ಈಗಂತೂ ಬಿಗ್ಬಾಸ್ ಸೆಕೆಂಡ್ ಇನ್ನಿಂಗ್ಸ್ ಆರಂಭವಾದ ದಿನದಿಂದಲೂ ಬಿಗ್ ಮನೆಯಲ್ಲಿ ನಗುವಿಗಿಂತ ಗಲಾಟೆ, ಜ’ಗಳವೇ ಜೋರಾಗಿದೆ. ಪ್ರತಿನಿತ್ಯ ಒಬ್ಬರ ಮೇಲೆ ಮತ್ತೊಬ್ರು ರೇಗಾಡ್ತಾ, ಅರಚಾಡ್ತಾನೇ ಇರ್ತಾರೆ. ಕೊನೆಗೆ ಬಿಗ್ ಮನೆಯಲ್ಲಿ ಕಣ್ಣೀರ ಕೋಡಿಯೇ ಹರಿಯುತ್ತೆ. ಮೊನ್ನೆ ಮೊನ್ನೆಯಷ್ಟೇ ದಿವ್ಯಾ ಸುರೇಶ್ ಕಣ್ಣೀರು ಸುರಿಸಿದ್ದರು. ಮತ್ಯಾರಿಂದಲೂ ಅಲ್ಲ. ಚಕ್ರವರ್ತಿ ಚಂದ್ರಚೂಡ್ ಅವರ ಚುಚ್ಚು ಮಾತುಗಳಿಂದಲೇ ತಮ್ಮ ಮನಸಿಗೆ ನೋವಾಗಿದೆ ಅಂತ ದಿವ್ಯಾ ಸುರೇಶ್ ಬಿಕ್ಕಿ ಬಿಕ್ಕಿ ಅಂತಿದ್ದರು. ತದನಂತರ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಸ್ನೇಹ ಹಳಸಿತ್ತು. ಅವರಿಬ್ಬ ನಡುವೆಯೂ ಮುನಿಸು ಎದ್ದು ಕಾಣ್ತಿದ್ದದ್ದು ವೀಕ್ಷಕರಿಗೂ ಗೊತ್ತೇ ಇದೆ. ಚಕ್ರವರ್ತಿ ಚಂದ್ರಚೂಡ್ ಮಾತಿನ ನಂತರ ಮಂಜು ಪಾವಗಡ ಸಹ ತುಂಬಾ ಸೈಲೆಂಟ್ ಆಗಿದ್ದರು. ಸ್ವಲ್ಪ ದಿನ ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಅವರ ಜಗೆ ಚಟಾಕಿಗೆ ಮರೆಯಾದಂತಿತ್ತು. ಇದೀಗ ನಟಿ ಪ್ರಿಯಾಂಕಾ ತಿಮ್ಮೇಶ್ ಅವರ ಸರದಿ. ಅದೂ ಮತ್ತದೇ ಚಕ್ರವರ್ತಿ ಚಂದ್ರಚೂಡ್ ಅವರ ಮಾತಿನಿಂದ ನೋವಾಗಿ ಅತ್ತಿದ್ದರು.
[widget id=”custom_html-4″]

ಅಲ್ಲದೇ, ಇಷ್ಟು ದಿನಗಳ ಕಾಲ ನಟಿ ಪ್ರಿಯಾಂಕಾ ತಿಮ್ಮೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಸಾಧ್ಯವಾದಷ್ಟು ಸೈಲೆಂಟ್ ಆಗಿದ್ದರು. ಯಾರು ಏನೇ ಹೇಳಿದರೂ, ಅದನ್ನು ತಾಳ್ಮೆಯಿಂದ ನಿಭಾಯಿಸಿಕೊಂಡು ಸಾಗುತ್ತಿದ್ದರು. ಆದರೆ ಅವರ ತಾಳ್ಮೆಗೂ ಒಂದು ಮಿತಿ ಇದೆ. ಇದೇ ಮೊದಲ ಬಾರಿಗೆ ಪ್ರಿಯಾಂಕಾ ತಿಮ್ಮೇಶ್ ಅವರು ದೊಡ್ಮನೆಯೊಳಗೆ ಉಗ್ರಾವತಾರ ತೋರಿದ್ದಾರೆ. ಜುಲೈ 4ರಂದು ಸಿಟ್ಟಿನಿಂದ ಇಡೀ ಮನೆಯನ್ನೇ ಬೆಚ್ಚಿ ಬೀಳಿಸಿದ್ದಾರೆ. ತಮ್ಮ ಬಗ್ಗೆ ಇಲ್ಲಸಲ್ಲದ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್ಗೆ ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ. ಬಿಗ್ ಬಾಸ್ನಲ್ಲಿ ಇರುವ ಎಲ್ಲರ ಬಗ್ಗೆಯೂ ಚಂದ್ರಚೂಡ್ ಕಮೆಂಟ್ ಮಾಡುತ್ತಾರೆ. ಇತ್ತೀಚೆಗೆ ಪ್ರಿಯಾಂಕಾ ಬಗ್ಗೆಯೂ ಅವರು ಮಾತನಾಡಿದ್ದಾರೆ. ಅದರಿಂದ ಪ್ರಿಯಾಂಕಾಗೆ ವಿಪರೀತ ಕೋಪ ಬಂದಿದೆ. ಹೀಗಾಗಿ, ಚಂದ್ರಚೂಡ್ ಅವರ ಮಾತುಗಳಿಂದ ಮೊದಲಿಗೆ ಪ್ರಿಯಾಂಕಾ ಕಣ್ಣೀರು ಹಾಕಿದರು. ‘ನಾನು ಮತ್ತು ಶಮಂತ್ ಏನೇ ಮಾಡಿದರೂ ಅದನ್ನು ಕೇಳೋಕೆ ಇವರು ಯಾರು?’ ಎಂದು ಅಳುತ್ತಲೇ ತಮ್ಮ ನೋವು ತೋಡಿಕೊಂಡರು. ಶಮಂತ್ ಮತ್ತು ಪ್ರಶಾಂತ್ ಸಂಬರಗಿ ಬಳಿ ಅಳುತ್ತಾ ತಮ್ಮ ನೋವನ್ನ ತೋಡಿಕೊಳ್ತಿದ್ರು.
[widget id=”custom_html-4″]

ಆದರೆ, ಪ್ರಿಯಾಂಕಾ ಮಾತಿಗೆ ಚಂದ್ರಚೂಡ್ ಮತ್ತೆ ಪ್ರತ್ಯುತ್ತರ ನೀಡಲು ಬಂದಾಗ ಅವರ ತಾಳ್ಮೆಯ ಕಟ್ಟೆ ಒಡೆದಿದೆ. ‘ಕಣ್ಣಲ್ಲಿ ನೀರು ಹಾಕಿಕೊಂಡು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದೆಲ್ಲ ನಿಜವಾಗುವುದಿಲ್ಲ’ ಎಂದು ಚಕ್ರವರ್ತಿ ಏರು ಧ್ವನಿಯಲ್ಲಿ ಮಾತನಾಡಿದರು. ಅದಕ್ಕೆ ತಿರುಗೇಟು ನೀಡಿದ ಪ್ರಿಯಾಂಕಾ, ‘ನಾನು ಕಣ್ಣೀರು ಹಾಕಿಕೊಂಡು ನಾಟಕ ಮಾಡುತ್ತಿಲ್ಲ. ಬಾಯಿ ಮುಚ್ಚಿದರೆ ಸರಿ’ ಎಂದು ಕಿರುಚಾಡಿದರು. ಈ ವೇಳೆ ಅಲ್ಲಿದ್ದ ಉಳಿದ ಸ್ಪರ್ಧಿಗಳೆಲ್ಲಾ ಪ್ರಿಯಾಂಕಾ ಮತ್ತು ಚಂದ್ರಚೂಡ್ ನಡುವಿನ ಗ’ಲಾಟೆ ಬಿಡಿಸಲು ಮುಂದಾದ್ರು. ಈ ವೇಳೆ ಪ್ರಿಯಾಂಕಾ ಬಿಗ್ ಬಾಸ್ ಮನೆ ಒಳಗಿನಿಂದ ಆವರಣದ ಹೊರ ನಡೆದು, ಕುಳಿತರು. ಕೋಪದಿಂದ ಮಾತಾಡುತ್ತಲೇ ಇದ್ದ ಚಕ್ರವರ್ತಿ ಚಂದ್ರಚೂಡ ಅವರನ್ನ ಸಮಾಧಾನ ಪಡಿಸಲು ವೈಷ್ಣವಿ ಮುಂದಾದ್ರು. ಇದೇ ಮೊದಲು ನಟಿ ಪ್ರಿಯಾಂಕಾ ತಿಮ್ಮೇಶ್ ಅವರು ಉಗ್ರರೂಪ ತಳೆದಿದ್ದನ್ನ ಕಂಡು, ಬಿಗ್ ಬಾಸ್ ಮನೆಯ ಸದಸ್ಯರಂತೂ ನಿಜಕ್ಕೂ ಶಾಕ್ ಆಗಿದ್ರು.