ಬಿಗ್ ಬಾಸ್ ಗೆಲ್ಲೋ ಸ್ಪರ್ಧಿಗಳಲ್ಲಿ ಒಬ್ಬರೆನಿಸಿದ್ದ ಸಂಬರಗಿಗೆ ಸಿಕ್ಕ ಒಟ್ಟು ಹಣ ಎಷ್ಟು ಗೊತ್ತಾ ?

Entertainment

ಸ್ನೇಹಿತರೇ, ಬಿಗ್ ಬಾಸ್ ಕಾರ್ಯಕ್ರಮ ಎಂದರೆ ಅಲ್ಲಿ, ನೋವು, ನಲಿವು, ಮನರಂಜನೆ ಜೊತೆಗೆ ಜ’ಗಳ ಕೂಡ ಇರುತ್ತದೆ. ಇನ್ನು ಪ್ರತಿಯೊಂದು ಬಿಗ್ ಬಾಸ್ ಸೀಸನ್ ಗಳಲ್ಲೂ ಹೆಚ್ಚಿಗೆ ಜಗಳ ಮಾಡಿಕೊಂಡೆ ಸುದ್ದಿಯಾಗುವ ಒಬ್ಬ ಸ್ಪರ್ಧಿ ಇದ್ದೆ ಇರುತ್ತಾರೆ. ಅದೇ ರೀತಿ ಈ ಸಲದ ಬಿಗ್ ಬಾಸ್ ೮ರ ಸೀಸನ್ ನಲ್ಲೂ ಅಂತದ್ದೇ ಒಬ್ಬ ಸ್ಫರ್ಧಿಯಿದ್ದರು. ಅವರೇ ಪ್ರಶಾಂತ್ ಸಂಬರಗಿ. ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತಿದ್ದ ಕೆಲ ವೀಕ್ಷಕರಿಗೆ ಸಂಬರಗಿ ಮಾಡುತ್ತಿದ್ದದ್ದು ಕಿರಿಕಿರಿ ಎನಿಸಿದ್ರೆ, ಮತ್ತೊಂದು ವರ್ಗದ ವೀಕ್ಷಕರಿಗೆ ಇವರು ನೆಚ್ಚಿನ ಸ್ಪರ್ಧಿಯಾಗಿದ್ದರು. ಇದೆ ಕಾರಣದಿಂದಲೇ ಏನೋ ಪ್ರಶಾಂತ್ ಅವರು ಹತ್ತು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿಯಲು ಕಾರಣವಾಗಿತ್ತು.

ಇನ್ನು ಪ್ರಶಾಂತ್ ಸಂಬರಗಿ ಅವರ ವೈಯುಕ್ತಿಕ ವಿಚಾರಕ್ಕೆ ಬಂದರೆ, ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಇವರು ನಿರ್ಮಾಪಕನಾಗಿಯೂ ಹಾಗೂ ಸಿನಿಮಾ ಡಿಸ್ಟ್ರಿಬ್ಯುಟೆರ್ ಆಗಿಯೂ ಕೆಲಸ ಮಾಡಿದ್ದಾರೆ. ಇನ್ನು ಇದೆ ವರ್ಷ ಕನ್ನಡ ಸಿನಿಮಾ ರಂಗದ ಕೆಲ ನಟ ನಟಿಯರ ಬಗ್ಗೆ ಹೇಳಿಕೆಗಳನ್ನ ಸುದ್ದಿ ಮಾಧ್ಯಮಗಳಲ್ಲಿ ಕೊಟ್ಟು ಸ್ಯಾಂಡಲ್ವುಡ್ ನಲ್ಲಿ ಅಲ್ಲೊಲ್ಲ ಕಲ್ಲೋಲ ಸೃಷ್ಟಿ ಮಾಡಿದ್ದರು. ಇದೆಲ್ಲದರ ಬಳಿಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಪ್ರಶಾಂತ್ ಅವರು ಎಷ್ಟು ಚೆನ್ನಾಗಿ ಟಾಸ್ಕ್ ಗಳಲ್ಲಿ ಭಾಗವಹಿಸುತ್ತಿದ್ದರೋ, ಅಷ್ಟೇ ಚೆನ್ನಾಗಿ ಸ್ಪರ್ಧಿಗಳ ಜೊತೆ ಜಗಳ ಆಡಿದ್ದೂ ಉಂಟು. ಮುಖ್ಯವಾಗಿ ಮಹಾಭಾರತ ಖ್ಯಾತಿಯ ಮಂಜು ಪಾವಗಡ ಸೇರಿದಂತೆ ರಾಜೀವ್, ಕೆಪಿ.ಅರವಿಂದ್ ದಿವ್ಯಾ ಉರುಡುಗ, ದಿವ್ಯಾ ಸುರೇಶ್ ಸೇರಿದಂತೆ ಕೆಲ ಸ್ಪರ್ಧಿಗಳ ಜೊತೆಗೆ ಜಗಳ ಮಾಡಿದ್ದುಂಟು.

ಇನ್ನು ಸ್ಯಾಂಡಲ್ವುಡ್ ನಲ್ಲಿ ಉತ್ತಮ ಬ್ಯಾಕ್ ಗ್ರೌಂಡ್ ಹೊಂದಿರುವ ಪ್ರಶಾಂತ್ ಸಂಬರಗಿ ಅವರು ಬಿಗ್ ಬಾಸ್ ನಲ್ಲಿ ಪಡೆದುಕೊಂಡ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಕುತೂಹಲ ಇದ್ದೆ ಇದೆ. ಹೌದು, ಮೊದಲೇ ಬಿಗ್ ಬಾಸ್ ನಲ್ಲಿ ನಿರ್ಧಾರ ಮಾಡಿರುವಂತೆ ಸ್ಪರ್ಧಿಗಳಿಗೆ ವಾರದ ಲೆಕ್ಕಾಚಾರದಲ್ಲಿ ಸಂಭಾವನೆ ನೀಡಲಾಗುತ್ತದೆ. ಇನ್ನು, ಪ್ರಶಾಂತ್ ಅವರಿಗೆ ಒಂದು ವಾರಕ್ಕೆ 40 ಸಾವಿರದಂತ ಸಂಭಾವನೆ ನೀಡಲಾಗಿದೆ. ಅದರಂತೆ ಹತ್ತು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಪ್ರಶಾಂತ್ ಸಂಬರಗಿ ಅವರಿಗೆ ಒಟ್ಟು ೪ ಲಕ್ಷ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ನೇಹಿತರೇ, ಒಂದು ವೇಳೆ ಬಿಗ್ ಬಾಸ್ ಪೂರ್ತಿಯಾಗಿ ನಡೆದಿದ್ದರೆ ವಿನ್ನರ್ ಆಗುತ್ತಿದ್ದ ಸ್ಪರ್ಧಿ ಯಾರೆಂದು ಕಾ’ಮೆಂಟ್ ಮಾಡಿ ತಿಳಿಸಿ..