ಏನು ಮೋದಿ ಹುಚ್ಚರಾ.?ಚಪ್ಪಾಳೆ ತಟ್ಟು ಅಂತಾರೆ..ದೀಪ ಹಚ್ಚಿ ಅಂತಾರೆ..ಏನಾಗಿದೆ ಮೋದಿಗೆ ಅಂತಾ ಅರ್ಥ ಆಗ್ತಿಲ್ಲಾ ಅಲ್ವಾ.?

News
Advertisements

ನಿಜಕ್ಕೂ ಮೋದಿಯವರಿಗೆ ಹುಚ್ಚು ಹಿಡಿದಿದೆ…ದೇಶ ಅನ್ನೋ ಹುಚ್ಚು ಹಿಡಿದಿದೆ..ತನ್ನ130 ಕೋಟಿ ಜನಗಳನ್ನ ಹೇಗೆ ರಕ್ಷಿಸಿಕೊಳ್ಳಬೇಕು ಅನ್ನುವ ಭಯಂಕರವಾದ ಹುಚ್ಚು ಹಿಡಿದಿದೆ.

Advertisements

ಚಪ್ಪಾಳೆ..ತಟ್ಟಿದ್ರೆ ಕೊರೊನಾ ಹೋಗುತ್ತಾ? ಅದು ಮೋದಿಗೆ ಗೊತ್ತಿಲ್ವಾ? ಪಾಕಿಸ್ತಾನದಲ್ ಹೋಗಿ ಹೆಂಗೆ ನುಗ್ಗಿ ನುಗ್ಗಿ ಹೊಡೆದು ಬರಬೇಕು ಅಂತಾ ಗೊತ್ತಿರುವ ಮೋದಿಗೆ ಇದು ಗೊತ್ತಿರೋಲ್ವಾ? ಬದಲಾಗಿ ಅವಿರಥವಾಗಿ ಕರ್ಮ ಮಾಡುತ್ತಿರುವ, ಸೇವೆ ಸಲ್ಲಿಸುತ್ತಿರುವ ಕರ್ಮಚಾರಿಗಳಿಗೆ, ಪೊಲೀಸರಿಗೆ, ವೈಧ್ಯರ ಸೇವೆಯನ್ನ ಶ್ಲಾಘಿಸಿ ಚಪ್ಪಾಳೆ ತಟ್ಟಿ ಅಂದಿದ್ದೆ ವಿನಃ…ಕೊರೊನಾಗೆ ಮೆಡಿಸಿನ್ ಸಿಕ್ತು ಅಂತಾಗಲಿ ಅಥವಾ ಚಪ್ಪಾಳೆಗಳಿಂದ ಕೊರೊನಾ ಸಾಯುತ್ತೆ ಅಂತಾ ಹೇಳಲಿಲ್ಲ..ಕನಿಷ್ಠ ಪಕ್ಷ, ಜೀವ ಕಾಪಾಡುವ ಜನಗಳಿಗೂ ಕೃತಜ್ಞತೆ ಸಲ್ಲಿಸಿಲ್ಲಾ ಅಂದರೆ ಹೇಗೆ?ಅದುವೇ ಚಪ್ಪಾಳೆ ಮೂಲಕ ಮಾಡಿದ್ದು.

ಇನ್ನು ಲಾಕ್ ಡೌನ್ ಮಾಡಲಿಕ್ಕೂ ಅರ್ಥವಿದೆ. ಈ ರೋಗಕ್ಕೆ ಔಷಧ ಇದ್ದಿದ್ರೆ ಅವ್ರು ಲಾಕ್ ಯಾಕೆ ಮಾಡ್ತಿದ್ರು ಹೇಳಿ ನೋಡೋಣ? ಅದಕ್ಕೆ ಇನ್ನೂ ಔಷಧ ಸಿಕ್ಕಿಲ್ಲ ಅನ್ನುವ ದೊಡ್ಡ ಫೀಡ್ ಬ್ಯಾಕ್ ಅಂತೂ ಇದ್ದೆ ಇದೇ.. ಅದಕ್ಕಾಗಿ ಅಲ್ಲಿಯವರೆಗೂ ತನ್ನವರನ್ನ ತಾನು ಕಾಪಾಡಿಕೊಳ್ಳುವ ಒಂದು ಯೋಜನೆ. ಇನ್ನು 21 ದಿನಕ್ಕೆ ಔಷಧ ಸಿಕ್ಕುಬಿಡುತ್ತಾ ಅಂತಾ ನೀವು ಕೇಳಬಹುದು…ಸಿಗೊಲ್ಲ. ಬದಲಾಗಿ..21ದಿನಗಳ ಕಾಲ ಮನೆಯಲ್ಲೇ ಇದ್ದರೆ ವೈರಸ್ ಹರಡುವುದನ್ನ ತಡೆಗಟ್ಟಬಹುದಾಗಿದೆ. ಇದೊಂದು ಚೈನ್ ಲಿಂಕ್ ಆಗಿದ್ದು, ಆ ಚೈನ್ ಅನ್ನ ತುಂಡರಿಸುವ ಶಸ್ತ್ರವೇ ಲಾಕ್ ಡೌನ್.

ಇನ್ನು ದೀಪಾ ಹಚ್ಚಿ… ದೀಪಕ್ಕೂ ಕೊರೊನಾಗೂ ನೀವು ಹುಡಕಾಡಿದರು ತಾಳೆ ಆಗೋದಿಲ್ಲ. ಅವ್ರು ಹೇಳಿದ್ದು ಇಷ್ಟೇ…ನಿಮಗೆ ಮನೆಯಲ್ಲಿ ಕೂತು, ಕೂತು ಸಾಕಾಗಿದ್ದರೆ ಈ 9 ನಿಮಿಷ ಮನೆಯಿಂದ ಹೊರಬರಲಿ…ಏಕಾಂತವು ಕಳೆದು ಹೋಗಲಿ…ಮನುಷ್ಯನ ಮನೋಬಲ ದೃಢವಾಗಿರಲಿ…ನಾನು ಒಬ್ಬನೇ ಕೊರೊನಾದ ವಿರುದ್ಧ ಹೇಗೆ ಹೋರಾಡಬಲ್ಲೆ.?ಅನ್ನುವುದನ್ನ ಬಿಟ್ಟು ಅವತ್ತು ನಾವ್ ಎಲ್ಲಾ ಹೋರಾಡುತ್ತಿದ್ದೇವೆ ಅನ್ನುವುದಾಗಿದ್ದು.

ಏಕಾಂತ ಕಳೆದುಹೋಗಲಿ ಅನ್ನುವ ಒಂದು ಸಣ್ಣ ಪ್ರಯತ್ನ ಕೂಡಾ ಆಗಿರಬಹುದು…(ನಾವು ಲಾಕ್ ಡೌನ್ ಸರಿಯಾಗಿ ಪಾಲಿಸಿದ್ದರೆ ತಾನೇ ಏಕಾಂತ ಬರೋದು ಮೋದಿ ಜೀ?) ಈ ಕೊರೊನಾ ಎದುರಿಸಲು ಬೇಕಾಗಿದ್ದು ದೃಢ ಸಂಕಲ್ಪ ಹಾಗೂ ಬಹು ಗಟ್ಟಿಯಾದ ಮನೋಬಲ.. ನಿಮ್ ಮನೋಬಲ(ವಿಲ್ ಪವರ್) ಎಷ್ಟು ಗಟ್ಟಿ ಇರುತ್ತೋ ಅಷ್ಟು ಬೇಗ ಈ ಕೊರೊನಾ ಬಹು ಬೇಗ ನಿಮ್ಮ ದೇಹದಿಂದ ಹೋಗುತ್ತದೆ…ಕೊರೊನಾ ಏನು, ವಿಲ್ ಪವರ್ ಮುಂದೆ ಕ್ಯಾನ್ಸರ್ನಂತಹ ರೋಗವನ್ನ ಕೂಡಾ ಹಿಮ್ಮೆಟ್ಟಿಸಬಹುದಾಗಿದೆ…ನೆನಪಿರಲಿ ಯಾವುದಕ್ಕೂ ಮನೋಬಲ ಗಟ್ಟಿ ಇರಬೇಕು ಅಷ್ಟೆ.

ದೀಪ ಹಚ್ಚುವುದರಿಂದ ಮನೋಬಲ ಗಟ್ಟಿಯಾಗುತ್ತಾ ಡಾಕ್ಟ್ರೆ ? ಇಲ್ಲಾ ಗಟ್ಟಿ ಆಗೊಲ್ಲ…ಆದರೆ, ಎದುರಿಸುವ ತಾಕತ್ತು ಬರುತ್ತೆ…ನಾನೊಬ್ಬನೇ ಹೋರಾಡುತ್ತಿಲ್ಲಾ…ನಾವೆಲ್ಲಾ ಹೋರಾಡುತ್ತಿದ್ದೇವೆ ಅನ್ನುವ ಬಹು ದೊಡ್ಡ ಸಂದೇಶವಾಗಿದೆ ಇದು…ತಾಯಿ ಭಾರತಿಯ ಸ್ಮರಣೆಗೆ ಮೀಸಲು.

ಮೋದಿ ಹೇಳಿದ್ದು ಹೀಗಿದೆ..5ನೆ ತಾರೀಖ್ ನಂದು ದೀಪ ಹಚ್ಚಿ 9ನಿಮಿಷ ತಾಯಿ ಭಾರತಿಯ ಧ್ಯಾನ ಮಾಡಿ ಪೂಜಿಸೋಣ…ಕೊರೊನಾ ವಿರುದ್ಧ ಹೋರಾಡೋಣ…ಇದು ಪಾಯಿಂಟ್ ಅಂದ್ರೆ… ಅದನ್ನ ಕೆಲ ತಿಳಿಗೇಡಿಗಳು ಅರ್ಥ ಆಗದೇ ಇದ್ದವರು ಪ್ರಶ್ನೆ ಅಂತೂ ಮಾಡೇ ಮಾಡ್ತಾರೆ…ಕೊಂಕು ನುಡಿದೆ ನುಡಿಯುತ್ತಾರೆ…ಅದಕ್ಕೆ ಉತ್ತರ ನಾಳೆ ಟೆರೇಸ್ ಮೇಲೆ ಬಂದು ನೋಡಿ ಅಲ್ಲಿಯೇ ಉತ್ತರ ಸಿಗುತ್ತದೆ.

ಮೋದಿ ಕಾರ್ಯವನ್ನ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರೇ ಮೆಚ್ಚಿರುವಾಗ..ಕೆಲವರಿಗೋಸ್ಕರ ಉತ್ತರಕೊಡುವ ಅವಶ್ಯಕತೆ ಇಲ್ಲ? ಈ ಲೇಖನವನ್ನ Dr. ಧನಂಜಯ್ ಗದಗಿನ್ ಎಂಬುವವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಿಕೊಂಡಿದ್ದಾರೆ. ಯಾವುದೋ ಒಂದು ರೀತಿಯಲ್ಲಿ ಜನಗಳಿಗೆ ಒಳ್ಳೇದು ಆದರೆ ಅಷ್ಟೇ ಸಾಕು. ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ..ಮಾಹಿತಿ ಇಷ್ಟವಾದಲ್ಲಿ ಶೇರ್ ಮಾಡಿ..

ಕೃಪೆ : Dr. ಧನಂಜಯ್ ಗದಗಿನ್ ಎಮ್.ಎಸ್ (ಆಯು)