15ವರ್ಷಗಳ ನಮ್ಮ ಸಂಸಾರ ಕೆಡಲು ನಯನತಾರಾ ಕಾರಣ ಎಂದ ಪ್ರಭುದೇವ ಮೊದಲ ಪತ್ನಿ..

Cinema
Advertisements

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸೂಪರ್ ಸೇರಿದಂತೆ ದಕ್ಷಿಣ ಭಾರತದ ತೆಲಗು ತಮಿಳು ಚಿತ್ರಗಳಲ್ಲಿ ನಟಿಸಿ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಂಡಿರುವ ನಟಿ ನಯನತಾರಾ.

Advertisements

ಇನ್ನು ಇವರ ಸಿನಿಮಾ ಜೀವನ ಎಷ್ಟು ಸುದ್ದಿಯಾಗಿದೆಯೋ ಅಷ್ಟೇ ಅವರ ವೈಯುಕ್ತಿಕ ಜೀವನ ಕೂಡ ಆಗಾಗ ಸುದ್ದಿಯಾಗುತ್ತಿರುತ್ತದೆ. ಇನ್ನು ಸೆಲೆಬ್ರೆಟಿ ಗಳ ಲೈಫ್ ನಲ್ಲಿ ಗಾಸಿಫ್ ಅನ್ನೋದು ಸಾಮಾನ್ಯವಾಗಿದೆ. ಇನ್ನು ಪ್ರೀತಿ ಪ್ರೇಮದ ವಿಚಾರದಲ್ಲಿ ನಯನತಾರಾ ಹಾಗೂ ತಮಿಳು ನಟ ಸಿಂಬು ಜೊತೆಗಿನ ಸಂಬಂಧದ ಬಗ್ಗೆ ಸುದ್ದಿಯಾಗಿತ್ತು.

ಇನ್ನು ಭಾರತದ ಮೈಕಲ್ ಜಾಕ್ಸನ್ ಎಂದೇ ಕರೆಸಿಕೊಳ್ಳುವ ನಟ ನಿರ್ದೇಶಕ ಪ್ರಭುದೇವ ನಯನತಾರಾ ಜೊತೆಗಿನ ಸಂಬಂಧ ಮದುವೆವರೆಗೂ ಹೋಗಿತ್ತು. ಆದರೆ ಕೆಲವು ಕಾರಣಗಳಿಂದ ಅದು ಬ್ರೇಕಪ್ ಆಗಿತ್ತು. ಇದು ಹಳೆ ವಿಷಯವಾಗಿದ್ದರೂ ನಮ್ಮ ಸಂಸಾರ ಮುರಿಯಲು ನಯನತಾರಾನೆ ಕಾರಣ ಎಂದು ಪ್ರಭುದೇವ ಅವರ ಮೊದಲ ಪತ್ನಿ ರಮಲತಾ ಅವರು ಆರೋಪ ಮಾಡಿದ್ದಾರೆ.

ಇನ್ನು ದಕ್ಷಿಣ ಭಾರತದ ತೆಲಗು ತಮಿಳು ಚಿತ್ರಗಳಲ್ಲಿ ಫೇಮಸ್ ಆಗಿರುವ ನಟಿ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಇನ್ನು ಪ್ರಭುದೇವ ಹಾಗೂ ನಯನತಾರಾ ಅವರ ಲವ್ ಸ್ಟೋರಿ ಅಂತೂ ಸಖತ್ ಸುದ್ದಿಯಾಗಿತ್ತು. ಈ ಕಾರಣದಿಂದಲೇ ಪ್ರಭುದೇವರ ಅವರು ತಮ್ಮ ಮೊದಲ ಪತ್ನಿ ರಾಮಲತಾ ಅವರಿಗೆ ವಿಚ್ಚೇಧನ ಕೊಟ್ಟಿದ್ದರು.

ಆದರೆ ಅದ್ಯಾಕೋ ನಯನತಾರಾ ಪ್ರಭುದೇವ ಅವರ ಲವ್ ಬ್ರೇಕಪ್ ಆಗಿ ಹೋಯ್ತು. ಇನ್ನು ವಿಚ್ಚೇಧನ ಬಳಿಕ ಕೂಡ ನಮ್ಮ ಸಂಸಾರ ಕೆಡಲು ಕಾರಣ ನಯನ ತಾರಾ ಎಂದು ರಮಲತಾರವರು ಹೇಳುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಪ್ರಭುದೇವ ಮೊದಲ ಪತ್ನಿ ರಮಲತಾರವರ ಬಗ್ಗೆ ಇಂಟರೆಸ್ಟ್ ಮಾಹಿತಿ ಇದೆ. ಹೌದು, ಪ್ರಭುದೇವ ಹಾಗೂ ರಮಲತಾರವರದ್ದು ಲವ್ ಮ್ಯಾರೇಜ್. ಹೌದು, ಮುಸ್ಲಿಂ ಧರ್ಮದವರಾಗಿದ್ದ ರಮಲತಾರವರು ಪ್ರಭುದೇವ ಅವರನ್ನ ಮದ್ವೆ ಆದ ಮೇಲೆ ಪ್ರಭುದೇವ ಅವರಿಗೋಸ್ಕರ ಧರ್ಮವನ್ನೇ ಬದ್ಲಾಯಿಸಿಕೊಂಡಿದ್ದರು.

ತನ್ನ ೧೫ ವರ್ಷಗಳ ಸಂಸಾರವನ್ನ ಹಾಳು ಮಾಡಿದ್ದು ನಯನತಾರಾ ಎಂದು ಹೇಳಿಕೊಂಡಿದ್ದಾರೆ. ಇನ್ನು ಇದರ ನಡುವೆ ಪ್ರಭುದೇವ ಅವರ ಜೊತೆಗೆ ಬ್ರೇಕಪ್ ಆಗಿದ್ದ ನಯನತಾರಾ ವಿಜ್ಞೇಶ್ ಶಿವನ್ ಎಂಬುವವರ ಜೊತೆ ಮದುವೆಯಾಗಿದ್ದಾರೆ ಎಂದು ಹೇಳಲಾಗಿದೆ.