ಖ್ಯಾತ ನಟ ಪ್ರಕಾಶ್ ರೈ ಅವರ ಇಬ್ಬರು ಪತ್ನಿಯರು ಹಾಗೂ ಅವರ ಮಕ್ಕಳು ಯಾರು? ಈಗೇನು ಮಾಡ್ತಿದ್ದಾರೆ ಗೊತ್ತಾ ?

Cinema Uncategorized

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳು ಹಾಗೂ ಹಿಂದಿ ಚಿತ್ರರಂಗದಲ್ಲೂ ಖಳ ನಟನಾಗಿ, ಪೋಷಕ ನಟನಾಗಿ ಮಿಂಚಿದ ಖ್ಯಾತ ನಟ ಪ್ರಕಾಶ್ ರಾಜ್. ಇನ್ನು ಈ ಖ್ಯಾತ ನಟ ಹುಟ್ಟಿದ್ದು ೨೬ ಮಾರ್ಚ್ ೧೯೬೫ ಬೆಂಗಳೂರಿನಲ್ಲಿ. ಇವರಿಗೆ ಪ್ರಸಾದ್ ರಾಜ್ ಎನ್ನುವ ಸಹೋದರ ಕೂಡ ಇದ್ದಾರೆ. ಇನ್ನು ಇವತ್ತಿಗೂ ಕರ್ನಾಟಕದಲ್ಲಿ ಈ ನಟನನ್ನ ಪ್ರಕಾಶ್ ರೈ ಎಂದೇ ಕರೆಯಲಾಗುತ್ತದೆ. ಪ್ರಕಾಶ್ ರಾಜ್ ಅವರು ಓದಿದ್ದು ಇದೆ ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜಿನಲ್ಲಿ. ತಮ್ಮ ವಿದ್ಯಾಭ್ಯಾಸದ ಬಳಿಕವಷ್ಟೇ ಪ್ರಕಾಶ್ ರಾಜ್ ಅವರು ಬಣ್ಣದ ಲೋಕಕ್ಕೆ ಕೊಟ್ಟರು. ಇನ್ನು ಪ್ರಕಾಶ್ ರೈ ಅವರ ವೈಯುಕ್ತಿಕ ಜೀವನದ ಬಗ್ಗೆ ಹೇಳುವುದಾದರೆ..

ಪ್ರಕಾಶ್ ರೈ ಅವರ ಮೊದಲ ಪತ್ನಿ ನಟಿ ಲಲಿತಾ ಕುಮಾರಿ. ೧೯೯೪ರಲ್ಲಿ ಮದುವೆಯಾಗಿದ್ದು. ಈ ಪ್ರಕಾಶ್ ರಾಜ್ ಲಲಿತಾ ಕುಮಾರಿ ದಂಪತಿಗೆ ಮೂರು ಮಕ್ಕಳು. ಪೂಜಾ ರಾಜ್ ಮತ್ತು ಮೇಘನಾ ರಾಜ್ ಸೇರಿ ಇಬ್ಬರು ಹೆಣ್ಣುಮಕ್ಕಳು. ಇನ್ನು ಮಗನ ಹೆಸರು ಸಿದ್ದು ಐದು ವರ್ಷದವನಿದ್ದಾಗಲೇ ತೀರಿಕೊಂಡಿದ್ದಾನೆ. ಈ ದಂಪತಿಯ ಹಿರಿಯ ಮಗಳು ಪೂಜಾ ಬ್ರಿಟನ್ ನ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಕಿರಿಯ ಮಗಳು ಮೇಘನಾ ಇಂಡಿಯಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನು ೨೦೦೯ರಲ್ಲಿ ಮೊದಲ ಪತ್ನಿ ಲಲಿತಾ ಕುಮಾರಿಗೆ ವಿಚ್ಚೇಧನ ಕೊಟ್ಟ ಪ್ರಕಾಶ್ ರಾಜ್ ೨೪ ಆಗಸ್ಟ್ ೨೦೧೦ರಲ್ಲಿ ಕೊರಿಯೋಗ್ರಾಪರ್ ಆಗಿದ್ದ ಪೋನಿ ವರ್ಮಾ ಅವರನ್ನ ಎರಡನೇ ಮದ್ವೆಯಾಗುತ್ತಾರೆ ಪ್ರಕಾಶ್ ರಾಜ್.

ಪ್ರಕಾಶ್ ರಾಜ್ ಪೋನಿ ವರ್ಮಾ ದಂಪತಿಗೆ ವಯಸ್ಸಿನಲ್ಲಿ ಹನ್ನೆರಡು ವರ್ಷ ಅಂತರವಿದೆ. ಇನ್ನು ಈ ದಂಪತಿಗೆ ೨೦೧೫ರಲ್ಲಿ ಗಂಡುಮಗು ಹುಟ್ಟಿದ್ದು ಅವನ ಹೆಸರು ವೇದಾಂತ್ ಎಂದು. ಇನ್ನು ಪ್ರಕಾಶ್ ರಾಜ್ ರವರು ತನ್ನನ್ನ ನಾಸ್ತಿಕ ಎಂದು ಹೇಳಿಕೊಂಡಿದ್ದಾರೆ. ತಮ್ಮ ಮೊದಲನೇ ಪತ್ನಿಯ ಹೆಣ್ಣು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವ ಪ್ರಕಾಶ್ ರಾಜ್ ರವರು ಹೈದರಾಬಾದ್ ಗೆ ಹತ್ತಿರದಲ್ಲಿರುವ ತಮ್ಮ ತೋಟದ ಮನೆಯಲ್ಲಿ ಎರಡನೇ ಪತ್ನಿ ಹಾಗೂ ಮಗನ ಜೊತೆಗೆ ವಾಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಕನ್ನಡದ ಯುವರತ್ನ ಮತ್ತು ತೆಲುಗಿನ ವಕೀಲ್ ಸಾಬ್ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ ನಟ ಪ್ರಕಾಶ್ ರಾಜ್.