಳಕ್ಕೆ ಕುಸಿದಿದೆ.

ಇದರ ನಡುವೆಯೇ ಕೇವಲ 12ರುಪಾಯಿಗೆ ಒಂದು ಲೀಟರ್ ಪೆಟ್ರೋಲ್ ನ್ನ ಕಾನ್ಪುರದ ಕಲ್ಯಾಣಪುರದ ಪೆಟ್ರೋಲ್ ಬಂಕ್ ಒಂದರಲ್ಲಿ ಮಾರಾಟ ಮಾಡಲಾಗಿದೆ. ಇನ್ನು ಕಡಿಮೆಗೆ ಸಿಕ್ಕ ಪೆಟ್ರಿಲ್ ಖರೀದಿಸಲು ನೂರಾರು ಸಂಖ್ಯೆಯಲ್ಲಿ ಜನ ಮುಗಿಬಿದ್ದಿದ್ದಾರೆ. ಇನ್ನು ಇದಕ್ಕೆ ಕಾರಣವಾಗಿದ್ದು ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಕಾರ್ಯಕರ್ತರು. ಹೆಚ್ಚಾಗುತ್ತಿರುವ ತೈಲ ಬೆಲೆ ಏರಿಕೆಯನ್ನ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇವಲ ೧೨ ರುಪಾಯಿಗೆ ಲೀಟರ್ ಪೆಟ್ರೋಲ್ ಮಾರುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಕೇವಲ ಒಂದು ಘಂಟೆಗೆ ಮಾತ್ರ ಇದು ಸೀಮಿತವಾಗಿದ್ದು ಖರೀದಿಸುವ ಸಲುವಾಗಿ ವಾಹನ ಸವಾರರು ಮುಗಿಬಿದ್ದಿದ್ದರು. ಇದೆ ವೇಳೆ ಸಮಾಜಿಕ ಅಂತರವನ್ನು ಕಾಪಾಡಿಕೊಂಡಿಲ್ಲ ಹಾಗೂ ಮಾಸ್ಕ್ ಕೂಡ ಧರಿಸಿಲ್ಲ ಎಂದು ಪ್ರತಿಭಟನೆ ಮಡಿದ ಕಾರ್ಯಕರ್ತರ ಮೇಲೆ ಆರಕ್ಷಕರು ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.