ಸೋಷಿಯಲ್ ಮಿಡಿಯಾಗಳಲ್ಲಿ ಪುನೀತ್ ದರ್ಶನ್ ಫ್ಯಾನ್ಸ್ ವಾರ್..ಪೋಸ್ಟ್ ಹಾಕಿ ಮಾತಿನ ಸಮರ..

Cinema
Advertisements

ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅದ್ದೂರಿ ಚಿತ್ರ ಯುವರತ್ನ ಬಿಡುಗಡೆಯಾಗಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಾಮಾಜಿಕ ಸಂದೇಶವುಳ್ಳ ಅದ್ಭುತ ಚಿತ್ರವೆಂದು ಹೇಳಲಾಗುತ್ತಿದ್ದು, ಪುನೀತ್ ಅವರ ಡ್ಯಾನ್ಸ್, ಡೈಲಾಗ್ಸ್, ಫೈಟ್ಸ್ ನೋಡಿ ಅಪ್ಪು ಅಭಿಮಾನಿಗಳು ಸಂಭ್ರಮ ಪಡುತ್ತಿದ್ದಾರೆ. ಒಟ್ಟಿನಲ್ಲಿ ಕುಟುಂಬವೆಲ್ಲಾ ಕೂತು ನೋಡಬಹುದಾದ ಸಾಮಾಜಿಕ ಕಳಕಳಿಯುಳ್ಳ ಸದಭಿರುಚಿ ಚಿತ್ರವೆಂದು ಚಿತ್ರ ನೋಡಿದವರ ಅಭಿಪ್ರಾಯವಾಗಿದೆ. ಇನ್ನು ಕರ್ನಾಟಕ ಸೇರಿದಂತೆ ಆಂಧ್ರ ತೆಲಂಗಾಣ ರಾಜ್ಯಗಳಲ್ಲೂ ಸುಮಾರು ೬೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯುವರತ್ನ ಭರ್ಜರಿಯಾಗಿ ತೆರೆಕಂಡಿದೆ.

[widget id=”custom_html-4″]

Advertisements

ಆದರೆ ಇದರ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ಮಧ್ಯೆ ಫ್ಯಾನ್ಸ್ ವಾರ್ ಶುರುವಾಗಿದ್ದು ಸುಖಾ ಸುಮ್ಮನೆ ಕಾಮೆಂಟ್ ಗಳನ್ನ ಮಾಡಿಕೊಂಡು ಕ’ಚ್ಚಾಡುತ್ತಿದ್ದಾರೆ. ಹೌದು, ನಟ ದರ್ಶನ್ ಅವರ ಅಭಿಮಾನಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಭಕ್ತ ಪ್ರಹ್ಲಾದ ಚಿತ್ರದ ಎಡಿಟ್ ಮಾಡಲಾಗಿರುವ ಫೋಟೋವೊಂದನ್ನ ಪೋಸ್ಟ್ ಮಾಡಿದ್ದು, ಯುವರತ್ನ ಸಿನಿಮಾ ಕರ್ನಾಟಕದಲ್ಲಿ ಹೇಗೆ ಓಡುತ್ತಿದೆ ನೋಡಿ ಎಂದು ಬರೆದುಕೊಂಡಿದ್ದಾರೆ. ಇನ್ನು ಇದನ್ನ ನೋಡಿದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಮೊದಲು ಫೋಟೋವನ್ನ ಡಿಲೀಟ್ ಮಾಡುವಂತೆ ದರ್ಶನ್ ಅವರ ಅಭಿಮಾನಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಇದೆ ಸಮಯದಲ್ಲಿ ಇಬ್ಬರು ಸ್ಟಾರ್ ನಟರ ಫ್ಯಾನ್ ಗಳ ನಡುವೆ ಮಾತಿನ ಸ’ಮರದ ಕಾಮೆಂಟ್ ಗಳ ಸುರಿಮಳೆಯೇ ಆಗಿದೆ.

[widget id=”custom_html-4″]

ಸ್ನೇಹಿತರೇ, ಇಬ್ಬರ ಜ’ಗಳದಲ್ಲಿ ಮೂರನೆಯವನಿಗೆ ಲಾಭ ಎನ್ನುವಂತೆ ಪರಭಾಷೆಯ ಚಿತ್ರಗಳು ಬಂದು ಇಲ್ಲಿ ಗಲ್ಲಾಪೆಟ್ಟಿಗೆ ತುಂಬಿಸಿಕೊಂಡು ಹೋಗುವ ಹಾಗೆ ಮಾಡಬೇಡಿ. ಆ ಸ್ಟಾರ್ ಅಭಿಮಾನಿ ಈ ಸ್ಟಾರ್ ಅಭಿಮಾನಿ ಅಂತ ಕ’ಚ್ಚಾಡೋದನ್ನ ಬಿಟ್ಟು, ಎಲ್ಲಾ ನಟರ ಕನ್ನಡ ಚಿತ್ರಗಳನ್ನು ನೋಡಿ, ಕನ್ನಡ ಚಿತ್ರರಂಗ, ಕನ್ನಡ ಭಾಷೆ ಬೆಳೆಸಿ. ಇಡೀ ದೇಶದಲ್ಲಿ ಕನ್ನಡದ ಎಲ್ಲಾ ಚಿತ್ರಗಳು ಓಡುವಷ್ಟರ ಮಟ್ಟಿಗೆ ಸಹಕಾರ ನೀಡಿ. ದರ್ಶನ್ ಮತ್ತು ಪುನೀತ್ ಅವರ ಮಧ್ಯೆ ಉತ್ತಮ ಭಾಂದವ್ಯ ಇದೆ. ಯಾರೇ ಆಗಿರಲಿ ಅದನ್ನ ಕೆ’ಡಿಸುವ ಕೆಲಸ ಮಾಡಬೇಡಿ. ಇದರಿಂದ ಕನ್ನಡ ಚಿತ್ರರಂಗದಲ್ಲಿನ ಒಗ್ಗಟ್ಟು ಒಡೆದುಹೋಗಿ, ಮುಂದೊಂದು ದಿನ ಪರ ಭಾಷೆ ಚಿತ್ರಗಳ ಎದುರು ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲಿ ಥಿಯೇಟರ್ ಗಳು ಸಿಗದೇ ಹೋಗುವದರಲ್ಲಿ ಅನುಮಾನವೇ ಇಲ್ಲ. ಏನಂತೀರಾ ಸ್ನೇಹಿತರೆ..ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ತಿಳಿಸಿ..