ನಟ ನಟಿಯರ ಬೆವರಿಳಿಸಿದ್ದ ಬಿಗ್ ಬಾಸ್ ಸ್ಪರ್ಧಿ ಸಂಬರಗಿ ಅವರ ಕುಟುಂಬ ಹೇಗಿದೆ ?ಪ್ರಶಾಂತ್ ಮಾಡೋ ಕೆಲಸ ಏನ್ ಗೊತ್ತಾ ?

Entertainment
Advertisements

ಈ ಸಲದ ಶೋ ಬಿಗ್ ಬಾಸ್ ೮ರ ಸೀಸನ್ ನಲ್ಲಿ ಕನ್ನಡ ಕಿರುತೆರೆ, ಬೆಳ್ಳಿತೆರೆ, ಯೂಟ್ಯೂಬರ್ಸ್, ಬೈಕರ್, ಸ್ಪೋರ್ಟ್ಸ್ ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಹಲವು ವಿಭಾಗಗಳಿಂದ ಸ್ಪರ್ಧಿಗಳು ಆಯ್ಕೆಯಾಗಿ ಬಂದಿದ್ದು ವೀಕ್ಷಕರಿಗೆ ಅತ್ತ್ಯತ್ತಮ ಮನರಂಜನೆ ಸಿಗುತ್ತಿದೆ. ಇನ್ನು ಈ ಸ್ಪರ್ಧಿಗಳಲ್ಲಿ ತಮ್ಮ ಹೇಳಿಕೆಗಳಿಂದಲೇ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾದವರು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ. ಬಿಗ್ ಮನೆಯ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದರೆ ತಪ್ಪಾಗೊದಿಲ್ಲ. ಇವರು ತಮ್ಮ ನೇರವಾದ ಮಾತುಗಳಿಂದಲೇ ಸ್ಪರ್ಧಿಗಳೊಂದಿಗೆ ಮನಸ್ತಾ’ಪ ಮಾಡಿಕೊಂಡಿದ್ದಾರೆ. ಗ’ಲಾಟೆ ಕೂಡ ನಡೆದಿದೆ. ಇನ್ನು ಸಾಮಾಜಿಕ ಹೋರಾಟಗಾರರಾಗಿರುವ ಪ್ರಶಾಂತ್ ಸಂಬರ್ಗಿಯವರ ವೈಯುಕ್ತಿಕ ಜೀವನದ ಬಗ್ಗೆ ತಿಳಿಯುವ ಕುತೂಹಲ ಸಾಕಷ್ಟು ಜನರಲ್ಲಿದೆ.

[widget id=”custom_html-4″]

Advertisements

ಇನ್ನು ಪ್ರಶಾಂತ್ ಅವರು ಹೆಚ್ಚಾಗಿ ಸುದ್ದಿಯಾಗಿದ್ದು, ಕನ್ನಡ ಚಿತ್ರರಂಗದ ಕೆಲ ನಟ ನಟಿಯರ ಬಗ್ಗೆ ಕೇಳಿಬಂದ ಡ್ರ-ಗ್ ಜಾಲದ ನಂಟಿನ ಬಗ್ಗೆ ಕುರಿತು. ಹೌದು, ಈ ವಿಷಯದ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಹೇಳಿಕೆಗಳನ್ನ ಕೊಟ್ಟಿದ್ದ ಪ್ರಶಾಂತ್ ಸಂಬರಗಿಯವರು ಕೆಲ ನಟ ನಟಿಯರಿಗೆ ಬೆವರಿಳಿಯುವಂತೆ ಮಾಡಿದ್ದರು. ಪ್ರಶಾಂತ್ ಅವರ ಪೂರ್ತಿ ನಾಮದೇಯ ವೀರ ಪ್ರಶಾಂತ್ ಸಂಬರಗಿ ಎಂದು. ಇವರು ಸಾಮಾಜಿಕ ಕಾರ್ಯಕರ್ತ ಅಲ್ಲದೆ, ಸಿನಿಮಾ ನಿರ್ಮಾಪಕ, ಸಿನಿಮಾ ವಿತರಕ ಹಾಗೂ ಉದ್ಯಮಿಯೂ ಹೌದು. ಹುಟ್ಟಿದ್ದು ೬ ಆಕ್ಟೊಬರ್ ೧೯೮೦ರಂದು ಬೆಳಗಾವಿಯಲ್ಲಿ. ಬೆಂಗಳೂರಿನಲ್ಲೇ ತಮ್ಮ ಶಾಲಾ ಕಾಲೇಜನ್ನ ಮುಗಿಸಿರುವ ಇವರು ಎಂಬಿಎ ಪದವೀಧರರಾಗಿದ್ದಾರೆ.

[widget id=”custom_html-4″]

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಅಪ್ಪಟ ಅಭಿಮಾನಿಯಾಗಿರುವ ಸಂಬರಗಿ ಅವರ ಮೀಡಿಯಾ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ್ದಾರೆ. ಈಗ ಬ್ಯುಸಿನೆಸ್ ಮ್ಯಾನ್ ಆಗಿರುವ ಸಂಬರಗಿ ತಮ್ಮದೇ ಆದ ರಿಯಲ್ ಎಸ್ಟೇಟ್ ಕಂಪೆನಿಯೊಂದನ್ನ ಸ್ಥಾಪನೆ ಮಾಡಿದ್ದಾರೆ. ಪ್ರಶಾಂತ್ ಸಂಬರಗಿ ತಮ್ಮ ಪ್ರೀತಿಯ ಮಡದಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಅವರಲ್ಲಿ ಒಬ್ಬ ಮಗನ ಹೆಸರು ಆದಿತ್ಯ ಸಂಬರಗಿ ಎಂದು. ದುಬಾರಿ ಕಾರ್ ಗಳಾದ ರೇಂಜ್ ರೋವರ್ ಮತ್ತು ಆಡಿ ಕಾರ್ ಗಳ ಒಡೆಯರಾಗಿದ್ದಾರೆ. ಒಟ್ಟಿನಲ್ಲಿ ನೇರ ಮಾತಿಗೆ ಹೆಸರಾಗಿರುವ ಪ್ರಶಾಂತ್ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಕೆಂ’ಗಣ್ಣಿಗೆ ಗು’ರಿಯಾಗಿರುವುದು ಉಂಟು. ಇನ್ನು ಪ್ರಶಾಂತ್ ಸಂಬರಗಿ ಬಿಗ್ ಮನೆಯಲ್ಲಿ ಚೆನ್ನಾಗಿಯೇ ಆಟವಾಡುತ್ತಿದ್ದು ಎಷ್ಟು ವಾರಗಳ ಕಾಲ ಉಳಿಯಲಿದ್ದಾರೆ ಎಂಬುದನ್ನ ಕಾದು ನೋಡಬೇಕಾಗಿದೆ.