ಡಿಂಪಲ್ ದಿವ್ಯಾ ಖ್ಯಾತಿಯ ಪಬ್ಲಿಕ್ ಟಿವಿ ನಿರೂಪಕಿಯ ಸಂಭಾವನೆ ಎಷ್ಟು ಗೊತ್ತಾ? ಇವರ ಗಂಡ ಹೇಗಿದ್ದಾರೆ ನೋಡಿ..

Kannada News
Advertisements

ಕನ್ನಡದ ನ್ಯೂಸ್ ಚಾನಲ್ ಗಳಲ್ಲಿ ಒಂದಾಗಿರುವ ಪಬ್ಲಿಕ್ ಟಿವಿಯಲ್ಲಿ ಬರುವ ರಾತ್ರಿ ಒಂಬತ್ತರ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ರಂಗಣ್ಣ ಅವರ ಜೊತೆ ಕಾಣಿಸಿಕೊಳ್ಳುವ ನಿರೂಪಕಿಯನ್ನ ನೀವು ನೋಡಿರುತ್ತೀರಿ. ರಂಗಣ್ಣ ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸುತ್ತಾ ಕುಳಿತಿರುತ್ತಾರೆ. ಆದರೆ ಸೋಷಿಯಲ್ ಮಿಡಿಯಾಗಳಲ್ಲಿ ಈ ನಿರೂಪಕಿ ಡಿಂಪಲ್ ದಿವ್ಯಾ ಅಂತಲೇ ಫೇಮಸ್ ಆಗಿದ್ದಾರೆ. ದಿವ್ಯ ಜ್ಯೋತಿ ಎನ್ನುವುದು ಈ ನಿರೂಪಕಿಯ ಪೂರ್ಣ ನಾಮದೇಯ ಆಗಿದ್ದು ಈಕೆಗಿನ್ನು ಕೇವಲ ೨೮ವರ್ಷ ವಯಸ್ಸು. ಬೆಂಗಳೂರಿನಲ್ಲೇ ಜನಿಸಿರುವ ದಿವ್ಯಾ ಬೆಂಗಳೂರಿನ ವಿದ್ಯಾಸಂಸ್ಥೆಯೊಂದರಲಿ ಬಿಕಾಂ ಪದವಿಯನ್ನ ಮುಗಿಸಿದ್ದಾರೆ.

[widget id=”custom_html-4″]

Advertisements

ದಿವ್ಯಾ ಅವರು ೨೦೦೭ರಲ್ಲಿ ಉದಯ ಮ್ಯೂಸಿಕ್ ವಾಹಿನಿ ಮೂಲಕ ಕಿರುತೆರೆಗೆ ನಿರೂಪಕಿಯಾಗಿ ಎಂಟ್ರಿ ಕೊಡುತ್ತಾರೆ. ಇದೆ ವಾಹಿನಿಯಲ್ಲಿ ಕೆಲ ವರ್ಷಗಳ ಕಾಲ ನಿರೂಪಕಿಯಾಗಿ ಕೆಲಸ ಮಾಡಿದ ಬಳಿಕ ಮಾಧ್ಯಮ ಲೋಕಕ್ಕೆ ಎಂಟ್ರಿ ಕೊಟ್ಟ ದಿವ್ಯಾ ಕೆಲ ನ್ಯೂಸ್ ಚಾನೆಲ್ ಗಳಲ್ಲಿ ಕೆಲಸ ಮಾಡುತ್ತಾರೆ. ಸುಮಾರು ಹತ್ತು ವರ್ಷಗಳ ಕಾಲ ನಿರೂಪಕಿಯಾಗಿ ಕೆಲಸ ಮಾಡಿ, ಸದ್ಯಕ್ಕೆ ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡುತ್ತಿರುವ ದಿವ್ಯಾ ಅವರಿಗೆ ಹೆಸರು, ಖ್ಯಾತಿ ತಂದು ಕೊಟ್ಟದ್ದು ಮಾತ್ರ ಪಬ್ಲಿಕ್ ಟಿವಿಯಲ್ಲಿ ಪ್ರತೀ ದಿನ ರಾತ್ರಿ ೯ಗಂಟೆಗೆ ಪ್ರಸಾರವಾಗುವ ಬಿಗ್ ಬುಲೆಟಿನ್ ಕಾರ್ಯಕ್ರಮ. ಪಬ್ಲಿಕ್ ಟಿವಿಯ ಚೀಪ್ ಎಡಿಟರ್ ಆಗಿರುವ HR ರಂಗನಾಥ್ ಅವರು ನಡೆಸಿಕೊಡುವ ಈ ಬಿಗ್ ಬುಲೆಟಿನ್ ನ್ಯೂಸ್ ನ್ನ ಲಕ್ಷಾಂತರ ಜನರು ವೀಕ್ಷಣೆ ಮಾಡುತ್ತಾರೆ. ಆದ್ದರಿಂದಲೇ ದಿವ್ಯಾ ಅವರು ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.

[widget id=”custom_html-4″]

ಇನ್ನು ೨೦೧೮ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ದಿವ್ಯ ಜ್ಯೋತಿ. ಅತ್ತ್ಯುತ್ತಮ ನಿರೂಪಕಿ ಎಂಬ ಪ್ರಶಸ್ತಿ ಪಡೆದುಕೊಂಡಿರುವ ದಿವ್ಯಾ ಅವರು ಪಬ್ಲಿಕ್ ಟಿವಿಯಿಂದ ಒಂದು ದಿನದ ಸಂಭಾವನೆಯಾಗಿ 5 ಸಾವಿರದವರೆಗೆ ಪಡೆಯುತ್ತಾರೆ ಎಂದು ಹೇಳಲಾಗಿದ್ದು, ತಿಂಗಳಿಗೆ ಒಂದು ಲಕ್ಷದ ಮೂವತ್ತು ಸಾವಿರದವರೆಗೂ ಸಂಭಾವನೆ ಪಡೆದುಕೊಳ್ಳುತ್ತಾರೆ ಎಂಬ ಮಾಹಿತಿ ಇದೆ. ಇನ್ನು ಮಾಹಿತಿಗಳ ಪ್ರಕಾರ ಇವರ ಒಟ್ಟು ನೆಟ್ ವರ್ತ್ ಮೂರು ಕೋಟಿಯವರೆಗೂ ಇದೆಯಂತೆ. ಮಾಧ್ಯಮ ವಿವಾಹಿನಿಯ ನಿರೂಪಕಿಯೊಬ್ಬರು ಇಷ್ಟೆಲ್ಲಾ ಸಂಭಾವನೆ ಪಡೆಯುತ್ತಾರೆ ಎಂದರೆ ಗ್ರೇಟ್ ಅಲ್ಲವೇ..ಸ್ನೇಹಿತರೇ, ನಿಮ್ಮ ಮೆಚ್ಚಿನ ನ್ಯೂಸ್ ಚಾನೆಲ್ ಯಾವುದೆಂದು ಕಾ’ಮೆಂಟ್ ಮಾಡಿ ತಿಳಿಸಿ..