ನನಗೆ ಚಪ್ಪಾಳೆ ಬೇಡ..ಆದರೆ ಈ ಬಾರಿ ಹೇಳಿದ್ದೇ ಬೇರೆ.?

News

ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಪೋಸ್ಟ್ ವೊಂದರ ಬಗ್ಗೆ ಪ್ರತಿಕ್ರಿಯಸಿರುವ ಪ್ರಧಾನಿ ಮೋದಿಯವರು, ಇದು ವಿವಾದಕ್ಕೆ ಎಡೆಮಾಡುತ್ತಿರುವ ಕಿಡಿಗೇಡಿತನವೆಂದು ಅಸಮಾಧಾನ ಹೊರಹಾಕಿದ್ದಾರೆ.

ಹೌದು, ಕೊರೋನಾ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ಒಳ್ಳೆಯ ಕೆಲಸ ಮಾಡುತ್ತಿದ್ದು, ಏಪ್ರಿಲ್ ೧೨ ಭಾನುವಾರದ ಸಾಯಂಕಾಲ ೫ ಗಂಟೆಗೆ ಎಲ್ಲರೂ ಮನೆಯಿಂದ ಹೊರಬಂದು ಚಪ್ಪಾಳೆ ತಟ್ಟಿ ಪ್ರಧಾನಿಯವರಿಗೆ ಗೌರವ ಕೊಡಬೇಕೆಂಬ ಸಂದೇಶವಿರುವ ಪೋಸ್ಟ್ ವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ಇನ್ನು ಇದು ಪ್ರಧಾನಿ ಮೋದಿಯವರ ಗಮನಕ್ಕೆ ಬಂದಿದ್ದು, ಇದರ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿ ರುವ ಪ್ರಧಾನಿಯವರು ನಿಜಕ್ಕೂ ನನಗೆ ಗೌರವ ಸಲ್ಲಿಸಬೇಕೆಂದರೆ ಕೊರೋನಾ ಸೋಂಕು ಹೋಗುವವರಿಗೂ ಯಾರಾದ್ರೂ ಒಂದು ಬಡ ಕುಟುಂಬಗಳ ಜವಾಬ್ದಾರಿಯನ್ನ ತೆಗೆದುಕೊಳ್ಳಿ. ಇದೇ ನೀವು ನನಗೆ ಕೋರುವ ದೊಡ್ಡ ಗೌರವ.

ವಿವಾದಕ್ಕೆ ಎಡೆಮಾಡಲೆಂದೇ ಈ ಪೋಸ್ಟ್ ನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.