ಇಷ್ಟು ದಿನ ನಾವು ನೀವು ನೋಡಿರುವಂಥಾ ಕೊಳಲು ಇದಲ್ಲ. ಒಂದು ವೇಳೆ ಕೃಷ್ಣ ಪರಮಾತ್ಮನೇನಾದ್ರೂ ಭೂಲೋಕದಲ್ಲಿ ಪ್ರತ್ಯಕ್ಷನಾದ್ರೆ, ಅವನ ಕೈಗೆ ಸರಿಹೋಗೋವಂತ ಅದ್ಭುತವಾದ ಕೊಳಲಿದು. ನೋಡೋದಕ್ಕೆ ಎಷ್ಟು ಗಾಢವಾಗಿದ್ಯೋ, ನುಡಿಸಿದಾಗಲೂ ಅಷ್ಟೇ ಗಾಂಭೀರ್ಯವಾಗಿದೆ. ಅಂದ ಹಾಗೆ, ಇಡೀ ಭಾರತದಲ್ಲಿ ಇದನ್ನ ಪ್ರಪ್ರಥಮ ಬಾರಿಗೆ ನುಡಿಸುತ್ತಿರೋ ಹೆಗ್ಗಳಿಕೆ ನಮ್ಮ ನಗರದ ಕಲಾವಿದರದ್ದು. ಹೌದು, ನಾಲ್ಕೈದು ದಶಕಗಳ ಹಿಂದೆ ಪಾಶ್ಚಾತ್ಯ ದೇಶದಲ್ಲಿ ಕಂಡು ಹಿಡಿಯಲಾಗಿರೋ ಈ ಬೃಹದಾಕಾರದ ಕೊಳಲಿನ ಹೆಸರು ಕಾಂಟ್ರಾಬಾಸ್. ಬರೋಬ್ಬರಿ 8 ಅಡಿ ಎತ್ತರ, 22 ಕೆಜಿ ತೂಕವಿರೋ ಈ ಕೊಳಲಿನ ಬೆಲೆ ಕಡಿಮೆ ಅಂದ್ರೂ ಐದು ಸಾವಿರ ಡಾಲರ್. ಇಂಡಿಯನ್ ಕರೆನ್ಸಿ ಪ್ರಕಾರ ಮೂರು ಲಕ್ಷದ ಎಪ್ಪತ್ತು ಸಾವಿರ ಏಳುನೂರು ರುಪಾಯಿ.
[widget id=”custom_html-4″]

ವಿಶ್ವದ ಮೂಲೆ ಮೂಲೆಯಲ್ಲಿ ಹುಡುಕಿದರೂ ಇದನ್ನು ನುಡಿಸಿರೋ ಕಲಾವಿದರ ಸಂಖ್ಯೆ ಬೆರಳೆಣಿಕೆಯಷ್ಟೇ. ಅಂತಹವರ ಪೈಕಿ, ನಮ್ಮ ಬೆಂಗಳೂರಿನ ಕಲಾವಿದರೂ ಅಗ್ರಗಣ್ಯ ಸ್ಥಾನದಲ್ಲಿದ್ದಾರೆ. ಸ್ವರ ಹಾಗು ಕೊಳಲು ಮಾಂತ್ರಿಕನೆಂಬ ವಿಖ್ಯಾತಿ ಹೊಂದಿರೋ ಪ್ರವೀಣ್ ಗೋಡ್ಖಿಂಡಿ ಅವರು ಕಾಂಟ್ರಾಬಾಸ್ ಕೊಳಲು ನುಡಿಸಿದ ಮೊಟ್ಟ ಮೊದಲ ಭಾರತೀಯರಾಗಿದ್ದಾರೆ. ಕೆಲ ವರ್ಷಗಳ ಹಿಂದೆ ವಿದೇಶಕ್ಕೆ ಸಂಗೀತ ಕಚೇರಿ ನೀಡಲು ತೆರಳಿದ್ದಾಗ, ಈ ವಿಭಿನ್ನ ಕೊಳಲಿನ ಬಗ್ಗೆ ಕೇಳಿದ್ದ ಪ್ರವೀಣ್ ಕೂಡಲೇ ಅದನ್ನು ಕರಗತ ಮಾಡಿಕೊಳ್ಳಬೇಕೆಂಬ ನಿರ್ಧಾರ ಮಾಡಿ ಆ್ಯಮ್ಸ್ಟರ್ಡ್ಯಾಂನಿಂದ ಈ ಕೊಳಲನ್ನ ತರಿಸಿಕೊಂಡು, ಬರೊಬ್ಬರಿ 2 ವರ್ಷ ಹೊಸ ವಿದ್ಯಾರ್ಥಿಯಂತೆ ಅಭ್ಯಾಸ ಮಾಡಿದ್ದಾರೆ.
[widget id=”custom_html-4″]

ಇಡೀ ಭಾರತದಲ್ಲೇ ಈ ಬೃಹದಾಕಾರದ ಕೊಳಲನ್ನು ನುಡಿಸಿರೋ ಪ್ರಪ್ರಥಮ ಕಲಾವಿದರು ಪ್ರವೀಣ್ ಗೋಡ್ಖಿಂಡಿ. ಇನ್ನೂ ಇದೇ ಕೊಳಲಿಗೆ ಪ್ರವೀಣ್ ಗೋಡ್ಖಿಂಡಿ ಗಾಡ್ಸ್ ಬನ್ಸಿ ಅಂತ ತಾವೇ ನಾಮಕರಣವನ್ನೂ ಮಾಡಿದ್ದಾರೆ. ನಾಲ್ಕು ಕೊಳಲು ಅಥವಾ ಬಾನ್ಸುರಿಗಳನ್ನು ನುಡಿಸಲು ಬೇಕಾದ ಸಾಮರ್ಥ್ಯ ಹಾಗೂ ಶಕ್ತಿ, ಇಂತಹ ಒಂದು ಗಾಡ್ಸ್ ಬನ್ಸಿ ನುಡಿಸಲು ಅವಶ್ಯಕವಂತೆ. ಅಂಥದ್ರಲ್ಲೂ, ಈ ಗಾಡ್ಸ್ ಬನ್ಸಿಯನ್ನು ನುಡಿಸುವುದನ್ನು ವಿಧೇಯ ವಿದ್ಯಾರ್ಥಿಯಂತೆ ಕಲಿತಿರೋ ಈ ಕಲಾವಿದರಿಗೆ ಸರಸ್ವತಿಯೇ ದಾರಿ ತೋರಿದ್ದಾಳೆ. ಪರಿಶ್ರಮ, ಸಂಯಮ ಹಾಗು ಸಾಧಿಸುವ ಮನಸ್ಸಿದ್ದರೇ, ಬೆಟ್ಟವೂ ಸಹ ಸಾಸಿವೆಯಂತೆ ಅನ್ನೋ ಮಾತು ಇವರನ್ನು ನೋಡಿದ್ರೆ ನಿಜ ಅನ್ಸುತ್ತೆ.