ರೈತರಿಗೆ ಗುಡ್ ನ್ಯೂಸ್-ನಿಮ್ಮ ಖಾತೆಗೆ 2 ಸಾವಿರ ಜಮಾ ಆಯ್ತಾ..ಇಲ್ಲ ಅಂದ್ರೆ ಈ ನಂಬರ್ ಗಳಿಗೆ ಕರೆ ಮಾಡಿ..

Kannada News
Advertisements

ನಾಮಸ್ತೇ ಸ್ನೇಹಿತರೇ, ದೇಶದ ಕೋಟ್ಯಂತರ ರೈತರಿಗೆ ಅನುಕೂಲವಾಗಲೆಂದು ಪ್ರಧಾನಿ ನರೇಂದ್ರ ಮೋದಿಯವರು ‘ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯನ್ನ ಆರಂಭಿಸಿದ್ದು, ಈಗಾಗಲೇ ಈ ಯೋಜನೆ ಚಾಲ್ತಿಯಲ್ಲಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ ನೊಂದಾಯಿತ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಕೇಂದ್ರಸರ್ಕಾರ ಆರು ಸಾವಿರ ರುಗಳನ್ನ ಜಮಾ ಮಾಡುತ್ತದೆ.

[widget id=”custom_html-4″]

2 ಸಾವಿರದಂತೆ ವರ್ಷದ ಮೂರು ಕಂತುಗಳಲ್ಲಿ ಈ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಅದರಂತೆ ಈಗ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಏಳನೇ ಕಂತಿನ ಹಣ ನೋಂದಾಯಿತ ರೈತರ ಬ್ಯಾಂಕ್ ಖಾತೆಗಳಿಗೆ ಜಮಾವಣೆ ಆಗುತ್ತಿದೆ. ಇನ್ನು ಆಧಾರ್ ಹಾಗೂ ಬ್ಯಾಂಕ್ ಖಾತೆಯ ಮಾಹಿತಿಗಳನ್ನ ಸರಿಯಾಗಿ ನೊಂದಾಯಿಸಲ್ಪಟ್ಟ ಖಾತೆಗಳಿಗೆ ಹಣ ಜಮಾವಣೆ ಆಗುತ್ತಿದೆ.

[widget id=”custom_html-4″]

ಇನ್ನು ನಿಮ್ಮ ಖಾತೆಗೆ ಹಣ ಬಂದಿಲ್ಲವಾದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ವೆಬ್ಸೈಟ್ https://pmkisan.gov.in ನಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನ ಬೆನಿಫಿಶರೀ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆ ಅಥ್ವಾ ಬ್ಯಾಂಕ್ ಅಕೌಂಟ್ ನಂಬರ್ ಅಥ್ವಾ ನಿಮ್ಮ ಮೊಬೈಲ್ ನಂಬರ್ ನ್ನ ಹಾಕಿ ಚೆಕ್ ಮಾಡಿಕೊಳ್ಳಬಹುದಾಗಿದೆ. ಇನ್ನು ಇದರ ಬಗ್ಗೆ ಮತ್ತಷ್ಟು ಹೆಚ್ಚಿನ ಮಾಹಿತಿಗಾಗಿ ನೀವು ಈ ಕೆಳಗೆ ಕೊಟ್ಟಿರುವ ಸಹಾಯವಾಣಿ ಮೊಬೈಲ್ ನಂಬರ್ ಗೆ ಕರೆ ಮಾಡಿ ನಿಮ್ಮ ದೂರುಗಳನ್ನ ದಾಖಲು ಮಾಡಬಹುದಾಗಿದೆ.

[widget id=”custom_html-4″]

ಕಿಸಾನ್ ಸಮ್ಮಾನ್ ಯೋಜನೆಯ ಸಹಾಯವಾಣಿ ಸಂಖ್ಯೆ 0120-6025109, ಉಚಿತ ಸಹಾಯವಾಣಿ ಸಂಖ್ಯೆ 18001155266, ಪ್ರಧಾನ ಮಂತ್ರಿ ಕಿಸಾನ್ ಸಹಾಯವಾಣಿ 011-23381092 ಮತ್ತು 23382401 ಈ ಸಹಾಯವಾಣಿ ಸಂಖೆಯಗಳಿಗೆ ಕರೆ ಮಾಡಿ ನಿಮ್ಮ ಖಾತೆಗೆ ಹಣ ಜಮಾವಣೆ ಕುರಿತಂತೆ ದೂರುಗಳನ್ನ ದಾಖಲಿಸಬಹುದಾಗಿದೆ.