ಸತ್ಯಜಿತ್ ನಿಧನದ ಬಳಿಕ ಅವರ ಕುಟುಂಬಕ್ಕೆ ಅಪ್ಪು ಎಷ್ಟು ಹಣ ನೀಡಿದ್ದರು ಗೊತ್ತಾ.?ಕಣ್ಣೀರಿಟ್ಟ ಸತ್ಯಜಿತ್ ಪುತ್ರ..

Cinema

ಸ್ನೇಹಿತರೆ ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ಎಲ್ಲರಿಂದ ದೈಹಿಕವಾಗಿ ದೂರ ಹೋಗಿದ್ದಾರೆ. ಪುನೀತ್ ಕೇವಲ ತೆರೆಯ ಮೇಲೆ ಮಾತ್ರ ಅವರ ಸ್ಟಾರ್ ಗಿರಿ ತೋರಿಸಿರಲಿಲ್ಲ. ಬದಲಿಗೆ ಈ ನಿಜ ಜೀವನದಲ್ಲಿ ಮನುಷ್ಯ ಹೇಗಿರಬೇಕು, ಯಾವ ರೀತಿ ಕಷ್ಟ ಎಂದವರಿಗೆ ಸಹಾಯ ಮಾಡಬೇಕು, ಮೌಲ್ಯದ ಗುಣಗಳೆಂದರೆ ಏನು, ಸರಳತನ ಎಂದರೇನು ಎಂಬುದಾಗಿ ತೋರಿಸಿಕೊಟ್ಟವರು. ಹಾಗೆ ಸಹಾಯ ಮಾಡಿದ್ದು ಯಾರಿಗೂ ಗೊತ್ತಾಗದ ಹಾಗೆ ಮಾಡುವುದು ಒಳ್ಳೆಯದು ಎಂದು ತೋರಿಸಿಕೊಟ್ಟವರು. ಅಕ್ಟೋಬರ್ 29 ನೇ ತಾರೀಕು ಪುನೀತ್ ರಾಜಕುಮಾರ್ ಅವರು ಇನ್ನಿಲ್ಲ ಎಂದಕೂಡಲೇ, ಸಾಕಷ್ಟು ಜನರಿಗೆ, ಹಾಗೂ ಇವರ ಅಭಿಮಾನಿಗಳಿಗೆ, ಇದನ್ನು ನಂಬಲಿಕ್ಕೆ ಆಗಲಿಲ್ಲ.

ಕರ್ನಾಟಕದ ಜನತೆಗೆ ಇದೊಂದು ದೊಡ್ಡ ನೋವಿನ ವಿಷಯ ಆಗಿತ್ತು. ಪುನೀತ್ ಅವರ ಅಗಲಿಕೆ ಯಾರು ಕೂಡ ಇಂದಿಗೂ ನಂಬುತ್ತಿಲ್ಲ. ಅಷ್ಟು ನೋವು ಪುನೀತ್ ಅವರ ಅಗಲಿಕೆಯಿಂದ ಆಗಿದೆ. ಪುನೀತ್ ಅವರ ಬಗ್ಗೆ ಹೇಳುತ್ತಾ ಹೋದರೆ, ಕೇವಲ ಕೆಲವೊಂದು ಮಾತಿನಲ್ಲಿ, ಒಂದು ವಿಚಾರದಲ್ಲಿ ಮುಗಿಯುವುದಿಲ್ಲ. ಅವರು ಮಾಡಿದ ಸಾಮಾಜಿಕ ಕಾರ್ಯಗಳು ಈಗ ಹೆಚ್ಚು ಮಾತನಾಡುತ್ತಿವೆ. ಅವರಿಂದ ಸಹಾಯ ಪಡೆದವರು ಇದೀಗ ಕಣ್ಣೀರಿಡುತ್ತಾ ಪುನೀತ್ ಬಗ್ಗೆ ನೋ’ವಿನಲ್ಲಿ ಅವರು ಮಾಡಿದ ಸಹಾಯ ವಿಚಾರಗಳ ಮಾತನಾಡಿ, ಹಾಗೂ ಕಷ್ಟ ಎಂದವರಿಗೆ ಅವರ ಮಿಡಿದ ಹೃದಯದ ಬಗ್ಗೆ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಹೌದು ಕನ್ನಡದ ಪೋಷಕ ನಟ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ ನಟ ಸತ್ಯಜಿತ್ ಅವರ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಇತ್ತೀಚಿಗಷ್ಟೇ ಪುನೀತ್ ಅವರು ಸಾವನ್ನಪ್ಪುವ ಮುಂಚೆ ಸತ್ಯಜಿತ್ ಅವರು ಕೂಡಾ ಸಾವನ್ನಪ್ಪಿದ್ದರು. ಅಂದು ಸತ್ಯಜಿತ್ ಅವರ ಮರಣದ ದಿನ ಮಾಧ್ಯಮದವರು, ನಟ ಪುನೀತ್ ಅವರಿಗೆ ಪ್ರಶ್ನೆ ಮಾಡಿದಾಗ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರು ತುಂಬಾ ಅತ್ಯದ್ಭುತ ಕಲಾವಿದ ಎಂದು ಮಾತ್ರವಷ್ಟೇ ಹೇಳಿದ್ದರು. ಆದರೆ ಎಲ್ಲಾ ಕಾರ್ಯಗಳು ಮುಗಿದ ಬಳಿಕ ಸತ್ಯಜಿತ್ ಅವರ ಮನೆಗೆ ಭೇಟಿ ನೀಡಿ, ಪುನೀತ್ ಅವರು ಸತ್ಯಜಿತ್ ಅವರ ಮಗನಿಗೆ ಅವರ ತಂದೆಯ ಕಾರ್ಯಕ್ಕೆ 5ಲಕ್ಷ ಹಣಕೊಟ್ಟು ಬಂದಿದ್ದರಂತೆ. ಈ ವಿಚಾರ ಇದೀಗ ಪುನೀತ್ ಅವರು ಇಲ್ಲವಾದ ಬಳಿಕ ಸತ್ಯಜಿತ್ ಅವರ ಪುತ್ರ ಹೇಳಿಕೊಂಡು ಪುನೀತ್ ಅವರು ಮಾಡಿದ್ದ ಸಹಾಯ ನೆನೆಸಿ ಕಣ್ಣಿರು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಅವರ ಬಗ್ಗೆ ನಿಮ್ಮ ಅನಿಸಿಕೆ ಏನೆಂಬುದನ್ನು ಸಹ ಕಮೆಂಟ್ ಮಾಡಿ ಧನ್ಯವಾದಗಳು…