ಕಾಮಿಡಿ ಕಿಲಾಡಿ ಖ್ಯಾತಿಯ ಪ್ರವೀಣ್ ಪತ್ನಿ ಯಾರು ಗೊತ್ತಾ?ಕುಟುಂಬ ಹೇಗಿದೆ ನೋಡಿ..

Entertainment

ಸ್ನೇಹಿತರೆ ಈ ಸಿನಿಮಾರಂಗ ಅಂದ್ರೆ ಹಾಗೇ, ಸಿನಿಮಾರಂಗದಲ್ಲಿ ಅಂದುಕೊಂಡಷ್ಟು ಸುಲಭವಾಗಿ ಎಲ್ಲರಿಗೂ ಅದೃಷ್ಟದ ಬಾಗಿಲು ತೆಗೆಯುವುದಿಲ್ಲ. ನೀವು ಎಷ್ಟೇ ಕಷ್ಟಪಟ್ಟರು ಸಮಯ ನಿಮಗೆ ಒಂದೊಂದು ಬಾರಿ ಸಾತ್ ಕೊಡುವುದಿಲ್ಲ. ಈ ಕಲಾವಿದರ ಜೀವನವೇ ಬೇಡ ಎಂದು ಬೇರೆ ಬೇರೆ ಕೆಲಸ ನೋಡಿಕೊಂಡು ಇನ್ನೊಂದು ಕೆಲಸಗಳಲ್ಲಿ ಯಶಸ್ವಿಯಾಗಿರುವ ಸಾಕಷ್ಟು ಕಲಾವಿದರ ನಿದರ್ಶನಗಳಿವೆ. ಹೌದು ಕಿರುತೆರೆಯಲ್ಲಿ ಅಭಿನಯಿಸುವ ಎಲ್ಲರೂ ಕೂಡ ಸುಲಭವಾಗಿ ಆ ವೇದಿಕೆ ಹತ್ತಿದ್ದಾರೆ, ಅವರಿಗೆನಪ್ಪ ಒಳ್ಳೆಯ ದುಡ್ಡು ಬರುತ್ತದೆ, ಅವರ ಕಲೆಗೆ ಒಳ್ಳೆಯ ದುಡ್ಡು ಸುರಿಯುತ್ತಾರೆ, ಅವರ ಜೀವನವೂ ತುಂಬಾ ಸೊಗಸಾಗಿದೆ ಎಂದು ಅಂದುಕೊಂಡಿರುತ್ತೀರ.

ಹೌದು ಅದು ತಪ್ಪು ಕಲ್ಪನೆ. ಬೆಳ್ಳಿತೆರೆಮೇಲೆ ಮಿಂಚಿದ ಹಾಗೆ ಅವರ ನಿಜಜೀವನದಲ್ಲಿ ಸದಾ ಖುಷಿಯಿಂದಲೆ ಇರುತ್ತಾರೆ, ಯಾವ ಕಷ್ಟ ಅವರಿಗಿಲ್ಲ ಎಂದೆನಿಸುತ್ತೆ. ಆದರೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಮುನ್ನ ಅವರು ಪಟ್ಟಂತಹ ಕಷ್ಟ ಕಪ್ಪು ತೆರೆಯ ನಿಜಾಂಶ ತಿಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ. ಹೌದು ಈ ಹಿಂದೆ ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಮಜಾಭಾರತ ಕಾರ್ಯಕ್ರಮ ಆರಂಭಗೊಂಡಿತ್ತು. ಇದರಲ್ಲಿ ಚಿಲ್ಲರ್ ಮಂಜು, ಲ್ಯಾಗ್ ಮಂಜ, ಹಾಗೂ ಪ್ರವೀಣ್ ಕುಮಾರ್ ಅವರು ಕೂಡ ಈಗ ಹೆಚ್ಚು ಪ್ರಖ್ಯಾತಿ ಹೊಂದಿದ್ದಾರೆ. ಹಾಗೆ ಪ್ರವೀಣ್ ಅವರನ್ನ ಜೂ. ಸಾಧುಕೋಕಿಲ ಎಂದು ಕರೆಯುತ್ತಾರೆ.

ಇವರು ಮೂಲತಹ ಗೋಕಾಕ್ ಜಿಲ್ಲೆಯವರು. ಹುಟ್ಟಿದ್ದು ಬೆಳೆದಿದ್ದು ತುಂಬಾ ಕಷ್ಟದ ಹಾದಿಯಲ್ಲಿ ಎನ್ನಬಹುದು. ಆರಂಭದ ದಿನದಿಂದ ಪ್ರವೀಣ್ ರವರಿಗೆ ಚಿಕ್ಕಂದಿನಿಂದ ಹೆಚ್ಚು ನಟನೆ ಮೇಲೆ ಆಸಕ್ತಿ. ಆಗಾಗ ನಾಟಕಗಳಲ್ಲಿ ಅಭಿನಯ ಕೂಡ ಮಾಡುತ್ತಿದ್ದರು. ಆದರೆ ಪ್ರವೀಣ್ ಗೆ ಸಣ್ಣ ವಯಸ್ಸಿನಲ್ಲಿಯೇ ಜವಾಬ್ದಾರಿಗಳು ಹೆಚ್ಚಾದ ಕಾರಣ ಶಾಲೆಯ ತೊರೆದು ಸಣ್ಣ ವಯಸ್ಸಿನಲ್ಲಿ ಸಿಕ್ಕ ಸಿಕ್ಕ ಕೆಲಸ ಮಾಡುವಂತಾಯಿತು. ಪ್ರವೀಣ್ ಕುಮಾರ್ ಅವರು ಕಾರ್ ತೊಳೆಯುವುದರಿಂದ ಹಿಡಿದು, ಪೇಪರ್ ಹಾಕುವುದು, ಅಲ್ಲಲ್ಲಿ ಕಸ ಗುಡಿಸುವುದು ಮಾಡಿದ್ದಾರೆ ಎನ್ನಲಾಗಿದೆ. ಇವರ ತಂದೆ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಅಲ್ಲಿ ಕಳ್ಳತನವಾದ ಮೇಲೆ ಇವರ ತಂದೆಯನ್ನು ಕೆಲಸದಿಂದ ಕಿತ್ತೆಸೆಯಲಾಯಿತು.

ನಂತರ ಪ್ರವೀಣ್ ಅವರು ತುಂಬಾ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದರು. ಒಂದು ದಿನ ಅರ್ಕೆಸ್ಟ್ರಾ ಅವರು ಪ್ರವೀಣ್ ಅವರ ಊರಿಗೆ ಬಂದಿದ್ದರು. ಆಗ ಅಲ್ಲಿಯ ಆಯೋಜಕರ ಅನುಮತಿ ಪಡೆದು, ಒಂದು ಹಾಸ್ಯದ ರೀತಿ ಪ್ರವೀಣ್ ಅವರು ಅಭಿನಯಿಸಿದ್ದರು. ನಂತರ ಇಷ್ಟ ಆದ ಪ್ರವೀಣ್ ಅವರನ್ನ ಆರ್ಕೆಸ್ಟ್ರಾ ಟೀಮ್ ಅವರು ಜೊತೆಗೆ ಕರೆದುಕೊಂಡು ಹೋದರು. ಒಟ್ಟು 2700 ಕಾರ್ಯಕ್ರಮಗಳಲ್ಲಿ ಪ್ರವೀಣ್ ಹೀಗೆ ಅಭಿನಯ ಮಾಡುತ್ತ ಹೋದರು.

ಒಂದು ದಿನ ಈ ಕಾಮಿಡಿ ಕಿಲಾಡಿಗಳು ವೇದಿಕೆಗೆ ಹೋಗಿ ಅಲ್ಲಿಯೂ ಪ್ರವೀಣ್ ಕುಮಾರ್ ಅವರು ಹೆಚ್ಚು ಜನಪ್ರಿಯರಾದರು. ಹೌದು ಅಸಲಿಗೆ ಪ್ರವೀಣ್ ಕುಮಾರ್ ಅವರು ಮದುವೆ ಆಗಿರುವ ಹುಡುಗಿ ಹೇಗಿದ್ದಾರೆ ಗೊತ್ತಾ.? ಮೇಲಿರುವ ಫೋಟೋಗಳನ್ನು ನೋಡಿ. ಪ್ರವೀಣ್ ಕುಮಾರ್ ಅವರ ಮುಂದಿನ ಜೀವನ ಶುಭಕರವಾಗಿರಲಿ ಎಂದು ಕಮೆಂಟ್ ಮಾಡಿ ಧನ್ಯವಾದಗಳು…